Friday, 28 April 2023

ಒಂದು ಓಟಿನ ಕಥೆ

 ಒಂದು ಓಟಿನ ಕಥೆ

ದೊಡ್ಡ ದೊಡ್ಡ ಚುನಾವಣೆಗಳಲ್ಲಿ, ಒಂದು ಓಟಿನ ಬಗ್ಗೆ ಯಾರು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮತದಾರನು ಕೂಡ, ನನ್ನೊಬ್ಬನ ಓಟಿನಿಂದ ಏನು ಬದಲಾಗುತ್ತದೆ, ಎಂಬ ಮನೋಭಾವವನ್ನು ಕೂಡ ಹೊಂದಿರುತ್ತಾನೆ. ನಾನಿಂದು ನಿಮಗೆ ಒಂದು ಓಟಿನ ಕಥೆಯನ್ನು ಹೇಳ್ತಾ ಇದ್ದೀನಿ. ಒಂದು ಓಟು ಭಾರತದ ರಾಜಕಾರಣದಲ್ಲಿ ಮಾಡಿದ ಬದಲಾವಣೆಗಳು ಏನು? ಅನ್ನುವುದನ್ನು ತಿಳಿಯಲು, ಭಾರತದ ರಾಜಕಾರಣದ ಇತಿಹಾಸದ ಪುಟಗಳನ್ನ ತಿರುವಿ ನೋಡಿದಾಗ, ಒಂದು ಓಟಿನ ಮಹತ್ವದ ಅರಿವು ನಮಗಾಗುತ್ತದೆಒಂದು ವೋಟಿನಿಂದ ಕೇಂದ್ರದಲ್ಲಿ ಸರ್ಕಾರವೇ ಬಿದ್ದಿದ್ದು ಇದೆ. ಒಂದೇ ಒಂದು ವೋಟಿನಿಂದ ಮುಖ್ಯಮಂತ್ರಿಯ ಸ್ಥಾನವನ್ನ ಕಳೆದುಕೊಂಡಿದ್ದು ಇದೆ. ಒಂದೇ ಒಂದು ಓಟಿನಿಂದ ತಮ್ಮ ಧೈರ್ಯ ಮತ್ತು ನಿಷ್ಠುರದ ನಿಲುವನ್ನ ಪ್ರದರ್ಶನ ಮಾಡಿದ್ದು ಕೂಡ ಸಾಕ್ಷಿಯಾಗಿದೆಕುತೂಹಲಕಾರಿಯಾದ ಒಂದು ಓಟಿನ ಕಥೆಯನ್ನ ವಾಜಪೇಯಿ ಅವರ ಸರ್ಕಾರದಿಂದ ಪ್ರಾರಂಭಿಸೋಣ. 17 ಎಪ್ರಿಲ್‌ 1999 ರಲ್ಲಿ ನಡೆದ  ಅವಿಶ್ವಾಸ ನಿರ್ಣಯದಲ್ಲಿ ವಾಜಪೇಯಿ ಸರ್ಕಾರ ಒಂದು ಮತದಿಂದ ಬಿದ್ದು ಹೋಗಿತ್ತು. ಹಿಂದೆ ಯಾವುದೇ ಸರ್ಕಾರವು ತನ್ನ ಬಹುಮತವನ್ನು ಒಂದು ಮತದಿಂದ ಕಳೆದುಕೊಂಡಿರಲಿಲ್ಲ

ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ, ಅಚ್ಚರಿ ಮತ್ತು ಆಘಾತದ ಲಿತಾಂಶ ನೀಡಿದ, ಘಟನೆಯಿಂದಾಗಿ ಜನತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಓಟಿಗೂ, ಅದರದೇ ಆದ ಮೌಲ್ಯವಿದೆ ಅನ್ನುವುದನ್ನ ರಾಜಕೀಯ  ಪಕ್ಷಗಳಿಗೆ, ಮತ್ತು ಸಾಮಾನ್ಯ ಜನರಿಗೆ ತೋರಿಸಿಕೊಟ್ಟ ಪ್ರಸಂಗವಿದು.  ದೇಶ ಮತ್ತು ರಾಜ್ಯದ ಚುನಾವಣಾ ಇತಿಹಾಸದಲ್ಲಿ ಓಟುಗಳು ಅಚ್ಚರಿ ಮತ್ತು ಆಘಾತದ ಲಿತಾಂಶ ಕೊಟ್ಟ ಅನೇಕ ಉದಾಹರಣೆಗಳಿವೆ. ಕೇವಲ ಒಂದು ಮತದಿಂದ ಸೋತವರು, ಅತಿ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘಇತಿಹಾಸವಿದೆ

ಒಂದು ಓಟಿನ ಮಹತ್ವ ಎಷ್ಟು ಅನ್ನುವುದು ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಗೊತ್ತಾಗಿದ್ದು 2004ರಲ್ಲಿ. ಆಗ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಕೇವಲ ಒಂದು ಮತದಿಂದ ಸೋತ ಜೆಡಿ.ಎಸ್ .ಆರ್‌.ಕೃಷ್ಣಮೂರ್ತಿ ಇತಿಹಾಸ ಬರೆದು ಬಿಟ್ಟರು. ಕಾಂಗ್ರೆಸ್ನಿಂದ ಗೆದ್ದ ಆರ್‌.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 40, 751 ಓಟುಗಳನ್ನು ಪಡೆದು ಕೇವಲ ಒಂದು ಓಟಿನ ಅಂತರದಿಂದ ಸೋತಿದ್ದರು. ವಿಪರ್ಯಾಸವೆಂದರೆ ದಿನ ಅವರ ವಾಹನ ಚಾಲಕ ಮತ ಚಲಾವಣೆ ಮಾಡಿರಲಿಲ್ಲ.   

ಅದೇ ರೀತಿ, 2008ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ಸಮಿತಿ ಅಧ್ಯಕ್ಷರಾಗಿದ್ದ, ಸಿ.ಪಿ.ಜೋಶಿಯವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು. ಆದರೆ ದುರದೃಷ್ಟವಶಾತ್ಜೋಶಿಯವರು ಕೇವಲ ಒಂದು ಓಟಿನಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣಸಿಂಗ್ಚೌಹಾಣ್ವಿರುದ್ಧ ಸೋತಿದ್ದರು. ಇಲ್ಲೂ ವಿಪರ್ಯಾಸದ ಸಂಗತಿಯೆಂದರೆ, ಮತದಾನದ ಸಮಯದಲ್ಲಿ ಜೋಶಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ದೇವಸ್ಥಾನಕ್ಕೆ ಹೋಗಿದ್ದರು.

2017ರಲ್ಲಿ ಗುಜರಾತ್ ರಾಜ್ಯದಿಂದ ರಾಜ್ಯಸಭೆ ನಡೆದ ಚುನಾವಣೆಯಲ್ಲಿ ಅಹಮದ್ ಪಟೇಲ್ ಅವರ ವಿರುದ್ಧ ಅವರದೇ ಪಕ್ಷದ ಇಬ್ಬರು ಸದಸ್ಯರು ಅಡ್ಡ ಮತದಾನವನ್ನು ಮಾಡಿದ್ದರು. ಆದರೆ ಮತದಾನ ಮಾಡುವಾಗ ತಮ್ಮ ಮತವನ್ನು ಸಾರ್ವಜನಿಕರಿಗೆ ತೋರಿಸಿದರು. ಹೀಗಾಗಿ ಎರಡು ಮತಗಳು ಅನರ್ಹ ವಾದವು. ಒಟ್ಟು ಮತಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಅಹಮದ್ ಪಟೇಲ್ ಚುನಾವಣೆಯಲ್ಲಿ ಗೆದ್ದರು.

ಇಂಗ್ಲೆಂಡ್ ನಲ್ಲಿ 1979 ಮಾರ್ಚ್ 28ರಂದು ಲೇಬರ್ ಪಕ್ಷದ ಜೇಮ್ಸ್ ಕ್ಯಾಲಘನ್ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಮತವನ್ನ ವಿರೋಧ ಪಕ್ಷದ ನಾಯಕಿಯಾದ ಮಾರ್ಗರೇಟ್ಯಾಚಾರ್ ಅವರು ಮಂಡಿಸಿದ್ದರುಸರ್ಕಾರದ ಪರ 310 ಮತಗಳು ಬಂದರೆ ವಿರುದ್ಧವಾಗಿ 311 ಮತಗಳು ಬಿದ್ದಿದ್ದವು. ಒಂದು ಮತದಿಂದ ಜೇಮ್ಸ್ ಕ್ಯಾಲಿಗನ್ ಅವರ ಸರ್ಕಾರ ಬಿದ್ದುಹೋಗಿತ್ತು

1876 ರಲ್ಲಿ ನಡೆದ ಅಮೆರಿಕೆಯ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ರುದರ್ಫೋರ್ಡ್ ಬಿ. ಹೇಯ್ಸ್ ಅವರು ಕೇವಲ ಒಂದು ಮತದ ಅಂತರದಿಂದ ಡೆಮೋಕ್ರಾಟ್ ಸ್ಯಾಮ್ಯುಯೆಲ್ ಟಿಲ್ಡೆನ್  ಅವರನ್ನ ಸೋಲಿಸಿದ್ದರು.

 ಜರ್ಮನಿಯಲ್ಲಿ 1919ರಲ್ಲಿ ನಾಜಿ ಪಾರ್ಟಿಯ ಸ್ಥಾಪನೆಯಾಗಿತ್ತು 1921 ರಲ್ಲಿ ಹಿಟ್ಲರ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರವನ್ನು ಸ್ವೀಕರಿಸುತ್ತಾನೆ. ಹಿಟ್ಲರ್ ಮಹತ್ವಾಕಾಂಕ್ಷೆಯನ್ನರಿತ  ಪಕ್ಷದ ಸದಸ್ಯರು ಅವನಿಗೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಹಿಟ್ಲರ್ ಪಾರ್ಟಿ ಬಿಟ್ಟು ಹೋದಾಗ ಪಕ್ಷ ದುರ್ಬಲವಾಗುತ್ತದೆ. ತನ್ನದೇ ಆದ ಕೆಲವು ಶರತ್ತುಗಳನ್ನ ಮುಂದಿಟ್ಟು ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಾನೆ  ಹಿಟ್ಲರ್ ಅದೆ ವರ್ಷ ಜುಲೈ 27ರಂದು ನಡೆಯುವ ಚುನಾವಣೆಯಲ್ಲಿ ಹಿಟ್ಲರ್ ಪರವಾಗಿ 53 ಮತಗಳು ಬಂದರೆ ವಿರುದ್ಧವಾಗಿ ಒಂದು ಮತ ಬರುತ್ತದೆ ಒಂದು ಮತ ಮತದಾರನ ಧೈರ್ಯ ಮತ್ತು ನಿಷ್ಠುರದ ನಿಲುವನ್ನ ಪ್ರದರ್ಶನ ಮಾಡಿತ್ತು.  ಪ್ರಜಾಪ್ರಭುತ್ವ ಎಂಬ ಭವ್ಯ ಬಂಗಲೆಗೆ ಮತಗಳೇ ಅಡಿಪಾಯ. ಕಟ್ಟಡ ಗಟ್ಟಿಯಾಗಿರಲು ಒಂದೊಂದು ಇಟ್ಟಿಗೆಯೂ ಮುಖ್ಯ. ಅದರಂತೆ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಒಂದೊಂದು ಓಟು ಸಹ ನಿರ್ಣಾಯಕವಾಗುತ್ತದೆ. ಜನತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಓಟಿಗೂ ಅದರದೇ ಆದ ಮೌಲ್ಯವಿದೆ. ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುವುದು ಸಹ ಮತಗಳೇ.

No comments:

Post a Comment