ಮಾದಕವ್ಯಸನ
ಮನುಷ್ಯನು ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ . ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಇನ್ನಅಷ್ಟು ಬೇಕೆಂಬ ಆಸೆ . ಇನ್ನಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ . ಆ ವಸ್ತುವಿನ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲಾ ಒಗ್ಗಿ ಹೋಗಿರುತ್ತವೆ . ಇಂದು ಇಂಥ ಅನೇಕ ಚಟಗಳಿಗೆ ನಮ್ಮ ಯುವ ಸಮುದಾಯ ಬಲಿಯಾಗಿದೆ .
ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು . ಇದು ಗಂಡು – ಹೆಣ್ಣು , ಬಡವ – ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ . ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ , ಮದ್ಯ , ತಂಬಾಕು , ಗಾಂಜಾ , ಕೋಕೇನ್ , ಓಪಿಯಮ್ , ಆಂಫಿಟಮೈನ್ , ಹಿರಾಯಿನ್ , ಎಲ್.ಎಸ್.ಡಿ. , ಪಿ.ಸಿ.ಪಿ. , ನಿದ್ದೆ ಮಾತ್ರೆಗಳು , ವೈಟನರ್ , ಪೆಟ್ರೋಲಿಯಮ್ ಉತ್ಪನ್ನಗಳು , ಇತ್ಯಾದಿ .
ಇಂತಹ ಸ್ಥಿತಿಯನ್ನು ಮತ್ತೆ ಮತ್ತೆ ತಲುಪಬೇಕೆಂಬ ಆಸೆಯೇ ಚಟ , ಈ ಡ್ರಗ್ಸ್ಗಳಲ್ಲಿ ಅನೇಕ ಗುಂಪುಗಳಿವೆ . ಟ್ರಾಂಕ್ವಿಲೈಸರ್ , ಎನ್ರೈಸರ್ ಮತ್ತು ಸೈಕೋಮಿಮೆಟಕ್ ಎಂಬುದಾಗಿ ಇದರಲ್ಲಿ ಮೂರು ಗುಂಪುಗಳಿವೆ . ಎಲ್.ಎಸ್.ಡಿ , ಹೆರಾಯಿನ್ ಮುಂತಾದ ನಾರೆಟಿಕ್ ಈ ಗುಂಪಿಗೆ ಸೇರಿದವು . ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಇಂಥ ವಸ್ತುಗಳ ಕಳ್ಳಸಾಗಣೆ ಮತ್ತು ಸೇವನೆ ಅಪಾಯಕಾರಿ ಮಟ್ಟದಲ್ಲಿ ಬೆಳೆದಿದೆ .
ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು:
ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂಥ ಚಟಗಳಲ್ಲಿ ಮುಖ್ಯವಾದವು ಡ್ರಗ್ಸ್ ಸೇವನೆ . ಇಲ್ಲಿ ಡ್ರಗ್ಸ್ ಎಂದರೆ ಮಾದಕ ಉತ್ತೇಜಕ ಪದಾರ್ಥ . ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ . ಮಾದಕ ವಸ್ತುಗಳು ಕೆಮಿಕಲ್ ಗಳಾಗಿದ್ದು ಅವು ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಡ್ರಗ್ಸ್ ವ್ಯಸನಿಗಳು ಅದರಿಂದ ಸಿಗುವ ಉನ್ಮಾದದ ಮೇಲೆ ಮಾತ್ರ ಆಕರ್ಷಿತರಾಗಿರುತ್ತಾರೆ. ಆದರೆ ವೈಯಕ್ತಿಕ ಬದುಕು ಮತ್ತು ಪ್ರೊಫೆಷನಲ್ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾಕೆಂದರೆ, ಅವರು ವ್ಯಸನದ ಮೇಲೆಯೇ ತಮ್ಮೆಲ್ಲಾ ಗಮನ ಹರಿಸುತ್ತಾರೆ. ಈ ವ್ಯಸನವು ಕ್ರಮೇಣವಾಗಿ ಅವರ ಕೆಲಸ ಮತ್ತು ಆತ್ಮೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
ಮದ್ಯ ವ್ಯಸನಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ ಎಂದರೆ ಲಿವರ್ಗೆ ಹಾನಿಯಾಗುವುದು. ತಂಬಾಕು ಸೇವನೆ ಮಾಡುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತದೆ. ಡ್ರಗ್
ಬಳಸುವವರ ನರಮಂಡಲಗಳಿಗೆ ಹಾನಿಯಾಗುತ್ತದೆ. ವ್ಯಕ್ತಿಯು ಮದ್ಯ ಹಾಗೂ ತಂಬಾಕು, ಎರಡೂ ವ್ಯಸನಕ್ಕೆ ಒಳಗಾದರೆ ಅವರ ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗುವ ಅಪಾಯ ಅಧಿಕವಾಗಿರುತ್ತದೆ.
ಅತಿಯಾದ ಡ್ರಗ್ ಸೇವನೆ ವ್ಯಕ್ತಿಗಳ ವರ್ತನೆಯ ಮೇಲೆ ಪ್ರಭಾವ ಬೀರುವುದರಿಂದ, ಹಿಂಸೆ, ಎಚ್ಚರಿಕೆ ಇಲ್ಲದ ವಾಹನ ಚಾಲನೆ, ಅಪಘಾತ, ಅಸಭ್ಯ ಲೈಂಗಿಕ ವರ್ತನೆ ಹಾಗೂ ಕೌಟುಂಬಿಕೆ ಹಿಂಸೆಯ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಮಾದಕ ವ್ಯಸನಕ್ಕೆ ಬಲಿಯಾದವರು ಪ್ರತಿದಿನ ಜನರೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ, ಹೊಡೆಯಲು ಪ್ರಾರಂಭಿಸುತ್ತಾರೆ, ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಕೆಲಸ ಮಾಡುವಾಗ ಅಪಘಾತಕ್ಕೀಡಾಗುವುದು, ಸಸ್ಪೆಂಡ್ ಆಗುವುದು, ಪದೇ ಪದೇ ಕೆಲಸ ಬದಲಾಯಿಸುವುದು, ಕೆಲಸ ಬಿಡುವುದು, ಕೆರಳುವ ಮತ್ತು ಕೋಪದ ಸ್ವಭಾವವನ್ನು ತೋರಿಸುತ್ತಾರೆ. ವಿದ್ಯಾವಂತರೇ ಅನೇಕ ಕಾರಣಗಳಿಂದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ,
ಮಾದಕ ವ್ಯಸನವಿಂದು ಯುವ ಸಮುದಾಯದ ಪಿಡುಗಾಗಿ ರೂಪಗೊಂಡಿದೆ.
ಹಿಂದಿನ ಕಾಲದಲ್ಲಿದ್ದ ಹಾಗೆ ಹೊಟ್ಟೆಪಾಡಿಗಾಗಿ ಹೆಚ್ಚಿನ ಯುವ ಜನರು ಹೋರಾಡಬೇಕಿಲ್ಲ. ಬಹಳಷ್ಟು ಜನರು, ಕೇವಲ ಹೊಟ್ಟೆಪಾಡಿನ ಬದುಕಿನಿಂದ ಹೊರಬಂದಿದ್ದಾರೆ. ಅದರಿಂದ ಹೊರಬಂದಾಗ, ಅವರಿಗೆ ಆಸಕ್ತಿ ತರಿಸುವಂತಹ, ಅವರು ಬಹಳ ಇಷ್ಟ ಪಡುವ ಬೇರೆ ವಿಷಯಗಳನ್ನು ಅವರು ಹುಡುಕಿಕೊಳ್ಳಬೇಕು. ಅದು ಆಗದಿದ್ದರೆ, ಭೋಗಸುಖದ ಮತ್ತು ಮಾದಕತೆಯ ಅಗತ್ಯ ಸಹಜವಾಗಿಯೇ ಹೆಚ್ಚಾಗುತ್ತದೆ. ಇನ್ನೊಂದು ಕಾರಣವೇನೆಂದರೆ, ಈಗ ಹೆಚ್ಚಾಗಿ, ತಂದೆತಾಯಿಗಳಿಬ್ಬರೂ ಕೆಲಸ ಮಾಡುತ್ತಿರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಒಂದು ಮಗುವಿಗೆ ಅವಶ್ಯವಾಗಿ ಸಿಗಬೇಕಾದ ಗಮನ ಮಕ್ಕಳಿಗೆ ಸಿಗುತ್ತಿಲ್ಲ. ಆದ್ದರಿಂದ, ಸಹಜವಾಗಿಯೇ, ಅವರು ಅನೇಕ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ, ಇವರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ.
ಇಂಥ ಸಂದರ್ಭದಲ್ಲಿ ಯುವಜನತೆ ದುಶ್ಚಟಗಳಿಗೆ ದಾಸ್ಯರಾಗದಂತೆ ಅವರನ್ನ ಜಾಗೃತಗೊಳಿಸುವ ಪ್ರಯತ್ನವನ್ನೂ ಮಾಡಬೇಕಾಗಿದೆ .
No comments:
Post a Comment