ವಿಜ್ಞಾನವೊಂದು
ಸತ್ಯದ ಹುಡುಕಾಟ! ಸತ್ಯವೆನ್ನುವುದು ಹೋಗಲು ಹಾದಿಗಳಿಲ್ಲದ ನಾಡು, ತತ್ವ ನಂಬಿಕೆ ಅಥವಾ ಕರ್ಮಾಚರಣೆಗಳಿಂದ
ನಾವು ಆಸೀಮೆಯನ್ನು ತಲುಪಲು ಸಾಧ್ಯವಿಲ್ಲ. ತಾತ್ವಿಕ ತಿಳುವಳಿಕೆಯೊಂದೆ ಅಲ್ಲಿಗೆ ದಾರಿ ತೋರಿಸುವುದು.ನಮ್ಮ
ತಿಳಿವಿನ ಪರಿಧಿಯನ್ನು ವೃಧ್ದಿಸುವ ಉದ್ದೇಶವೆ ಈ ಬರವಣಿಗೆಯದ್ದು.
ಬೆಳಕು ಭೇದಿಸದ ಜಾಗವಿಲ್ಲ. ಹೀಗಾಗಿ ಬ್ರಹ್ಮಾಂಡದಲ್ಲಿ ಬೆಳಕು ಸಮಯದ ನಿರ್ಧಾರಕ್ಕೆ ಕಾರಣವಾಗಿದೆ. ಆದರೆ ಕಪ್ಪು ರಂಧ್ರಗಳನ್ನ ಬೆಳಕಿಗೂ ಭೇದಿಸಲು ಆಗಿಲ್ಲ. ಹೀಗಾಗಿ ಕಪ್ಪು ರಂಧ್ರಗಳಲ್ಲಿ ಸಮಯವೆನ್ನುವುದೆ ಇಲ್ಲ. ಬೆಳಕಿಲ್ಲದ ಜಾಗವನ್ನು ನಾವು ಕತ್ತಲು ಎನ್ನುತ್ತೇವೆ. ಕತ್ತಲು ಅಂದರೆ ಕಪ್ಪು. ಈ ಕಾರಣದಿಂದಾಗಿ ಇವುಗಳನ್ನು ಕಪ್ಪು ರಂಧ್ರಗಳು ಎಂದು ಕರೆಯುತ್ತಾರೆ. ಹಾಗಿದ್ದರೆ ಈ ಕಪ್ಪು ರಂಧ್ರಗಳ ಒಡಲಲ್ಲಿ ಏನಿದೆ? ಇವುಗಳ ಸೃಷ್ಟಿ. ಇರುವಿಕೆ ಮತ್ತು ಇವುಗಳಲ್ಲಿನ ರಹಸ್ಯಗಳ ಮೇಲೆ ಬೆಳಕು ಚೆಲ್ಲುವುದರಿಂದ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲಾಗುವುದೆ ? ಎಂಬ ಹಲವು ಜಿಜ್ಞಾಸೆಗಳು ವಿಜ್ಞಾನಿಗಳಲ್ಲಿದೆ.
26 ಸಾವಿರ ಬೆಳಕು ವರ್ಷಗಳಷ್ಟು ದೂರ ಬ್ರಹ್ಮಾಂಡದ ಮಧ್ಯ ಭಾಗದ ವರೆಗೆ ಕ್ರಮಿಸಿ ಅಲ್ಲಿನ ಒಂದು ಸುಂದರ view point ನಲ್ಲಿ ನಿಂತು ರಾತ್ರಿಯ ಹೊತ್ತು ಬ್ರಹ್ಮಾಂಡವನ್ನು ನೋಡುತ್ತಿದ್ದೇವೆ ಎಂದು ಭಾವಿಸಿ ಕೊಳ್ಳಿ. ಸಾವಿರಾರು ಮಿಲಿಯನ್ ಗಟ್ಟಲೆ ನಕ್ಷತ್ರಗಳ ರಮಣೀಯ ದೃಶ್ಯ ಕಾಣುತ್ತದೆ. ನಿಮ್ಮನ್ನು ಸುತ್ತುವರೆದ ನಕ್ಷತ್ರ ಪುಂಜಗಳ ವಿಹಂಗಮ ನೋಟದ ಮಧ್ಯದಲ್ಲಿ ಪ್ರಕಾಶಮಾನವಾದ ಅಪರಿಚಿತ ಬೆಳಕಿನ ಉಂಡೆಯೊಂದು ಉಗಮಿಸುತ್ತದೆ. ಅದರ ಗುರುತ್ವಾಕರ್ಷಣೆಯ ಬಲದಿಂದ ತಪ್ಪಿಸಿ ಕೊಳ್ಳಲು ಅಲ್ಲಿನ ಯಾವ ವಸ್ತುಗಳಿಗೂ ಆಗುತ್ತಿಲ್ಲ ಬೆಳಕಿಗೂ ಕೂಡಾ. ಅಪರಿಮಿತವಾದ ವೇಗದಲ್ಲಿ ತನ್ನ ಸುತ್ತಲಿನ ನಕ್ಷತ್ರಗಳನ್ನು ನುಂಗುತ್ತಾ ಗಾತ್ರದಲ್ಲಿ ದೊಡ್ಡದಾಗುತ್ತಾ ಸಾಗುತ್ತಿರುವ ಆ ದೈತ್ಯ ವಸ್ತುವೆ ಬ್ಲ್ಯಾಕ್ ಹೋಲ್.
ನಮ್ಮ ಸೌರ ಮಂಡಲದಲ್ಲಿನ ಸೂರ್ಯನಿಗಿಂತ ಇದು ಗಾತ್ರ ಮತ್ತು ಭಾರದಲ್ಲಿ 10 ಪಟ್ಟು ದೊಡ್ಡದು. ಇಂತಹ ಅನಾಹುತಕಾರಿ ಸಾವಿರಾರು ಕಪ್ಪು ರಂಧ್ರಗಳು ಆಕಾಶ ಗಂಗೆಯಲ್ಲಿವೆ. ನಮ್ಮ ಬ್ರಹ್ಮಾಂಡದ ಮಧ್ಯ ಬಾಗದಲ್ಲೂ ಒಂದು ಬ್ಲಾಕ್ ಹೋಲ್ ಇದೆ. ಇಂತಹ ಅನಾಹುತಕಾರಿ ಬ್ಲಾಕ್ ಹೋಲಗಳು ಹುಟ್ಟಿದ್ದು ಹೇಗೆ ? ಗಾತ್ರದಲ್ಲಿ ಇಷ್ಟು ದೊಡ್ಡದಾಗಿದ್ದು ಹೇಗೆ ? ಇವುಗಳ ಜೀವಿತಾವಧಿ ಎಷ್ಟು? ಏನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟರೆ ನಮಗೆ ಸೌರಮಂಡಲದ ಉಗಮ, ನಕ್ಷತ್ರಗಳ ರಚನೆ, ಅಷ್ಟೆ ಅಲ್ಲ ಭೂಮಿ ಮೇಲೆ ಬದುಕು ವಿಕಾಸಗೊಂಡ ಬಗ್ಗೆ ಇರುವ ಎಲ್ಲ ರಹಸ್ಯಗಳು ಬಯಲಾಗುತ್ತವೆ.
ಕಣ್ಣಿಗೆ ಕಾಣದ ನಮ್ಮ ಸೌರಮಂಡಲದಿಂದ ಸಾವಿರಾರು ಲಕ್ಷ ಬೆಳಕು ವರ್ಷಗಳಷ್ಟು ದೂರವಿರುವ ಈ ಬ್ಲಾಕ್ ಹೋಲಗಳ ಅಧ್ಯಯನವು ಖಗೋಳ ಶಾಸ್ತ್ರದ ವಿಜ್ಞಾನಿಗಳಿಗೆ ಸದಾಕಾಲಕ್ಕೂ ಸವಾಲಿನ ಸಂಗತಿ. ಅವಿಷ್ಕಾರಗಳಿಗೆ ಸವಾಲುಗಳೆ ಪ್ರೇರಣೆಗಳು. ಮನುಷ್ಯನ ಅನಂತ ಹುಡುಕಾಟಗಳಿಗೆ ನಮ್ಮ ಪ್ರಕೃತಿ ಮತ್ತು ಪರಿಸರ ಎಲ್ಲ ಕಾಲಕ್ಕೂ ಸಹಾಯ ಮಾಡುತ್ತಾ ಬಂದಿದೆ. ತನ್ನಲ್ಲಿ ಅಡಗಿರುವ ನಿಗೂಢತೆಯನ್ನ ಅಧ್ಯಯನಮಾಡಲು ಕೆಲ ಒಮ್ಮೆ ಬ್ರಹ್ಮಾಂಡವು ಅವಕಾಶ ಮಾಡಿ ಕೊಡುತ್ತದೆ.
19ನೇ ಮಾರ್ಚ 2008 ರಂದು ವಿಶ್ವದ ಎಲ್ಲೇಡೆ ಇರುವ ಖಗೋಳ ಶಾಸ್ತ್ರದ ವಿಜ್ಞಾನಿಗಳಿಗೆ ಅಧ್ಯಯನದ ಅನುಕೂಲಕ್ಕಾಗಿ ತುರ್ತು ಮಾಹಿತಿಯೊಂದನ್ನು ರವಾನಿಸಲಾಗಿತ್ತು. ಈ ಸಂದೇಶವು ಅಂತರಿಕ್ಷೇಯ ಕಕ್ಷೆಯಲ್ಲಿ ಪರಿವೀಕ್ಷಣೆಗಾಗಿರುವ ಸ್ವಿಫ್ಟ್ ಎನ್ನುವ ಅಂತರಿಕ್ಷ ನೌಕೆಯಿಂದ ಭೂಮಿಗೆ ಬಂದ ಮಾಹಿತಿಯನ್ನು ಆಧರಿಸಿದ್ದಾಗಿತ್ತು. ನಮ್ಮ ಸೌರಮಂಡಲಕ್ಕೆ ಅತ್ಯಂತ ಸಮೀಪದಲ್ಲಿ ಪ್ರಕಾಶಮಾನವಾದ ವಸ್ತು ಒಂದು ಕಾಣಿಸಿ ಕೊಂಡಿತು. ಈ ಮಾಹಿತಿ ಸಿಕ್ಕ ತಕ್ಷಣ ಟೆಕ್ಸಸ್ ಮತ್ತು ಚಿಲ್ಲಿ ನಗರಗಳಲ್ಲಿನ ಬಾಹ್ಯಕಾಶ ಕೇಂದ್ರಗಳ ರೋಬೋಟಿಕ್ ಟೆಲಿಸ್ಕೋಪಗಳು ಪ್ರಕಾಶಿಸುತ್ತಿದ್ದ ಆ ಬೆಳಕಿನೆಡೆಗೆ ತಿರುಗಿ ಮಾಹಿತಿ ಸಂಗ್ರಹಿಸುವುದರಲ್ಲಿ ನಿರತವಾದವು. ಇತ್ತ ವಿಜ್ಞಾನಿಗಳು ದಾಖಲಾದ ಮಾಹಿತಿಗಳ ಅಧ್ಯಯನದಲ್ಲಿ ನಿರತರಾದರು ಆ ಬೆಳಕಿನ ಶಕ್ತಿ ಮತ್ತು ಪ್ರಕರತೆಯ ಮಾಪನವನ್ನು ಮಾಡತೊಡಗಿದರು. ಆಧುನಿಕ ಕಂಪ್ಯೂಟರ್ ಮತ್ತು ಯಂತ್ರೋಪಕರಣಗಳ ಸಹಾಯದಿಂದ ಆ ಬೆಳಕಿನ ತರಂಗದ ಸಾಲುಗಳನ್ನು ಅದರ ರಚನೆಗೆ ಅನುಗುಣವಾಗಿ ಬೇರ್ಪಡಿಸಿದರು. ಇದರಿಂದಾಗಿ ಅವು ಭೂಮಿಯನ್ನು ತಲುಪಲು ತೆಗೆದುಕೊಂಡ ಸಮಯ ತಿಳಿದು ಬಂತು. ನಮ್ಮ ಬ್ರಹ್ಮಾಂಡದ ಮಧ್ಯ ಭಾಗದಿಂದ ಅಂದರೆ 7,5 ಬಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಿಂದ ಚಲಿಸುತ್ತಾ ಬಂದಿರುವುದನ್ನು ಸಂಶೋಧನೆಯ ವೇಳೆ ವಿಜ್ಞಾನಿಗಳು ಕಂಡು ಕೊಂಡರು. ಆಕಾಶದಲ್ಲಿ ಆ ಬೆಳಕು ಕಾಣಿಸಿ ಕೊಂಡಿದ್ದು ಕೇವಲ 30 ಸೆಕೆಂಡುಗಳ ಕಾಲಮಾತ್ರ. ಬೆಳಕಿನ ಗಾತ್ರ ಮತ್ತು ಚಲನೆ ಹಾಗೂ ಅದರ ಬಗ್ಗೆ ಸಂಗ್ರಹವಾದ ಎಲ್ಲ ಮಾಹಿತಿಗಳನ್ನು ಒಟ್ಟಾರೆಯಾಗಿ ಗ್ರಹಿಸಿ ಇದೊಂದು ಬ್ಲಾಕ್ ಹೋಲ್ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು.
ನಮ್ಮ ಸೂರ್ಯನಿಗಿಂತಲು
13 ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ಮೊನೊಸೆರೊಟಿಸ್ ಅಥವಾ ವಿ616 ಮಾನ್ ಎಂಬ ಕಪ್ಪು
ರಂದ್ರ ನಮ್ಮ ಬ್ರಹ್ಮಾಂಡದಲ್ಲಿ ಸೂರ್ಯಮಂಡಲಕ್ಕೆ ಅತ್ಯಂತ ಸಮೀಪದಲ್ಲಿದೆ. ಇದರ ಕ್ಷೀರಪಥವು ನಮ್ಮ ಬ್ರಹ್ಮಾಂಡದ
ಕೇಂದ್ರಭಾಗದಲ್ಲಿದೆ. ಭೂಮಿಯಿಂದ ಸುಮಾರು 3ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವುದರಿಂದ ಇದು
ಭೂಮಿಯ ಪರಿಸರದ ಮೇಲೆಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇದರಿಂದ ಯಾವುದೆ ಅಪಾಯವು ಭೂಮಿಗೆ ಇಲ್ಲ.
ಕೇಂಬ್ರಿಡ್ಜ್
ವಿಶ್ವವಿಧ್ಯಾಲಯದ ಪ್ರಾಧ್ಯಾಪಕರಾದ ಜೋನ್ ಮಿಶೇಲ್ ಅವರು ಕಪ್ಪು ರಂಧ್ರಗಳ ಬಗ್ಗೆ ವಿಷಯ ಪ್ರಸ್ತಾಪಮಾಡಿದ
ಮೊದಲಿಗರಾಗಿದ್ದಾರೆ. 1783ರಲ್ಲಿ ಈ ಕುರಿತು ಲಂಡನ್ ನಗರದ ಪತ್ರಿಕೆಯೊಂದರಲ್ಲಿ ಲೇಖನವನ್ನು ಪ್ರಕಟಿಸಿದರು.
ಖಗೋಳಶಾಸ್ತ್ರದಲ್ಲಿ ಎಕ್ಸರೆ ಯಂತ್ರಗಳ ಬಳಕೆ ಆಗುವ ವರೆಗೂ ಭೌತಿಕವಾಗಿ ಈ ಕಪ್ಪು ರಂಧ್ರಗಳನ್ನು ಗುರುತಿಸಲು
ಆಗಿರಲಿಲ್ಲ. 1960ರಲ್ಲಿ ಬಲೂನ್ ಹಾರಾಟದ ಸಮಯದಲ್ಲಿ ಮೊದಲಬಾರಿಗೆ ಎಕ್ಸ್-1 ಎನ್ನುವ ಕಪ್ಪು ರಂಧ್ರವನ್ನು
ಪತ್ತೆ ಹಚ್ಚಲಾಯಿತು. ಬ್ಲ್ಯಾಕ್ ಹೋಲ್ ಎಂಬ ಪದವು ಇತ್ತೀಚಿನದ್ದಾಗಿದೆ. ಇದನ್ನು 1969ರಲ್ಲಿ ಅಮೇರಿಕಾದ
ವಿಜ್ಞಾನಿಯಾದ ಜಾನ್ ಮೀಲರ್ ಮೊದಲ ಬಾರಿಗೆ ಬಳಿಸಿದ್ದರು. 19ನೇ ಶತಮಾನದಲ್ಲಿ ಇವುಗಳ ಬಗ್ಗೆ ಹೆಚ್ಚಿನ
ಅಧ್ಯಯನ ಮತ್ತು ಅನ್ವೇಷಣೆಗಳು ನೆಡೆದವು.
ಕಪ್ಪು ರಂಧ್ರಗಳ
ಬಗ್ಗೆ ಅಧ್ಯಯನಮಾಡಿದ ವಿಜ್ಞಾನಿಗಳಲ್ಲಿ ಭಾರತೀಯರು ಒಬ್ಬರಿದ್ದಾರೆ ಅವರ ಸಂಶೋಧನೆಗೆ ನೋಬೆಲ್ ಪ್ರಶಸ್ತಿಲಭಿಸಿದೆ.
ನಕ್ಷತ್ರಗಳ ಅಂತ್ಯ ಹೇಗಾಗುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸಿ ಕೊಟ್ಟ ಭಾರತೀಯ ಸಂಜಾತ ವಿಜ್ಞಾನಿಯವರು.
ಭಾರತದ ಶ್ರೇಷ್ಟ
ವಿಜ್ಞಾನಿ ಸಿ.ವಿ.ರಾಮನ್ ಅವರ ನೆರಳಿನಲ್ಲಿ ಬೆಳೆದ ಈ ಹುಡುಗ ಬಾಲಕನಾಗಿದ್ದಾಗಲೆ, ಖಗೋಳಶಾಸ್ತ್ರದ
ವಿಜ್ಞಾನಿಯಾಗುವ ಕನಸು ಕಂಡಿದ್ದ. ತನ್ನ 18ನೇ ವಯಸ್ಸಿಗೆ
ಶೈಕ್ಷಣಿಕ ಸಂಶೋಧನಾ ವರದಿಯನ್ನು ಪ್ರಕಟಿಸಿ ಆ ಕಾಲದ ದೊಡ್ಡ ವಿಜ್ಞಾನಿಗಳಿಂದಲು ಸೈ ಅನಿಸಿಕೊಂಡಿದ್ದರು.
1928 ರಲ್ಲಿ ಇವರು ಮಂಡಿಸಿದ “ಚಂದ್ರಶೇಖರ ಲಿಮಿಟ್” ಸಂಶೋಧನಾ
ವರದಿಗೆ ನೋಬೆಲ್ ಪ್ರಶಸ್ತಿ ಪಡೆದರು. ಲಂಡನ್ ನಿವಾಸಿಯಾಗಿದ್ದ ಸುಬ್ರಮಣ್ಯಮ್ ಶ್ರೀನಿವಾಸ ಅವರು ಸಿ.ವಿ.ರಾಮನ್
ಅವರ ಅಣ್ಣನ ಮಗ.
1920 ಕ್ಕೂ ಮೊದಲು ನಕ್ಷತ್ರಗಳಿಗೂ ಅಂತ್ಯವಿದೆ ಅನ್ನುವ ವಿಚಾರ ಜಗತ್ತಿಗೆ ಗೊತ್ತಿರಲಿಲ್ಲ. ಸುಬ್ರಮಣ್ಯಮ್ ಶ್ರೀನಿವಾಸನ್ ಅವರು ತಮ್ಮ “ ಚಂದ್ರಶೇಖರ ಲಿಮಿಟ್” ಪ್ರತಿಪಾದನೆಯಲ್ಲಿ ಈ ವಿಚಾರವನ್ನು ಮಂಡಿಸಿದರು. ತಮ್ಮ ಸಂಶೋಧನೆಯಲ್ಲಿ ನಕ್ಷತ್ರಗಳು ಎಷ್ಟು ದೊಡ್ಡದಿರಬಹುದೆಂದೂ ಹಾಗೂ ನಕ್ಷತ್ರಗಳಲ್ಲಿನ ಎಲ್ಲ ಅನಿಲವೂ ಉರಿದು ಹೋದ ಮೇಲೆ ಅದು ತನ್ನಲ್ಲಿರುವ ಗುರುತ್ವಾಕರ್ಷಣೆಯನ್ನು ಹೇಗೆ ಪಡೆಯುತ್ತದೆ ಅನ್ನುವುದನ್ನು ತಿಳಿಸಿ ಕೊಟ್ಟರು. ಈ ಸಂಶೋಧನೆಯೇ ಕಪ್ಪು ರಂಧ್ರಗಳ ಅನ್ವೇಷಣೆಗೆ ದಾರಿಮಾಡಿ ಕೊಟ್ಟಿತು. ನಕ್ಷತ್ರಗಳ ಜೀವನ ವೃತ್ತಾಂತವನ್ನು ಅರ್ಥಮಾಡಿ ಕೊಂಡಾಗ ಮಾತ್ರ ನಮಗೆ ಕಪ್ಪು ರಂಧ್ರಗಳ ಬಗ್ಗೆ ತಿಳಿದು ಕೊಳ್ಳಲು ಸಾಧ್ಯವಾಗುವುದು..
ಕಪ್ಪು ರಂಧ್ರಗಳ
ಬಗ್ಗೆ ಅಧ್ಯಯನಮಾಡಿದ ಫ್ರಾನ್ಸ್ ಮತ್ತು Ishrail ವಿಜ್ಞಾನಿಗಳ ಬಗ್ಗೆ.ಖಗೋಳ ಶಾಸ್ತ್ರದಲ್ಲಿನ ಕ್ರೀಯೆ
ಮತ್ತು ಬದಲಾವಣೆಗಳು ಬಹಳ ನಿಧಾನ. ವಿಸ್ಮಯಕಾರಿ ಕೌತುಕಗಳ
ಆಗರವಾದ ಖಗೋಳ ಶಾಸ್ತ್ರದ ಅಧ್ಯಯನವು, ಅನಾದಿ ಕಾಲದಿಂದಲು ಭವಿಷ್ಯದ ಅರಿವಿಗೆ ಮತ್ತು ಸತ್ಯದ ಅನ್ವೇಷಣೆಗೆ
ದಾರಿ ತೋರುವ ಸವಾಲುಗಳನ್ನು ಮನುಷ್ಯನ ಬುದ್ದಿಮತ್ತೆಗೆ
ಒಡ್ಡುತ್ತಲೆ ಬಂದಿದೆ. ಆಕಾಶ ಗಂಗೆಯ ಮಡಿಲಲ್ಲಿ ನಮ್ಮ ಬ್ರಹ್ಮಾಂಡದ ಹಾಗೆ ಅಸಂಖ್ಯಾತ ಬ್ರಹ್ಮಾಂಡಗಳಿವೆ.
ಆಕಾಶ ಗಂಗೆಯು ಅನೇಕ ರೀತಿಯ ಅನಿಲಗಳಿಂದ ಕೂಡಿದ ಮೋಡಗಳು ಮತ್ತು ಧೂಳಿನ ಕಣಗಳಿಂದ ಆವೃತವಾಗಿದೆ ಇದನ್ನು
ನಿಹಾರಿಕಾ ಎಂದು ಕರೆಯುತ್ತಾರೆ. ಅತ್ಯಂತ ಪ್ರಭಲವಾದ ಗುರುತ್ವಾಕರ್ಷಣೆಯ ಬಲವುಳ್ಳ ದಟ್ಟವಾದ ಹೈಡ್ರೋಜನ್
ಮೋಡಗಳು ಮತ್ತು ಧೂಳಿನ ಕಣಗಳು ಒಟ್ಟಿಗೆ ಸೇರ್ಪಡೆಗೊಳ್ಳುವ ಕ್ರೀಯೆಯಿಂದ ನಕ್ಷತ್ರದ ನಿರ್ಮಾಣ ಪ್ರಕ್ರೀಯೆ
ಪ್ರಾರಂಭವಾಗುತ್ತದೆ. ಈ ಕ್ರೀಯೆಯಲ್ಲಿ ಘನತ್ವದ ಪ್ರಮಾಣವು ವೃಧ್ದಿಯಾದಾಗ ಹೈಡ್ರೋಜನಲ್ಲಿರುವ ಪರಮಾಣುಗಳು
ಅತಿ ವೇಗದಲ್ಲಿ ಪರಸ್ಪರವಾಗಿ ಹೆಚ್ಚು ಹೆಚ್ಚು ಘರ್ಷಿಸತೊಡಗುತ್ತವೆ.ಇದರಿಂದ ಅನಿಲವು ಇನ್ನಷ್ಟು ಬಿಸಿಯಾಗುತ್ತಲೆ
ಸಾಗುತ್ತದೆ. ಆಗ ಘರ್ಷಣೆಯಿಂದ ಪುಟಿಯಲಾಗದ ಸ್ಥಿತಿ ತಲುಪಿದ ಹೈಡ್ರೋಜನ್ ಪರಮಾಣುಗಳು ತಮ್ಮಲ್ಲಿಯೇ
ಒಗ್ಗೂಡಿ ಹೀಲಿಯಂ ಆಗಿ ಪರಿವರ್ತನೆ ಹೊಂದುತ್ತವೆ. ಈ ಪ್ರತಿಕ್ರೀಯೆ ಒಂದು ಹೈಡ್ರೋಜನ್ ಬಾಂಬ್ ಸ್ಪೋಟ
ಇದ್ದಹಾಗೆ ಇರುತ್ತದೆ.
ಈ ಸ್ಪೋಟದಿಂದಾಗಿ ನಕ್ಷತ್ರದೊಳಗಿನ ಅನಿಲಗಳು ತಮ್ಮೊಳಗಿನ ಸಂಕುಚಿತ ಗತಿಯಿಂದಾಗಿ ಒಂದು ಗೋಳಾಕಾರದಲ್ಲಿ ತಿರುಗಲು ಪ್ರಾರಂಭಿಸುತ್ತವೆ. ಈ ರೀತಿಯಲ್ಲಿ ಒಂದು ನಕ್ಷತ್ರದ ನಿರ್ಮಾಣಕ್ಕೆ ಹಲವು ಮಿಲಿಯನ್ ವರ್ಷಗಳನ್ನು ತೆಗೆದು ಕೊಳ್ಳುತ್ತದೆ. ಹೈಡ್ರೋಜನ್ ಅನಿಲದ ಸ್ಪೋಟದಿಂದ ಉಂಟಾಗುವ ಬೆಳಕು ಆ ನಕ್ಷತ್ರವನ್ನು ಹೊಳೆಯುವಂತೆಮಾಡುತ್ತದೆ. ಈ ಹೆಚ್ಚುವರಿತಾಪವು ಅನಿಲದ ಒತ್ತಡವನ್ನು ಎಲ್ಲಿಯವರೆಗೆ ಇನ್ನಷ್ಟು ಹೆಚ್ಚುಮಾಡುತ್ತಾ ಹೋಗುತ್ತದೆ ಅಂದರೆ ಅದರ ಪರಿಣಾಮವಾಗಿ ಅದು ಗುರುತ್ವಾಕರ್ಷಣೆಯ ಬಲದೊಂದಿಗೆ ಸಮತೋಲನವನ್ನು ಕಾಪಾಡಿ ಕೊಳ್ಳುವವರೆಗೆ ಮುಂದುವರೆಯುತ್ತದೆ. ನಕ್ಷತ್ರಗಳಲ್ಲಿನ ಅನಿಲಗಳು ಹೆಚ್ಚು ಉರಿಯುವ ಮೂಲಕ ಒತ್ತಡವನ್ನು ನಿರ್ಮಾಣಮಾಡಿ ಗುರುತ್ವಾಕರ್ಷಣೆಯೊಂದಿಗೆ ಸಮತೋಲನವನ್ನು ಕಾಪಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿರುತ್ತವೆ. ಈ ಕಾರಣದಿಂದಾಗಿ ನಕ್ಷತ್ರಗಳು ಹೆಚ್ಚು ಕಾಲ ಅಸ್ಥಿತ್ವದಲ್ಲಿ ಉಳಿಯುತ್ತವೆ.
ನಕ್ಷತ್ರಗಳಲ್ಲಿನ ಹೈಡ್ರೋಜನ್ ಬರಿದಾಗುತ್ತಾ ಬಂದಂತೆ ತಣ್ಣಗಾಗಲು ಪ್ರಾರಂಭಿಸುತ್ತವೆ. ಆಗ ಗುರುತ್ವಾಕರ್ಷಣೆಯೊಂದಿಗಿನ ಸಮತೋಲನವನ್ನು ಕಳೆದು ಕೊಂಡು ಅವುಗಳಲ್ಲಿ ಆಸ್ಪೋಟವೊಂದು ಉಂಟಾಗುತ್ತದೆ ಇದನ್ನು ಸೂಪರ್ ನೋವಾ ಎಂದು ಕರೆಯುತ್ತಾರೆ.
ಈ ಸ್ಪೋಟದ ನಂತರವು
ಆ ನಕ್ಷತ್ರದ ಘನತ್ವದ ಅಂಶವೇನಾದರು ಉಳಿದಿದ್ದರೆ ಅದೊಂದು ಅತ್ಯಾಧಿಕ ಘನತ್ವದ ನ್ಯೂಟ್ರಾನ್ ನಕ್ಷತ್ರವಾಗುತ್ತದೆ.
ತನ್ನ ಒಳಗಿನ ಅನಿಯಂತ್ರಿತ ಗುರುತ್ವಾಕರ್ಷಣೆಯಿಂದಾಗಿ ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ.
ಈ ರೀತಿ ತನ್ನ ಗಾತ್ರದಲ್ಲಿ ಬದಲಾಗುತ್ತ ಅತ್ಯಂತ ಚಿಕ್ಕದಾದ ಗಾತ್ರಕ್ಕೆ ಅಂದರೆ ಅಣುವಿನಷ್ಟಾಗಿ ಬದಲಾಗುತ್ತದೆ.ಇದರಿಂದಾಗಿ
ಅದರಲ್ಲಿನ ಸಮಯ ಮತ್ತು ಗಾತ್ರ ವಿಕೃತವಾಗುತ್ತದೆ.ತನ್ನೊಳಗೆ ಸಮಯ ಮತ್ತು ಸ್ಥಿತಿಗೆ ಅಸ್ಥಿತ್ವವಿಲ್ಲದ್ದರಿಂದ
ಅದು ಅದೃಶ್ಯವಾಗುತ್ತದೆ.ಇದನ್ನೆ ನಾವು ಬ್ಲ್ಯಾಕ್ ಹೋಲ್ ಎನ್ನುತ್ತೇವೆ.
ಸೌರಮಂಡಲದ ಸಮಯ ಭೂಮಿಯಲ್ಲಿನ ಸಮಯ ಮತ್ತು ನಕ್ಷತ್ರಗಳಲ್ಲಿನ ಸಮಯಗಳು ಬೇರೆ
ಬೇರೆಯಾಗಿದೆ.ಇದಕ್ಕೆ ಕಾರಣ ಅವುಗಳಲ್ಲಿನ ಗುರುತ್ವಾಕರ್ಷಣೆ ಬಲ. ಕಾಲ ಮತ್ತು ಸ್ಥಳ ಒಂದು ವಲಯವಾಗಿದ್ದು
ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ವಸ್ತುವಿಗು ಆಗುವುದಿಲ್ಲ. ಕಪ್ಪು ರಂಧ್ರದಲ್ಲಿನ ದ್ರವ ರೂಪದ ವಸ್ತುಗಳು
ಅದರ ಕೇಂದ್ರ ಬಿಂದುವಿನಲ್ಲಿ ಇರುತ್ತವೆ.ಇದನ್ನು ಸೆಂಟರ್ ಸಿಂಗುಲ್ಯರ್ point ಎಂದು ಕರೆಯುತ್ತಾರೆ.
ಈ ಬಿಂದುವಿನ ಸುತ್ತವಿರುವ ಕ್ಷಿತಿಜವನ್ನು event horizon ಎಂದು ಕರೆಯುತ್ತಾರ. ಇದು ಕಪ್ಪುರಂಧ್ರದ
ಸುತ್ತ ಏಕ ಮುಖವಾದ 7 ಪರದೆಯಂತೆ ಕೆಲಸಮಾಡುತ್ತದೆ. ಈ ಕ್ಷಿತಿಜದಿಂದ ಮಧ್ಯ ಭಾಗದವರೆಗೆ ಹೋದಂತೆ ಗುರುತ್ವಾಕರ್ಷಣೆಯ ಬಲವು ಕಡಿಮೆಯಾಗುತ್ತಾ ಹೋಗುತ್ತದೆ.
ಬ್ಲ್ಯಾಕ್ ಹೋಲ್ ಒಂದರಲ್ಲಿ ಗಗನಯಾನಿ ಒಬ್ಬ ಬಿಳುತ್ತಾನೆ ಎಂದು ಉಹಿಸಿ ಕೊಳ್ಳೋಣ ಆತ ತನ್ನ ತಲೆಯ ಹಿಂಭಾಗವನ್ನು
ತನ್ನ ಕಣ್ಣಮುಂದೆ ನೋಡ ಬಹುದು. ಆತನ ಕಾಲಿನ ಮೇಲೆ ಪ್ರಯೋಗವಾಗುವ ಗುರುತ್ವಾಕರ್ಷಣೆಯ ಬಲವು ತಲೆಯ ಮೇಲೆ
ಪ್ರಯೋಗವಾಗುವ ಬಲಕ್ಕಿಂತ ಹೆಚ್ಚಾಗಿರುತ್ತದೆ. ಬಲಗಳಲ್ಲಿನ ಈ ಬದಲಾವಣೆಯಿಂದಾಗಿ ಆತನ ದೇಹವು ಹರಿದು
ಹಂಚಿ ಹೋಗುತ್ತದೆ. ಕಪ್ಪು ರಂಧ್ರದಲ್ಲಿ ಯಾವುದೇ ವಸ್ತು ಬಿದ್ದರು ಅದು ಅದರ ಘನತ್ವದ ಭಾಗದಲ್ಲಿನ ಅಜ್ಞಾತ
ಸ್ಥಳದಲ್ಲಿ ಶೇಖರವಾಗುತ್ತದೆ.
Aಈ ಕಪ್ಪು ರಂಧ್ರಗಳಲ್ಲಿ
ಪ್ರಕಾರಗಳೆಷ್ಟು ? ಇವುಗಳಿಂದ ಬ್ರಹ್ಮಾಂಡದ ರಹಸ್ಯ ಹೇಗೆ ಬಯಲಾಗುತ್ತದೆ ? ಎನ್ನುವ ಬಗ್ಗೆ ಸ್ಟೀಫನ್
ಹಾಕಿಂಗ್ ಅವರ ಅಭಿಪ್ರಾಯವೇನು ಗೊತ್ತೇ.
ನಮ್ಮ ಭೂಮಿಯಲ್ಲಿನ
ಘನತ್ವವು ಹೆಚ್ಚಾಗಿ, ದ್ರವರೂಪದ ವಸ್ತುಗಳೆಲ್ಲ ಬರಿದಾದಾಗ ಅದನ್ನು ಕುಗ್ಗಿಸಿ ಕೇವಲ 1.5 ಸೆಂಟಿ ಮೀಟರ್
ಗಾತ್ರಕ್ಕೆ ಇಳಿಸಿದಾಗ ಅದು ಒಂದು ಬ್ಲ್ಯಾಕ್ ಹೋಲ್ಆಗಿ ಬದಲಾಗುತ್ತದೆ.ಆದರೆ ಪೃಥ್ವಿ ಮತ್ತು ಸೂರ್ಯ
ಇಷ್ಟು ಸಂಕುಚಿತವಾಗಲು ಸಾಧ್ಯವಿಲ್ಲ ಯಾಕೆಂದರೆ ಇವುಗಳಲ್ಲಿನ ದ್ರವರೂಪದಲ್ಲಿನ ಗುರುತ್ವಾಕರ್ಷಣೆಯ
ಬಲವು ಅಷ್ಟೊಂದು ಅಧಿಕವಾಗಿಲ್ಲ. ಸೂರ್ಯನ ಸಾಂದ್ರತೆಗಿಂತ 11/2 ಪಟ್ಟು ತಂಪಾಗಿರುವ ನಕ್ಷತ್ರಗಳು ಮಾತ್ರ
ತನ್ನದೇ ಗುರುತ್ವಾಕರ್ಷಣೆಯಿಂದ ತಮ್ಮ ಅಸ್ಥಿತ್ವವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಆಗ ಅವು ಕಪ್ಪು
ರಂಧ್ರಗಳಾಗಿ ಮಾರ್ಪಡುತ್ತವೆ.
ಈ ಕಪ್ಪು ರಂಧ್ರಗಳಲ್ಲಿ 3 ವಿಧಗಳಿವೆ. ನಮ್ಮ ಸೌರಮಂಡಲದಲ್ಲಿನ ಸೂರ್ಯನಿಗಿಂತ 13
ಪಟ್ಟು ಹೆಚ್ಚು ದ್ರವ ರೂಪದ ಅನಿಲವನ್ನು ಹೊಂದಿರುವ ನಕ್ಷತ್ರಗಳು ದ್ರವರೂಪದಲ್ಲಿನ ಅಧಿಕವಾದ ಗುರುತ್ವದ ಬಲದಿಂದಾಗಿ ಸಂಕುಚಿತವಾಗ ತೊಡಗುತ್ತವೆ.
ಈರೀತಿಯಾಗಿ ನಿರ್ಮಾಣವಾದ ಕಪ್ಪು ರಂಧ್ರಗಳನ್ನ Stellar mass black hole ಎನ್ನುತ್ತಾರೆ.
ಇನ್ನು ಆಕಾಶಗಂಗೆಯ ಕೇಂದ್ರದಲ್ಲಿ ಮಾತ್ರ ಕಾಣಿಸಿ ಕೊಳ್ಳುವ
ಈ ಕಪ್ಪು ರಂಧ್ರಗಳಲ್ಲಿ ಘನತ್ವದ ಸ್ವರೂಪವು ದ್ರವರೂಪಕ್ಕಿಂತ ಹೆಚ್ಚಾಗಿರುತ್ತದೆ. ಇವುಗಳಲ್ಲಿನ ದ್ರವರೂಪವು
ನಮ್ಮ ಸೌರಮಂಡಲದ ಸೂರ್ಯನಿಗಿಂತ ಕೋಟಿ ಪಟ್ಟು ಹೆಚ್ಚಾಗಿರುತ್ತದೆ. ಇವುಗಳ ಸ್ವರೂಪ ಅತ್ಯಂತ ವಿರಾಟವಾಗಿರುತ್ತದೆ.
ನಮ್ಮ ಬ್ರಹ್ಮಾಂಡದ ಮಧ್ಯದಲ್ಲಿ ಒಂದು super massive black hole ಇದೆ.
ಗಾತ್ರದಲ್ಲಿ
ಅತ್ಯಂತ ಚಿಕ್ಕದಾದ ಕಪ್ಪುರಂಧ್ರಗಳನ್ನು Primordial / small black hole ಎಂದು ಕರೆಯುತ್ತಾರೆ.
ಸೌರಮಂಡಲದಲ್ಲಿನ ಸೂರ್ಯನಿಗಿಂತ ಅತಿ ಕಡಿಮೆ ಪ್ರಮಾಣದ ದ್ರವರೂಪವನ್ನು ಹೊಂದಿರುತ್ತವೆ. ಇವುಗಳ ಹುಟ್ಟು
ಗುರುತ್ವಾಕರ್ಷಣೆಯ ಸಂಕುಚಿತ ಚಲನೆಯಿಂದ ಆಗಿರುವುದಿಲ್ಲ.
ಬದಲಿಗೆ ಇವುಗಳಲ್ಲಿನ ಅನಿಲಗಳು ಬರಿದಾದಾಗ ಈ ನಕ್ಷತ್ರಗಳು ತಣ್ಣಗಾಗುತ್ತಾ ಬರುತ್ತವೆ. ಇದರಿಂದಾಗಿ
ಇವುಗಳ ಮೂಲ ಸ್ಥಿತಿಯಲ್ಲಿ ಬದಲಾವಣೆಯಾಗುವುದರಿಂದ ಕಪ್ಪು ರಂಧ್ರಗಳಾಗಿ ಬದಲಾಗುತ್ತವೆ. ಇವುಗಳ ನಿರ್ಮಾಣವು
ಬ್ರಹ್ಮಾಂಡದ ನಿರ್ಮಾಣದೊಂದಿಗೆ ಆಗಿದೆ. ಇವುಗಳ ಅಧ್ಯಯನದಿಂದ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲಾಗುವುದು
ಎಂಬ ನಂಬಿಕೆ ವಿಜ್ಞಾನಿಗಳಲ್ಲಿದೆ.
ಬ್ರಹ್ಮಾಂಡದ
ರಹಸ್ಯದ ಅನ್ವೇಷಣೆಯ ವಿಷಯ ಬಂದಾಗ 1981ರ ಘಟನೆಯೊಂದು ನೆನಪಾಗುತ್ತದೆ. ವಿಶ್ವದ ಅಧ್ಯಯನಕ್ಕೆ ಸಂಬಂಧಿಸಿದ
ಸಮಾವೇಶವನ್ನು ವ್ಯಟಿಕನ್ ನಗರದಲ್ಲಿ ಆಯೋಜಿಸಲಾಗಿತ್ತು. ವಿಶ್ವದ ಮೇಧಾವಿ ವಿಜ್ಞಾನಿಗಳೆಲ್ಲ ಅಂದು
ಸೇರಿದ್ದರು. ವಿಶ್ವದ ಹುಟ್ಟಿನ ಬಗ್ಗೆ ಮೊದಲ ಬಾರಿಗೆ ಬಿಗ್ ಬ್ಯಾಂಗ್ ಸ್ಪೋಟದ ಬಗ್ಗೆ ಅಧ್ಯಯನದ ವರಧಿಯೊಂದನ್ನು
ಮಂಡಿಸಲು ಲಂಡನಿಂದ ವಿಜ್ಞಾನಿಯೊಬ್ಬರು ಬಂದಿದ್ದರು. ದೇವರ ಮತ್ತು ಬ್ರಹ್ಮಾಂಡದ ಹುಟ್ಟಿನ ರಹಸ್ಯಗಳನ್ನು
ಈ ವರದಿಯು ಬಯಲುಮಾಡುವುದೆಂದು ಪೋಪ್ ಅವರು ಇದರ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಪೋಪ್ ಅವರ ವಿರೋಧದ
ನಡುವೆಯು ತನ್ನ ವರಧಿಯನ್ನು ಮಂಡಿಸಿ ಅವರಿಂದ ಮೆಚ್ಚುಗೆಯನ್ನುಗಳಿಸಿದ ವಿಜ್ಞಾನಿಯೆ ಸ್ಟೀಫ್ ನ್ ಹಾಕಿಂಗ್ ಇಡೀ ಮನುಕುಲದ ಸಂಪತ್ತು ಇವರು. ಜಗತ್ತು
ಕಂಡ ಶ್ರೇಷ್ಟ ಭೌತವಿಜ್ಞಾನಿ . ಐನ್ ಸ್ಟೇನ್ ನಂತರದ ಸ್ಥಾನದಲ್ಲಿ ನಿಲ್ಲುವ ಮಹಾನ್ ಬುದ್ದಿವಂತ. ಇವರು ಬದುಕಿರುವ ಶತಮಾನದಲ್ಲಿ ನಾವು ಬದುಕಿದ್ದೇವೆ ಎನ್ನುವುದೆ ನಮಗೆ ಹೆಮ್ಮೆಯ
ವಿಷಯ.
ಕಪ್ಪು ರಂಧ್ರಗಳ
ಬಗ್ಗೆ ಅಧ್ಯಯನ ನೆಡೆಸಿದ ವಿಜ್ಞಾನಿಗಳಲ್ಲಿ ಅಗ್ರಮಾನ್ಯರು ಇವರು. ಈ ಸೃಷ್ಠಿ ಆರಂಭಗೊಂಡ ಕ್ಷಣದಲ್ಲಿ
ಆದ ಮಹಾನ್ ಸ್ಪೋಟದಿಂದ ಎಲ್ಲವು ಪ್ರಾರಂಭವಾದವು. ಈ ಮಹಾನ್ ಸ್ಪೋಟದ ರಹಸ್ಯವನ್ನು ಬಯಲುಮಾಡಿದರೆ ಬ್ರಹ್ಮಾಂಡದ
ಗುಟ್ಟುಗಳೆಲ್ಲ ಬಯಲಾಗುತ್ತವೆ. ಈ ನಿಟ್ಟಿನಲ್ಲಿ ನೆಡೆಯುವ
ಪ್ರಯೋಗವೇ ಬಿಗ್ ಬ್ಯಾಂಗ ಸ್ಪೋಟ. ಇದರ ಅನ್ವೇಷಣೆಗೆ ದಾರಿಮಾಡಿ ಕೊಟ್ಟಿದ್ದೆ ಈ ಕಪ್ಪು ರಂಧ್ರಗಳು.
“ವಕ್ರತುಂಡ ಮಹಾಕಾಯ
ಕೋಟಿ ಸೂರ್ಯ ಸಮಪ್ರಭ” ಎನ್ನುವುದು ಪ್ರಾಚೀನರ ಮಾತು. ಅಂದರೆ ಸಾಹಿತ್ಯದಲ್ಲಿ
ಕೋಟಿ ಸೂರ್ಯ ಕಲ್ಪನೆ ಇತ್ತು. ಇಂದಿನಷ್ಟು ವಿಜ್ಞಾನ ಬೆಳೆದಿರದ ಆ ಕಾಲಕ್ಕೆ ಅದು ಅದ್ಬುತವಾದ ಕಲ್ಪನೆ. ಕೋಟಿ ಸೂರ್ಯ ಒಂದು
ಗ್ಯಾಲಕ್ಸಿಯಲ್ಲಿಯೇ ಇದ್ದಾರೆ ಎಂದು ವಿಜ್ಞಾನದ ಬೆಳವಣಿಗೆಯಿಂದ
ಇಂದು ನಮಗೆ ಗೊತ್ತಾಗಿದೆ. ಇಂತಹ ಎಷ್ಟೋ ಗ್ಯಾಲಕ್ಸಿಗಳು ವಿಶ್ವದಲ್ಲಿದೆ. ಹಾಗಾದರೆ ವಿಜ್ಞಾನ ಬೆಳೆದಂತೆಲ್ಲ
ನಮ್ಮ ಕಲ್ಪನೆಯು ಬೆಳೆದರೆ ಆ ಕಲ್ಪನೆಗೂ ಒಂದು ಭವ್ಯತೆ ಬರುತ್ತದೆ.ಸಾಹಿತ್ಯದ ಹಾಗೆ ವಿಜ್ಞಾನವು ಕಲ್ಪನೆಯನ್ನು ಮುಂದಿಟ್ಟು ಕೊಂಡು ಹೊರಡುತ್ತದೆ. ಆದರೆ ಕಲ್ಪನೆಯನ್ನು ಪರೀಕ್ಷಿಸಿ ನಿಜದ ಹಾದಿ
ಹಿಡಿದು ಮುಂದೆ ಸಾಗುತ್ತದೆ.
No comments:
Post a Comment