Saturday, 2 January 2021

ಗೊಬ್ಬರ ತಿನ್ನೋ ಜನ

 


ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ನಮಗೆ ಗೊತ್ತಿರುವ ನಾಣ್ನುಡಿನಾವಿಂದು ಕಷ್ಟಪಟ್ಟು ದುಡಿದು ವಿಷವನ್ನು ತಿನ್ನುತ್ತಿದ್ದೇವೆ. ನಮ್ಮ ಸಾವಿನ ಗುಂಡಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಇತ್ತೀಚಿನ ಒಂದು ವರದಿಯ ಪ್ರಕಾರ ದಿನ ನಿತ್ಯ ಅರ್ಧ ಮಿಲಿಗ್ರಾಂನಷ್ಟು ಕೀಟನಾಶಕಗಳನ್ನು ನಮ್ಮ ಆಹಾರದ ಜೊತೆ ಸೇವಿಸುತ್ತಿದ್ದೇವೆಶ್ರಮಪಟ್ಟು ದುಡಿದು , ವಿಷ ತಿನ್ನುವ ಗತಿ ಮನುಷ್ಯನಿಗೆ, ಇಂದೇ ಏಕೆ ಬಂತು

ನಾವೆಲ್ಲರೂ ಯೋಚಿಸಬೇಕಾದ ಪ್ರಶ್ನೆ ಇದು.

ನಮ್ಮ ದೇಶದಲ್ಲಿ  ಪ್ರಸ್ತುತ 80,000 ಟನ್ನಗೂ ಮಿಗಿಲಾಗಿ ಕೀಟನಾಶಕಗಳನ್ನು ಬಳಸಲಾಗುತ್ತಿದ್ದೆ.    ಅಂದಾಜು 6ಸಾವಿರ ಕೋಟಿಗು ಹೆಚ್ಚು ಹಣವನ್ನು ಪ್ರತಿ ವರ್ಷ ಇದಕ್ಕಾಗಿ ವೆಚ್ಚವಾಗುತ್ತಿದ್ದೆಸುಮಾರ 131 ತರದ ಪೀಡೆನಾಶಕಗಳು ಬಳಕೆಗೆ ಯೋಗ್ಯವೆಂದು ಭಾರತದಲ್ಲಿ  ನೋಂದಾಯಿಸಲ್ಪಟಿವೆಇನ್ನೂ ಪರವಾನಿಗೆ ಇಲ್ಲದೆ ಮತ್ತು ನಕಲಿ ಹಾಗೂ ಕಳಪೆಗುಣಮಟ್ಟದ ಕೀಟನಾಶಕಗಳ ಮಾರಾಟ ಮತ್ತು ಉತ್ಪಾದನೆಯ ಜಾಲ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಸಕ್ರಿಯವಾಗಿದೆ.                                  

ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ಕುರಿತಾದ ಒಂದು ನಾಣ್ಯದ ಮುಖ,ಇದಾದರೆ ಇನ್ನೊಂದು ಮುಖ ಇನ್ನೂ ಕರಾಳವಾಗಿದೆಇತ್ತೀಚಿನ ದಿನಗಳಲ್ಲಿ ಬೆಳೆಗಳ ಮೇಲೆ ಕೀಟಗಳ ಹಾವಳಿ ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಕೀಟ ಹತೋಟಿಯಂತು ದೂರದ ಮಾತು! ಕೀಟ ನಿರ್ವಹಣೆ  ಮಾಡಿದರೆ ಸಾಕು ಎನ್ನುವ ಪರಿಸ್ಥಿತಿ  ರೈತರಲ್ಲಿ ನಿರ್ಮಾಣವಾಗಿದೆ.

''ಯಾವ ಕೀಟನಾಶಕಔಷಧ ಸಿಂಪಡಿಸಿದರು ಕೀಟಗಳು ಸಾಯ್ತಿಲ್ಲಅಂತಹುದರಲ್ಲಿ ಸರಕಾರದವರು ಕೀಟನಾಶಕ ಮತ್ತು ಗೊಬ್ಬರದ ಬೆಲೆ ಏರಿಸಿದ್ದಾರೆ. ನಾವು ಎಷ್ಟು ದುಡಿದರ  ಅಷ್ಟೇ'' 

ಎಂದು ಕೆಲ ರೈತರು ಹೇಳುವುದು ಇದೆ. ಹಾಗಾದರೆ ಕೀಟಗಳ ಹತೋಟಿ ಅಥವಾ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಕೀಟನಾಶಕಗಳು ಕಳಪೆ ಗುಣಮಟ್ಟದ್ದಾಗಿರುವ ಕಾರಣದಿಂದ ಕೀಟ  ಹತೋಟಿ ಸಾಧ್ಯವಾಗುತ್ತಿಲ್ಲವೇ? ಅಥವಾ ಕೀಟಗಳು 'ಕೀಟನಾಶಕ ನಿರೋಧಕತೆ' ಬೆಳೆಸಿಕೊಂಡಿವೆಯೇ?  

ರೈತರನ್ನ ಇಂದು ಹೆಚ್ಚಾಗಿ  ಚಿಂತೆಗೆ ಇಡುಮಾಡಿರುವ ಪ್ರಶ್ನೇ ಇದು.

ರಾಸಾಯನಿಕ ಕ್ರಿಮಿನಾಶಕಗಳು ಯಥೇಚ್ಛವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆಜೊತೆಗೆ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.

ವಿವೇಚನಾರಹಿತ ಕೀಟನಾಶಕಗಳ ಬಳಕೆ ಅಸಮರ್ಪಕ ನಿರ್ವಹಣೆ ಮತ್ತು ಕೀಟನಾಶಕಗಳ ವಿಷಯುಕ್ತತೆಯ ಹರಿವಿನ ಅಭಾವದಿಂದಾಗಿ ನಾವೆಲ್ಲರು ದುರಂತದ ಭಾಗಿಲಲ್ಲಿ ಬಂದು ನಿಂತಿದ್ದೇವೆಮಿತಿ ಮಿರಿದ ಕೀಟನಾಶಕಗಳ ಬಳಕೆಯಿಂದಾಗಿ ಮನುಷ್ಯನ ಆರೋಗ್ಯ , ಮಣ್ಣಿನ ಗುಣಮಟ್ಟ ಹಾಗು ಪರಿಸದ ಮೇಲು ಅಗಾಧವಾದ ದುಷ್ಪರಿಣಾಮಗಳಾಗುತ್ತಿದೆ. ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನವೆ ಕಿರು ಬರವಣಿಗೆಯ ಉದ್ದೇಶ.               

ಕೈ ಹುಣ್ಣಿಗೆ ಕನ್ನಡಿ ಬೇಡ ಎನ್ನುವಂತೆ, ಭಾರತದ ಕೃಷಿಯಲ್ಲಿ ಇಷ್ಟು ದೊಡ್ಡಮಟ್ಟದ                 ವ್ಯವಹಾರವನ್ನು ಮಾಡುತ್ತಿರುವ ಕೀಟನಾಶಕಗಳ ಉದ್ಯಮ ರಾಜಕೀಯ ವಶೀಲಿಯನ್ನು  ನಡೆಸುತ್ತದೆ ಎನ್ನುವುದಕ್ಕೆ ಯಾವುದೆ ವಿವರಣೆಗಳು ಬೇಕಾಗಿಲ್ಲ. ಹೀಗಾಗಿ ಪರವಾನಿಗೆ ಇಲ್ಲದ ಮತ್ತು ಅಪಾಯಕಾರಿ ರಸಾಯನಿಕಗಳ ಉತ್ಪಾಧನೆ ಮತ್ತು ಮಾರಾಟ ನಿರ್ಭಿಡೆಯಿಂದ ನೆಡೆಯುತ್ತಿದೆ. ಅತಿಯಾಗಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳಿಂದ ಭವಿಷ್ಯದಲ್ಲಾಗ ಬಹುದಾದ ಅಪಾಯಗಳ ಬಗ್ಗೆ  ಜಾಗೃತಿ ಎಲ್ಲರಲ್ಲೂ ಮೂಡ ಬೇಕಾಗಿದೆ. ಪರ್ಯಾ ಮಾರ್ಗ ಮತ್ತು ಸುರಕ್ಷಿತ ಆಹಾರ ಉತ್ಪಾದನೆಗೆ ರೈತರು ಆಧ್ಯತೆ ನೀಡ ಬೇಕಾಗಿದೆ. ಆಗ ಮಾತ್ರ ಪರಿಸ್ಥಿತಿ ಬದಲಾಗಲು ಸಾಧ್ಯ. ಕುರಿತಾದ ಒಂದು ಪಕ್ಷಿನೋಟ ಬರವಣಿಗೆಯಲ್ಲಿದೆ.

ಕೃಷಿ ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆ. ಭಾರತದಲ್ಲಿ 70% ಜನ ಕೃಷಿಯನ್ನೇ ಆಧರಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ರೈತನ ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಭಾರತೀಯ ಕೃಷಿ ಇಂದು ಒಂದು ಉದ್ಯಮವಾಗಿದೆ. ವ್ಯಾಪಾರಿ ಬೆಳೆಗಳ ಉತ್ಪನ್ನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸ್ವತಂತ್ರ ಪೂರ್ವದ ಭಾರತ 50 ಮಿಲಿಯನ್ ಟನ್ ಆಹಾರವನ್ನು ಉತ್ಪಾದನೆ ಮಾಡುತ್ತಿತ್ತು. ಈಗ 250 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಬೇಳೆಯುತ್ತಿದ್ದೆ. ಇನ್ನೊಂದೆಡೆ ಕೃಷಿ  ಭೂಮಿಯು ಕಮ್ಮಿಯಾಗುತ್ತಾ ಬರುತ್ತಿದೆ. ಜಾಗತಿಕವಾಗಿ ಆಹಾರ ಬೇಳೆಗಳ ಉತ್ಪನ್ನ ಮತ್ತು  ಬೇಡಿಕೆಯು ನಡುವಿನ ಅಂತರವು ಹೆಚ್ಚುತ್ತಿದೆ. ಕೃಷಿಯಲ್ಲಿನ ಬದಲಾವಣೆಗಳು ರೈತನ ವ್ಯಾಪಾರಿ ಮನೋಧರ್ಮ ಕ್ಕೆ ಉತ್ತೇಜನ ನೀಡುತ್ತಿದೆ. ಅಷ್ಟೇಅಲ್ಲ ಕೃಷಿ ಪದ್ಧತಿಯನ್ನೇ  ಭಾರತದಲ್ಲಿ  ಬದಲಾಯಿಸಿದೆ

1960 ರಲ್ಲಿ ಭಾರತದಲ್ಲಾದ ಹಸಿರುಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನು ಬದಲಿಸಿತು. ಗುಣಮಟ್ಟದ ಕೃಷಿ ಬೀಜಗಳ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಕೃಷಿಗೆ ಬುನಾದಿ ಹಾಕಿತ್ತು. ರೈತರು ಕೃಷಿ ಬಗ್ಗೆ ಯೋಚನೆಮಾಡುತ್ತಿದ್ದ ದಿಕ್ಕುನ್ನು ಬದಲಿಸಿತ್ತುಭತ್ತ ಗೋಧಿ ಹತ್ತಿ ಮತ್ತು ಇತರೆ ವ್ಯಾಪಾರಿ ಬೆಳೆಗಳು ಆಧುನಿಕ  ಕೃಷಿ ಕ್ರಾಂತಿಯಿಂದಾಗಿ ಹೆಚ್ಚು ಇಳುವರಿ ನೀಡಲಾರಂಭಿಸಿದವು.ಇದರಿಂದಾಗಿ      ಬೇಡಿಕೆ ಮತ್ತು ಉತ್ಪಾಧನೆಯ ನಡುವಿನ ಅಂತರ ಕಡಿಮೆ ಆಯ್ತುಹೀಗಾಗಿ ಹೆಚ್ಚಿನ ಬೆಳೆಯ ನಿರೀಕ್ಷೆಯಲ್ಲಿ ಹೆಚ್ಚು ಕ್ರಿಮಿನಾಶಕಗಳನ್ನು ಬಳಸುವುದು ಕೃಷಿ ಪದ್ಧತಿಯಲ್ಲಿ ಒಂದು ಅಭ್ಯಾಸವಾಗಿ ಹೋಯಿತು. ಕ್ರಿಮಿನಾಶಕಗಳು ಮನುಷ್ಯನ ಆರೋಗ್ಯವನ್ನು ಮಣ್ಣಿನ   ಗುಣಮಟ್ಟವನ್ನು ಹಾಗೂ ವಾತಾವರಣವನ್ನು ಹಾಳು ಮಾಡುತ್ತಿರುವುದು ರೈತನ ಅರಿವಿಗೆ ಬಾರದೆ ಹೋಯಿತು.     

ಕೀಟನಾಶಕಗಳು ಇಲ್ಲದೆ ವ್ಯವಸಾಯ ಇಲ್ಲವೇ ಇಲ್ಲ ಎಂದು ರೈತರನ್ನು ಬಲವಾಗಿ            ನಂಬಿಸಿರುವುದು ಆಧುನಿಕ ಕೃಷಿ ವಿಜ್ಞಾನದ ಬಹುದೊಡ್ಡ ಸಾಧನೆ ಎಂಬಂತಾಗಿದೆ. ಇದರಿಂದಾಗಿ ಇಂದು ಹಸಿರುಕ್ರಾಂತಿಯ ಹಳಿಗಳ ಮೇಲೆ ಕ್ಯಾನ್ಸರ್ ರೋಗಗಳನ್ನು  ಓಡಿಸುತ್ತಿರುವ ದುರಂತದ ಹಲವು ಕಥೆಗಳನ್ನು ಭಾರತದ ರಾಜ್ಯಗಳಲ್ಲಿ ನಾವಿಂದು ಕಾಣಬಹುದಾಗಿದೆ. ರಾಸಾಯನಿಕಗಳು ಆಹಾರದೊಂದಿಗೆ ಸೇರಿ ಮನುಷ್ಯನ ಆರೋಗ್ಯವನ್ನು  ಹಾಳುಮಾಡುವುದು ದಿರ್ಘಕಾಲದಲ್ಲಿ ಕಂಡು ಬರುವ ಪರಿಣಾಮವಾದರೆ. ಅಪಾಯಕಾರಿ ಕೀಟನಾಶಕಗಳನ್ನು ಬಳಕೆಮಾಡುವ ವೇಳೆ ಮನುಷ್ಯರು ಅಪಾಯಕ್ಕೆ ತುತ್ತಾಗುತ್ತಿರುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಇತ್ತೀಚಿಗೆ ಕೀಟನಾಶಕವು ಹಲವು ರೈತರನ್ನು ಮತ್ತು ಕೂಲಿಕಾರರನ್ನೇ ಆಪೋಶನ ತೆಗೆದುಕೊಂಡಿದೆ. ಯಾವತ್ಮಲ್ ನಗರದ ಸಮೀಪ ಹೊಲಗಳಲ್ಲಿ               ಹತ್ತಿಯ ಹೂವಿಗೆ ಕೀಟನಾಶಕ ಸಿಂಪಡಿಸುವಾಗ ಒಂದೇ ದಿನ 23 ಮಂದಿ ಮೃತರಾಗಿದ್ದಾರೆ. ವಿದರ್ಭದ ಪ್ರಾಂತ್ಯದಲ್ಲಿ ಒಟ್ಟು 39 ರೈತರು ಮತ್ತು ಕೂಲಿಕಾರರು ಜೀವ ತೆತ್ತಿದ್ದಾರೆ. ಕೀಟನಾಶಕದ ವಿಷ 1800 ರೈತರಿಗೆ ತಗುಲಿ ಅಸ್ವಸ್ಥರಾಗಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರ ಕಣ್ಣು ಕಾಣಿಸುತ್ತಿಲ್ಲ; ಕಿವಿ ಕೇಳಿಸುತ್ತಿಲ್ಲ; ಮಾತನಾಡಲೂ ಆಗುತ್ತಿಲ್ಲಇದೇನು ವಿದರ್ಭಕ್ಕೆ ಮಾತ್ರ ಸೀಮಿತ ಸಮಸ್ಯೆಯಲ್ಲ. ಇದಕ್ಕೆ ರಾಷ್ಟ್ರೀಯ ಸ್ವರೂಪವಿದೆ. ಆಂಧ್ರಪ್ರದೇಶದ ವಾರಂಗಲ್ ಮತ್ತು  ಇನ್ನಿತರ ಪ್ರದೇಶಗಳಲ್ಲಿ ಪ್ರತಿ ವರ್ಷ ಸಾವಿರಾರು ರೈತಾಪಿಗಳು ಮತ್ತು ಕೃಷಿ ಕೂಲಿಕಾರರು ಕೀಟನಾಶಕಗಳಿಂದ ಅನಾರೋಗ್ಯ ಪೀಡಿತರಾಗುತ್ತಾರೆ. ಒಂದು ಅಂಕಿ ಅಂಶದ ಪ್ರಕಾರ 2015ರಲ್ಲಿ 7 ಸಾವಿರ ಮಂದಿ   ಭಾರತದಲ್ಲಿ ಕೀಟನಾಶಕಗಳಿಂದ ಸಾವನ್ನಪ್ಪಿದ್ದಾರೆ

ವಿದರ್ಭದಲ್ಲಿ ಹತ್ತಿಗೆ ಬಿಳಿಯ ಬಂಗಾರವೆಂದು ಹೇಳುತ್ತಾರೆ . ಬಿಳಿಯ ಬಂಗಾರದ ಹೂವಿನ ಚಂಡಿಗೆ, ಪತಂಗದಂತೆ ಕಾಣುವ ಪಿಂಕ್ ಬಾಲ್ ವರ್ಮ್ ಕೀಟಗಳು ದಾಳಿ ಮಾಡಿದವು.   ಕೀಟಗಳು ತಾವೇ ಹತ್ತಿಯನ್ನು ತಿನ್ನುವುದಿಲ್ಲ. ಹತ್ತಿಯ ಮೊಗ್ಗಿನ ತಳದಲ್ಲಿ ಅವು ಇಟ್ಟ ತತ್ತಿಗಳಿಂದ    ಎಂಟು ಕಾಲಿನ ಹುಳುಗಳು ಹೊರ ಬಂದು  ಹತ್ತಿಯ ಮೊಗ್ಗಿನ ಪದರವನ್ನು ಭೇದಿಸಿ ಹತ್ತಿ ಮತ್ತು ಬೀಜಗಳೆರಡನ್ನೂ ಕೆರೆಯುತ್ತವೆ. ಇದರಿಂದ ಹೂವು ಅರಳುವ ಮೊದಲೆ ಬೆಳೆ ನಾಶವಾಗುತ್ತದೆ. ಕೀಟಪೀಡೆ ತಡೆಯಲು ರೈತರು ಪ್ರಬಲ ಕೀಟನಾಶಕಗಳನ್ನು ಸಿಂಪಡಿಸಿದರು. ಕೀಟ ನಾಶಕ ಒದಗಿಸುವ ಕಂಪನಿಗಳು ಕೀಟ ನಾಶಕಗಳ ಜೊತೆಗೆ ರಕ್ಷಣೆ ಒದಗಿಸುವ ಉಪಕರಣಗಳನ್ನು ನೀಡದೆ ಇದ್ದುದರಿಂದ ಸಿಂಪಡಿಸಿದವರು ರಾಸಾಯನಿಕಗಳಿಂದ ಬಾಧಿತರಾದರು.       

ವಿದರ್ಭದಲ್ಲಿನ ಕೀಟ ನಾಶಕಗಳಿಂದ ಉಂಟಾದ ಸಾವು ನೋವು ನಮ್ಮ ರೈತರ ಕಣ್ಣು  ತೆರೆಯಿಸಬೇಕಾಗಿದೆ. ಕೃಷಿಕರು ಕೀಟ ನಾಶಕವನ್ನು ವಿಷವೆಂದು ಅರಿತು ಅದಕ್ಕೆ ತಕ್ಕವಾದ ಬಳಕೆಯ ಸೂತ್ರವನ್ನು ಅನುಸರಿಸಲೇ ಬೇಕು. ಬಳಕೆಯ ಮೊದಲು ಯಾವ ಕೀಟಕ್ಕೆ ಯಾವ ನಾಶಕ ಸರಿಯಾದ್ದೆಂದು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂದು ತಜ್ಞರಿಂದ ತಿಳಿದು ಅದೇ ಪ್ರಕಾರ ಬಳಸಬೇಕು. ಕೀಟನಾಶಕಗಳ ಮೇಲೆ ಅಂಟಿಸಲಾದ ಚೀಟಿಯಲ್ಲಿ ಇರುವ ವಿವರಗಳನ್ನು, ಅಡ್ಡ ಪರಿಣಾಮಗಳನ್ನು ಮತ್ತು ಸೇವನೆಯಿಂದ ತೊಂದರೆಯಾದರೆ ತೆಗೆದುಕೊಳ್ಳಬೇಕಾದ ತುರ್ತು ಮತ್ತು ನಂತರದ ವೈದ್ಯಕೀಯ ವಿಧಾನಗಳನ್ನು ಅರಿತಿರಬೇಕು.      

ಕೀಟ ನಾಶಕಗಳನ್ನು ಸಿಂಪಡಿಸುವಾಗ ಸುರಕ್ಷತೆಯಯ ಉಪಕರಣಗಳಾದ ಉಡುಪು ಮತ್ತು               ಮುಸುಕನ್ನು ಸೂಚನೆಯಂತೆ ಬಳಸಲೇಬೇಕು. ಸೇವನೆಯಿಂದ ಅಥವಾ ಚರ್ಮಗಳ ಮೂಲಕ ಅದು ದೇಹದಲ್ಲಿ ಸೇರಬಾರದು. ಕೀಟ ನಾಶಕಗಳ ಬಳಕೆ ಮುಗಿದಂತೆ ದೇಹವನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಅಲ್ಲದೆ ಕೀಟ ನಾಶಕ ಹನಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅದರ ಅಡ್ಡ ಪರಿಣಾಮವು ರಕ್ತದಲ್ಲಿ ಕಡಿಮೆಯಿರುತ್ತದೆ. ತಜ್ಞರು ಸೂಚಿಸಿರುವ ಕೀಟನಾಶಕಗಳು ಸರಿಯಾದ ಪರಿಣಾಮ ನೀಡದೆ ಅವುಗಳನ್ನು ಅಥವಾ ಪ್ರಮಾಣವನ್ನು ಬದಲಿಸುವಾಗ ತಜ್ಞರ ಸಲಹೆಯನ್ನು ಮತ್ತೆ ಪಡೆಯಲೇ ಬೇಕು.

ವಿದರ್ಭದ ದುರಂತದ ಘಟನೆಗಳು ಮತ್ತೆ ಮರುಕಳಿಸದಂತೆ, ದೇಶದ ಎಲ್ಲೆಡೆ ಸುಧಾರಣಾ              ಕ್ರಮಗಳನ್ನು ಜರುಗಿಸುವ ಕಾಲ ಬಂದಿದೆ. ರಾಜ್ಯ ಸರಕಾರಗಳು ಕೀಟ ನಾಶಕಗಳ ಧಾರಕಗಳಿಗೆ ಸುರಕ್ಷತೆಯನ್ನು ಸುಲಭವಾಗಿ ಗುರುತಿಸಬಲ್ಲ ಕಲರ್ ಬ್ಯಾಂಡ್ ಗಳನ್ನು ನಿಗದಿಪಡಿಸ ಬೇಕುಅಲ್ಲದೆ ಸಿಂಪಡಿಸುವ ಕೂಲಿಕಾರರಿಗೆ ಮತ್ತು ರೈತರಿಗೆ ಸೂಕ್ತ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕುಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಗಳಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳು ಬೇಕೆಂದು ಗುರುತಿಸಿ, ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಸೂಕ್ತ ತಿಳುವಳಿಕೆ ಮತ್ತು ತರಬೇತಿಯ ಶಿಭಿರಗಳನ್ನು ನಡೆಸಬೇಕು. ರಾಸಾಯನಿಕ ತಯಾರಿಸುವ ಕಂಪನಿಗಳ ಸಹಾಯವನ್ನು ತರಬೇತಿ ನೀಡುವಲ್ಲಿ  ಗ್ರಾಮದ ಅಧಿಕಾರಿಗಳು ಪಡೆಯಬೇಕು.

ವಿದರ್ಭದಲ್ಲಿನ  ದುರಂತ ಎಲ್ಲಿಯೂ ಮರುಕಳಿಸದಂತೆ ಆಗ ಬೇಕಾದರೆ ರೈತರು ಸರಿಯಾದ                 ಅನುಸ್ಟಾನದಲ್ಲಿ ಯಾವುದೇ ರೀತಿಯ ಅಸಡ್ಡೆ ಮಾಡಬಾರದು. ಕೃಷಿ ಪ್ರಧಾನ ದೇಶದಲ್ಲಿ  ಕೃಷಿಕರ ಒಳಿತು ಮತ್ತು  ಯಶಸ್ಸು ತುಂಬ ಮುಖ್ಯಔಷಧ ಕಂಪನಿಗಳ ನಿಯಮ ಬಾಹಿರ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಅವುಗಳನ್ನು ಕಠಿಣ ದಂಡನೆಗೆ ಒಳಪಡಿಸಲೇಬೇಕು. ನ್ಯಾಯಪರತೆಯ ಖಾತ್ರಿ ಯಾವುದೇ  ಸಮಾಜದ ಮೂಲಭೂತ ಲಕ್ಷಣ ಎಂಬುದನ್ನು ನಾವೆಲ್ಲರು ಮರೆಯಬಾರದು    

                               

                               

 


No comments:

Post a Comment