Saturday, 2 January 2021

ಸೂರ್ಯನ ಅಂತ್ಯ.

 

 


ವಿಜ್ಞಾನವೊಂದು ಸತ್ಯದ ಹುಡುಕಾಟ! ಸತ್ಯವೆನ್ನುವುದು ಹೋಗಲು ಹಾದಿಗಳಿಲ್ಲದ ನಾಡು, ತತ್ವ ನಂಬಿಕೆ ಅಥವಾ ಕರ್ಮಾಚರಣೆಗಳಿಂದ ನಾವು ಆಸೀಮೆಯನ್ನು ತಲುಪಲು ಸಾಧ್ಯವಿಲ್ಲ. ತಾತ್ವಿಕ ತಿಳುವಳಿಕೆಯೊಂದೆ ಅಲ್ಲಿಗೆ ದಾರಿ ತೋರಿಸುವುದು.ನಮ್ಮ ತಿಳಿವಿನ ಪರಿಧಿಯನ್ನು ವೃಧ್ದಿಸುವುದೆ ಬರವಣಿಗೆಯ  ಉದ್ದೇಶ.

ಉದಯೇ ಬ್ರಹ್ಮ ಸ್ವರೂಪೇ, ಮಧ್ಯತೇ ಮಹೇಶ್ವರ, ಅಸ್ಥಮಾನೇ ಸ್ವಯಂ ವಿಷ್ಣುಂ, ತ್ರಯೀ ಮೂರ್ತೆ ದಿವಾಕರ. ಉದಯ ಕಾಲದಲ್ಲಿ ಬ್ರಹ್ಮನ ಸ್ವರೂಪವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮಹೇಶ್ವರನ ಉಗ್ರ ರೂಪ ತಾಳಿ, ಸಂಜೆ ಮುಳುಗುವ ವೇಳೆಗೆ ಸರ್ವ ರಕ್ಷಕ ಸ್ವಯಂ ವಿಷ್ಣು ಸ್ವರೂಪಿಯಾಗುವ, ಸೂರ್ಯ ದೇವನು ತನ್ನೊಳಗೆ ಸೃಷ್ಠಿ, ಸ್ಥಿತಿ, ಲಯ ಮೂರು ಸ್ಥಿತಿಗಳಿಗೆ ಕಾರಣೀಭೂತರಾದ ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾಗಿದ್ದಾರೆ ಎಂದು ಅನಾದಿಕಾಲದಿಂದಲೂ ನಮ್ಮ ಪುರಾಣಗಳಿಂದ ತಿಳಿದದ್ದನ್ನು ನಂಬಿ ಬಂದಿದ್ದೇವೆ. ನಮ್ಮ ಆಧ್ಯಾತ್ಮ ಮತ್ತು ಪುರಾಣಗಳಲ್ಲಿ ಅನಂತವಾಗಿರುವ ಸೂರ್ಯದೇವನಿಗೆ, ಒಂದು ಕೊನೆಯ ದಿನವಿದೆ ಎಂದು ವಿಜ್ಞಾನ ಹೇಳುತ್ತಿದೆ. ಹಾಗಿದ್ದರೆ  ದಿನ ಯಾವುದು? ಅಂದು ಏನೆಲ್ಲಾ ಆಗುವುದು ಎಂಬ ಬಗ್ಗೆ ಒಂದು ಅವಲೋಕನವೇ  ಈ ಬರವಣಿಗೆ 

ಸೂರ್ಯನ ತಾಪವನ್ನು ತಾಳಲಾಗದೆ, ಅವನ ಪತ್ನಿ ಸಂಧ್ಯಾ ದೇವಿ, ತನ್ನ ಮುಖವನ್ನು ಎಂದಿಗೂ ಎತ್ತಿ ಸೂರ್ಯನನ್ನು ನೋಡಿಲ್ಲವೆಂದು ಪುರಾಣದ ಕತೆಗಳು ಹೇಳುತ್ತವೆ. ಸೂರ್ಯ ನಾರಾಯಣನು ಅನಂತ ಅನನ್ಯ, ಪ್ರಕಾಶದ ಕೇಂದ್ರ ಬಿಂದು ಎಂಬುದಾಗಿ ನಾವೆಲ್ಲಾ ಒಪ್ಪಿ ಕೊಂಡಿದ್ದೇವೆ. ನಂಬಿಕೆಯ ನೆಲೆಯಲ್ಲಿ ಪುರಾಣದ ಕತೆಗಳು ನೆಡೆದು ಬಂದಿವೆ. ಆದರೆ ವಿಜ್ಞಾನವು, ಅರಿವಿಗೆ ಬಂದ ಜ್ಞಾನವನ್ನು ಮಾತ್ರ ಒಪ್ಪಿಕೊಳ್ಳುತ್ತವೆ. ಆಧಾರವಿಲ್ಲದ, ಸಾಕ್ಷೀಕರಿಸದ ವಿವರಗಳನ್ನು ನಮ್ಮ ಅರಿವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಜಿಜ್ಞಾಸೆಯ ನೆಲೆಯಲ್ಲಿ ನೆಡೆದ ವೈಜ್ಞಾನಿಕ ಸಂಶೋಧನೆಗಳೇ, ಸೂರ್ಯನ ಹುಟ್ಟು ಮತ್ತು ಸಾವಿನ ಬಗ್ಗೆ ನಿಖರವಾದ ವಿಶ್ಲೇಷಣೆಗಳನ್ನು ಕೊಟ್ಟಿದೆ. ಶತಮಾನ ಕಂಡ ಖಗೋಳ ವಿಜ್ಞಾನದ, ಅಧ್ಯಯನವು ಮನುಕುಲದ ಮುಂದಿನ ದಾರಿಗೆ ದೀಪವಾಗಿದೆ.               

ಮೂಡಲ ಮನೆಯ, ಮುತ್ತಿನ ನೀರಿನ ಎರಕವಾ ಹ್ಯೊದಾ, ನುಣ್ಣನೇ ಎರಕವಾ ಹ್ಯೊದಾ, ಬಾಗಿಲ ತೆರೆದು, ಬೆಳಕು ಹರಿದು ಜಗವೆಲ್ಲಾ ತ್ಯೊದಾ. ರೀತಿಯಾಗಿ ನಾಲ್ಕು ಸಾವಿರ ಕೋಟಿ ವರ್ಷಗಳಿಂದ ನಿತ್ಯ ತನ್ನ ಕೆಲಸವನ್ನು ತಪ್ಪದೇ ಮಾಡುತ್ತ ಬಂದಿರುವ ಸೂರ್ಯ ಒಮ್ಮೆ ಇಲ್ಲವಾದರೇ ಏನಾಗಬಹುದು? ಎಂಬುದು ಕಲ್ಪನೆಗೂ ಅಸಾಧ್ಯವಾದದ್ದು. ಭೂಮಿ ಮೇಲಿನ ಸಕಲ ಚರಾಚರಗಳ ಜೀವ ಸೆಲೆ ಸೂರ್ಯನ ಬೆಳಕು. ಎಲೆಗಳ ಮೇಲೆ ,ಹೂಗಳ ಒಳಗಿನ ಅಮೃತದ ಬಿಂದುವಿದು.   

ಸಾವಿರ ಬೆಳಕಿನ ವರ್ಷಗಳಷ್ಟು ದೂರ ಮಹಾಕಾಯವೊಂದು ನ್ಯೂಕ್ಲಾನಿಕ್ ಮಾಲ್ಯುಕ್ಯೂಲರ್ ಗ್ಯಾಸನ್ನು ಹೊಂದಿರುವ ಮೋಡಗಳಲ್ಲಿ ಒಂದು ದೊಡ್ಡ ಭಾಗ ಒಡೆದು ಬೇರಾಗುತ್ತದೆ.ಇದರಿಂದಲೇ ನಮ್ಮ ಸೌರ ಮಂಡಲ ರಚನೆಯಾಯ್ತು ಎಂಬ ವಾದವನ್ನು Nebular Theory ಎಂದು ಕರೆಯುತ್ತಾರೆ. Theory ಪ್ರಕಾರ ಗ್ಯಾಸ್ನ ಗೋಳದಲ್ಲಿ ಎರಡು ಅಥವಾ ಮೂರು ಸೂಪರ್ ನೋವಾಗಳ ಸೃಷ್ಠಿಯಾಗಿರಬಹುದು. ಇದರಿಂದಾಗಿ ಮೋಡದ ಒಂದು ದೊಡ್ಡ ಭಾಗ ಅದರಿಂದ ಬೇರ್ಪಟ್ಟಿರಬಹುದು. ಅತೀ ಹೆಚ್ಚಾದ ಗುರುತ್ವದ ಬಲವನ್ನು ಹೊಂದಿದ್ದ ಅನಿಲ ಇದರಲ್ಲಿ ಇದ್ದದ್ದರಿಂದ ಮೋಡವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚಾಗಿ ಉರಿಯಲು ಪ್ರಾರಂಭವಾಯಿತು. ಉರಿಯುವಿಕೆಯಿಂದಾಗಿ ಇದರ ಗತಿ ಮತ್ತು ಒತ್ತಡ ಹೆಚ್ಚಾಯಿತು. ಹೀಗಾಗಿ ತನ್ನೊಳಗೆ ಸುತ್ತಲು ಪ್ರಾರಂಭವಾಯಿತು. ಸುತ್ತುವಿಕೆಯ ವೇಗ ಒಂದೆಡೆ ಹೆಚ್ಚಾಗುತ್ತಿದ್ದಂತೆ ಇತ್ತ ಸಮತೋಲನಕ್ಕಾಗಿ ಉರಿಯುವುದು ಹೆಚ್ಚಾಯಿತು. ಕಾರಣದಿಂದಾಗಿ ಗೋಳವು ಹೆಚ್ಚು ಹೆಚ್ಚು ಬಿಸಿಯಾಗುತ್ತ ಹೋಯಿತು. ವೇಗವಾದ ತಿರುಗುವಿಕೆ ಮತ್ತು ಅದರ ಗತಿಯಿಂದಾಗಿ ದ್ರವರೂಪದ ಅನಿಲ ಇದ್ದ ಭಾಗ ಒಂದು ಗೋಳಾಕಾರದ ರೂಪದಲ್ಲಿ ಮಾರ್ಪಾಡಾಯಿತು. ಉಳಿದ ಭಾಗ ಗೋಳದ ಸುತ್ತ ಸುತ್ತಲು ಪ್ರಾರಂಭವಾಯಿತು. ಘಟನೆ ಪೂರ್ಣಗೊಳ್ಳಲು ಕೋಟಿ ವರ್ಷಗಳೇ ಬೇಕಾಯಿತು.    

ಕಾಲಕ್ರಮೇಣ ಬೆಂಕಿಯ ಉಂಡೆಯ ಉಷ್ಣತೆ ಕಡಿಮೆಯಾಗ ತೊಡಗಿತು. ಹೈಡ್ರೋಜನ್ ಮತ್ತು ಹೀಲಿಯಮ್ ನಿಂದ ಕೂಡಿದ ಮಧ್ಯಭಾಗ ಸೌರಮಂಡಲದ ಸೂರ್ಯನಾಗಿ ರೂಪಗೊಂಡಿತು. ಸೂರ್ಯನ ಸುತ್ತ ಸುತ್ತುತ್ತಿದ್ದ ಉಳಿದ ವಸ್ತುಗಳಿಂದ ಸೌರಮಂಡಲದ ಉಳಿದ ಗ್ರಹಗಳ ನಿರ್ಮಾಣವಾಯಿತು. ಆಕಾಶ ಗಂಗೆಯಲ್ಲಿನ ನೂರು ಕೋಟಿಗೂ ಅಧಿಕ ನಕ್ಷತ್ರಗಳಲ್ಲಿ ಸೂರ್ಯನು ಒಬ್ಬ. ಈತ ಝೀ 2 category ನಕ್ಷತ್ರವಾಗಿದ್ದಾನೆ. ಇದು ಆಕಾಶಗಂಗೆಯಲ್ಲಿನ ನಕ್ಷತ್ರಗಳ 1/10 ಭಾಗವಾಗಿದೆ. ಸೌರ ಮಂಡಲದಲ್ಲಿ ಎಲ್ಲಾ ಗ್ರಹಗಳು ಹೇಗೆ ಸೂರ್ಯನಿಗೆ ಸುತ್ತುತ್ತವೆಯೋ ಹಾಗೆ ಸೂರ್ಯನು ಸೌರಮಂಡಲದೊಂದಿಗೆ ಆಕಾಶ ಗಂಗೆಯ ಮಧ್ಯ ಭಾಗವನ್ನು ಸುತ್ತುತ್ತಿದ್ದಾನೆ. ಪರಿಕ್ರಮಕ್ಕೆ 25 ಕೋಟಿ ವರ್ಷಗಳು ಬೇಕು. ಸೌರ ಮಂಡಲದಲ್ಲಿ ಅತೀ ಹೆಚ್ಚು ದ್ರವ ರೂಪದ ವಸ್ತುವನ್ನು ಸೂರ್ಯ ಮಾತ್ರ ಹೊಂದಿದ್ದಾನೆ. ಸೂರ್ಯನ ವ್ಯಾಸ 1392000 ಕಿಲೋ ಮೀಟರ್ ಇದೆ. ಈತ ಭೂಮಿಗಿಂತ 10 ಲಕ್ಷ ಪಟ್ಟು ದೊಡ್ಡವನಾಗಿದ್ದಾನೆ. ಹಾಗೂ 15 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದಾನೆ.ಇಷ್ಟು  ದೂರದಲ್ಲಿದ್ದರೂ ಅವನ ಕಿರಣಗಳು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 8 ನಿಮಿಷ 16 ಸೆಕೆಂಡು. ಸೂರ್ಯ ನೆನ್ನುವ ನಕ್ಷತ್ರವು ಹೀಲಿಯಮ್, ಹೈಡ್ರೋಜನ್ ಅನಿಲ ರಾಶಿಗಳ ಪಿಂಡವಾಗಿವೆ.  

ಸುರ್ಯನ ಕೇಂದ್ರ ಭಾಗವನ್ನು ಕೋರ್ ಎಂದು ಕರೆಯುತ್ತಾರೆ.ಇಲ್ಲಿನ ಉಷ್ಣತೆಯು ಒಂದು ಕೋಟಿ 56 ಲಕ್ಷ ಸೆಲ್ಸಿಯಸ್ ಇದೆ. ಇನ್ನು ಸೂರ್ಯನ ಹೊರ ಮೈ ಮೇಲಿನ ಉಷ್ಣತೆಯು 6 ಕೋಟಿ ಸೆಲ್ಸಿಯಸ್ ಆಗಿದೆ. ಸೂರ್ಯನಲ್ಲಿ ಪ್ರತಿ ಸೆಕೆಂಡಿಗೆ 6570 ಲಕ್ಷ ಟನ್ ಹೈಡ್ರೋಜನ್ ಅನಿಲವನ್ನು 6530 ಲಕ್ಷಟನ್ ಹೀಲಿಯಮ್ ಆಗಿ ಪರಿವರ್ತನೆ ಮಾಡುತ್ತದೆ. ಮಧ್ಯದಲ್ಲಿ ಉಳಿದ 40 ಲಕ್ಷ ಟನ್ ಮಾತ್ರ ಬೆಳಕಿನ ರೂಪವಾಗಿ ಬದಲಾಗುತ್ತದೆ. ಹೀಗೆ ಇದು ಇನ್ನು 5000 ಕೋಟಿ ವರ್ಷಗಳವರೆಗೆ ನಿರಂತರ ನೆಡೆಯುವ ಪ್ರಕ್ರಿಯೆ ಆಗಿದೆ. ಯಾವಾಗ ಕೇಂದ್ರ ಭಾಗದಲ್ಲಿ ಹೈಡ್ರೋಜನ್ ಅನಿಲವು ಮುಗಿದು ಹೋಗುವುದೋ, ಸೂರ್ಯ ತಣ್ಣಗಾಗಲು ಪ್ರಾರಂಭಿಸುತ್ತಾನೆ. ಸೂರ್ಯನ ಮೇಲಮೈತಣ್ಣಗಾದಂತೆ ಅದರ ವ್ಯಾಸವು ಹಿಗ್ಗುತ್ತಾ ಹೋಗುತ್ತದೆ. ಹೀಗೆ ಉಬ್ಬುತ್ತಾ ಇಗಿರುವಾ ಗಾತ್ರಕ್ಕಿಂತ ಸೂರ್ಯ ಮೂರು ಪಟ್ಟು ದೊಡ್ಡವನಾಗುತ್ತಾನೆ. ರೀತಿಯಲ್ಲಿ ಉಬ್ಬುತ್ತಾ ಹೋಗುವ ನಕ್ಷತ್ರವನ್ನು ರೆಡ್ ಜಾಯಿಂಟ್ ಎಂದು ಕರೆಯುತ್ತಾರೆ.               

ನಮ್ಮ ಸೂರ್ಯ ಮಂಡಲದ ಸೂರ್ಯ ಕೂಡ ಒಂದು ದಿನ ರೆಡ್ ಜಾಯಿಂಟ್ ಆಗುತ್ತಾನೆ. ಹೀಗೆ ಬೆಳೆಯುವ ಹಂತದಲ್ಲಿ ಸೌರಮಂಡಲದ ಗ್ರಹಗಳನ್ನು ನುಂಗುತ್ತಾ ಸಾಗುತ್ತಾನೆ. ಮೂದಲಿಗೆ ಬುಧ, ಶುಕ್ರ ಗ್ರಹಗಳನ್ನು ನುಂಗಿದ ಈತನ ಸರದಿಯಲ್ಲಿ ಮುಂದಿನ ಗ್ರಹ ಭೂಮಿ. ಆಕಾಶಗಂಗೆಯಲ್ಲಿ ಸೂರ್ಯ ರೆಡ್ ಜಾಯಿಂಟ್ ಆಗಿ ಬದಲಾಗುವ ಮೂದಲು ಅವನಲ್ಲಿನ ತಾಪಮಾನ ಹೆಚ್ಚುತ್ತಾ ಹೊಗುತ್ತದೆ ಇದರಿಂದಾಗಿ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಅಂತ್ಯವಾಗಿರುತ್ತದೆ. ಸೂರ್ಯನಲ್ಲಿನ ಹೈಡ್ರೋಜನ್ ಉರಿದು ಬರಿದಾದಾಗ ಹೀಲಿಯಮ್ ಮಾತ್ರ ಉಳಿದಿರುತ್ತದೆ. ಹೀಲಿಯಮ್ ಉರಿಯುವ ಮೂಲಕ ಕಾರ್ಬನ್ ಆಗಿ ಬದಲಾಗುತ್ತ ಹೋಗುತ್ತದೆ. ಇದರಿಂದಾಗಿ ಆತನ ಹಿಗ್ಗುವಿಕೆ ಇನ್ನು ಹೆಚ್ಚಾಗುತ್ತಾ ಹೋಗುತ್ತದೆ. ಪ್ರಕ್ರಿಯೆಯಿಂದ ಸೂರ್ಯನ ಮೇಲಮೈ ಒಡೆದು ಚೂರು ಚೂರಾಗಿ ಆಕಾಶದಲ್ಲಿ ಲೀನವಾಗಿರುತ್ತದೆ. ಕೊನೆಯಲ್ಲಿ ಉಳಿದ ಭಾಗವು ಭೂಮಿಯ ಗಾತ್ರದಷ್ಟಾಗಿರುತ್ತದೆ. ಆದರೂ ಅದರ ಉಷ್ಣತೆಯ ತೀರ್ವತೆಯನ್ನು ಉಹಿಸಲು ಅಸಾಧ್ಯ.ಇದನ್ನು ಖಗೋಳ ವಿಜ್ಞಾನದಲ್ಲಿ ವೈಟ್ ಬ್ಲಫ್ ಎಂದು ಕರೆಯುತ್ತಾರೆಶ್ವೇತ ವಾಮನನ ರೂಪ ತಾಳಿದ ಸೂರ್ಯ ತನ್ನ ನಿರಂತರ ಉರಿಯುವಿಕೆಯನ್ನು ಮುಂದುವರಿಸುತ್ತಾನೆ. ತನ್ನಲ್ಲಿನ ಅನಿಲವೆಲ್ಲಾ ಬರಿದಾದಾಗ ಬ್ಲಾಕ್ ಹೋಲ್ ಆಗಿ ಬದಲಾಗುತ್ತಾನೆ. ರೀತಿಯಾಗಿ ಸೂರ್ಯನ ಅಂತ್ಯವಾಗುವುದು. ನಮ್ಮ ಸೂರ್ಯನ ಹಾಗೆ ಇರುವ  ಎಷ್ಟೋ ನಕ್ಷತ್ರಗಳ ಅಂತ್ಯ ಆಕಾಶ ಗಂಗೆಯಲ್ಲಿ ಆಗಿದೆ. ಹಾಗೇ ಎಷ್ಟೋ ಸೂರ್ಯನ ಉಗಮಗಳು ಇಂದಿಗೂ ಆಗುತ್ತಿವೆ. ಅಂತರಿಕ್ಷೆಯ ಪ್ರಕ್ರಿಯೆ ನಿರಂತರ.     

               

                               

                               

                               

                               

                               

 

No comments:

Post a Comment