Saturday, 2 January 2021

ಕಪ್ಪು ರಂಧ್ರ

 




ವಿಜ್ಞಾನವೊಂದು ಸತ್ಯದ ಹುಡುಕಾಟ! ಸತ್ಯವೆನ್ನುವುದು ಹೋಗಲು ಹಾದಿಗಳಿಲ್ಲದ ನಾಡು, ತತ್ವ ನಂಬಿಕೆ ಅಥವಾ ಕರ್ಮಾಚರಣೆಗಳಿಂದ ನಾವು ಆಸೀಮೆಯನ್ನು ತಲುಪಲು ಸಾಧ್ಯವಿಲ್ಲ. ತಾತ್ವಿಕ ತಿಳುವಳಿಕೆಯೊಂದೆ ಅಲ್ಲಿಗೆ ದಾರಿ ತೋರಿಸುವುದು.ನಮ್ಮ ತಿಳಿವಿನ ಪರಿಧಿಯನ್ನು ವೃಧ್ದಿಸುವ ಉದ್ದೇಶವೆ ಈ ಬರವಣಿಗೆಯದ್ದು.

ಎಲ್ಲರನ್ನು ಎಲ್ಲವನ್ನು ತನ್ನ ಒಡಲಿಗೆ ಸೆಳೆದು ಕೊಳ್ಳುವ ಈ ಕಪ್ಪು ರಂಧ್ರಗಳಿಂದ ಸೂರ್ಯನಿಗೂ ಆಪತ್ತು ಬಂದಿದೆಯಾ ? ಬೆಳಕು ಭೇದಿಸಲಾಗದ ಈ ಕಪ್ಪು ರಂಧ್ರಗಳ ಬಗ್ಗೆ ಎಲ್ಲ ಸತ್ಯಗಳನ್ನು ವಿಜ್ಞಾನಿಗಳು ಭೇದಿಸಿದ್ದಾರಾ? ಇದರ ಬಗ್ಗೆ ಇನ್ನೂ ರಹಸ್ಯಗಳಿವೆಯೇ ? ಎಂಬ ಬಗ್ಗೆ ಒಂದು ಅವಲೋಕನವೆ ಈ ಬರವಣಿಗೆ

ಬೆಳಕು ಭೇದಿಸದ ಜಾಗವಿಲ್ಲ. ಹೀಗಾಗಿ ಬ್ರಹ್ಮಾಂಡದಲ್ಲಿ ಬೆಳಕು ಸಮಯದ ನಿರ್ಧಾರಕ್ಕೆ ಕಾರಣವಾಗಿದೆ. ಆದರೆ ಕಪ್ಪು ರಂಧ್ರಗಳನ್ನ ಬೆಳಕಿಗೂ ಭೇದಿಸಲು ಆಗಿಲ್ಲ. ಹೀಗಾಗಿ ಕಪ್ಪು ರಂಧ್ರಗಳಲ್ಲಿ ಸಮಯವೆನ್ನುವುದೆ ಇಲ್ಲ. ಬೆಳಕಿಲ್ಲದ ಜಾಗವನ್ನು ನಾವು ಕತ್ತಲು ಎನ್ನುತ್ತೇವೆ. ಕತ್ತಲು ಅಂದರೆ ಕಪ್ಪು. ಈ ಕಾರಣದಿಂದಾಗಿ ಇವುಗಳನ್ನು ಕಪ್ಪು ರಂಧ್ರಗಳು ಎಂದು ಕರೆಯುತ್ತಾರೆ. ಹಾಗಿದ್ದರೆ ಈ ಕಪ್ಪು ರಂಧ್ರಗಳ ಒಡಲಲ್ಲಿ ಏನಿದೆ? ಇವುಗಳ ಸೃಷ್ಟಿ. ಇರುವಿಕೆ ಮತ್ತು ಇವುಗಳಲ್ಲಿನ ರಹಸ್ಯಗಳ ಮೇಲೆ ಬೆಳಕು ಚೆಲ್ಲುವುದರಿಂದ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲಾಗುವುದೆ ? ಎಂಬ ಹಲವು ಜಿಜ್ಞಾಸೆಗಳು ವಿಜ್ಞಾನಿಗಳಲ್ಲಿದೆ.      

26 ಸಾವಿರ ಬೆಳಕು ವರ್ಷಗಳಷ್ಟು ದೂರ ಬ್ರಹ್ಮಾಂಡದ ಮಧ್ಯ ಭಾಗದ ವರೆಗೆ ಕ್ರಮಿಸಿ ಅಲ್ಲಿನ ಒಂದು ಸುಂದರ view point ನಲ್ಲಿ ನಿಂತು ರಾತ್ರಿಯ ಹೊತ್ತು ಬ್ರಹ್ಮಾಂಡವನ್ನು ನೋಡುತ್ತಿದ್ದೇವೆ ಎಂದು ಭಾವಿಸಿ ಕೊಳ್ಳಿ. ಸಾವಿರಾರು ಮಿಲಿಯನ್ ಗಟ್ಟಲೆ ನಕ್ಷತ್ರಗಳ ರಮಣೀಯ ದೃಶ್ಯ ಕಾಣುತ್ತದೆ. ನಿಮ್ಮನ್ನು ಸುತ್ತುವರೆದ ನಕ್ಷತ್ರ ಪುಂಜಗಳ ವಿಹಂಗಮ ನೋಟದ ಮಧ್ಯದಲ್ಲಿ ಪ್ರಕಾಶಮಾನವಾದ  ಅಪರಿಚಿತ ಬೆಳಕಿನ ಉಂಡೆಯೊಂದು ಉಗಮಿಸುತ್ತದೆ.  ಅದರ ಗುರುತ್ವಾಕರ್ಷಣೆಯ ಬಲದಿಂದ ತಪ್ಪಿಸಿ ಕೊಳ್ಳಲು ಅಲ್ಲಿನ ಯಾವ ವಸ್ತುಗಳಿಗೂ ಆಗುತ್ತಿಲ್ಲ ಬೆಳಕಿಗೂ ಕೂಡಾ. ಅಪರಿಮಿತವಾದ ವೇಗದಲ್ಲಿ ತನ್ನ ಸುತ್ತಲಿನ ನಕ್ಷತ್ರಗಳನ್ನು ನುಂಗುತ್ತಾ ಗಾತ್ರದಲ್ಲಿ ದೊಡ್ಡದಾಗುತ್ತಾ ಸಾಗುತ್ತಿರುವ ಆ ದೈತ್ಯ ವಸ್ತುವೆ ಬ್ಲ್ಯಾಕ್ ಹೋಲ್.    

ನಮ್ಮ ಸೌರ ಮಂಡಲದಲ್ಲಿನ ಸೂರ್ಯನಿಗಿಂತ ಇದು ಗಾತ್ರ ಮತ್ತು  ಭಾರದಲ್ಲಿ 10 ಪಟ್ಟು ದೊಡ್ಡದು. ಇಂತಹ ಅನಾಹುತಕಾರಿ ಸಾವಿರಾರು ಕಪ್ಪು ರಂಧ್ರಗಳು ಆಕಾಶ ಗಂಗೆಯಲ್ಲಿವೆ. ನಮ್ಮ ಬ್ರಹ್ಮಾಂಡದ ಮಧ್ಯ ಬಾಗದಲ್ಲೂ ಒಂದು ಬ್ಲಾಕ್ ಹೋಲ್ ಇದೆ. ಇಂತಹ ಅನಾಹುತಕಾರಿ ಬ್ಲಾಕ್ ಹೋಲಗಳು ಹುಟ್ಟಿದ್ದು ಹೇಗೆ ? ಗಾತ್ರದಲ್ಲಿ ಇಷ್ಟು ದೊಡ್ಡದಾಗಿದ್ದು ಹೇಗೆ ? ಇವುಗಳ ಜೀವಿತಾವಧಿ ಎಷ್ಟು? ಏನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟರೆ ನಮಗೆ ಸೌರಮಂಡಲದ ಉಗಮ, ನಕ್ಷತ್ರಗಳ ರಚನೆ, ಅಷ್ಟೆ ಅಲ್ಲ ಭೂಮಿ ಮೇಲೆ ಬದುಕು ವಿಕಾಸಗೊಂಡ ಬಗ್ಗೆ ಇರುವ ಎಲ್ಲ ರಹಸ್ಯಗಳು ಬಯಲಾಗುತ್ತವೆ. 


 ಕಣ್ಣಿಗೆ ಕಾಣದ ನಮ್ಮ ಸೌರಮಂಡಲದಿಂದ ಸಾವಿರಾರು ಲಕ್ಷ ಬೆಳಕು ವರ್ಷಗಳಷ್ಟು ದೂರವಿರುವ ಈ ಬ್ಲಾಕ್ ಹೋಲಗಳ ಅಧ್ಯಯನವು ಖಗೋಳ ಶಾಸ್ತ್ರದ ವಿಜ್ಞಾನಿಗಳಿಗೆ ಸದಾಕಾಲಕ್ಕೂ ಸವಾಲಿನ ಸಂಗತಿ. ಅವಿಷ್ಕಾರಗಳಿಗೆ ಸವಾಲುಗಳೆ ಪ್ರೇರಣೆಗಳು. ಮನುಷ್ಯನ ಅನಂತ ಹುಡುಕಾಟಗಳಿಗೆ ನಮ್ಮ ಪ್ರಕೃತಿ ಮತ್ತು ಪರಿಸರ ಎಲ್ಲ ಕಾಲಕ್ಕೂ ಸಹಾಯ ಮಾಡುತ್ತಾ ಬಂದಿದೆ. ತನ್ನಲ್ಲಿ ಅಡಗಿರುವ ನಿಗೂಢತೆಯನ್ನ ಅಧ್ಯಯನಮಾಡಲು ಕೆಲ ಒಮ್ಮೆ ಬ್ರಹ್ಮಾಂಡವು ಅವಕಾಶ ಮಾಡಿ ಕೊಡುತ್ತದೆ.  


19ನೇ ಮಾರ್ಚ 2008 ರಂದು ವಿಶ್ವದ ಎಲ್ಲೇಡೆ ಇರುವ ಖಗೋಳ ಶಾಸ್ತ್ರದ ವಿಜ್ಞಾನಿಗಳಿಗೆ ಅಧ್ಯಯನದ ಅನುಕೂಲಕ್ಕಾಗಿ ತುರ್ತು ಮಾಹಿತಿಯೊಂದನ್ನು ರವಾನಿಸಲಾಗಿತ್ತು. ಈ ಸಂದೇಶವು ಅಂತರಿಕ್ಷೇಯ ಕಕ್ಷೆಯಲ್ಲಿ  ಪರಿವೀಕ್ಷಣೆಗಾಗಿರುವ ಸ್ವಿಫ್ಟ್ ಎನ್ನುವ ಅಂತರಿಕ್ಷ ನೌಕೆಯಿಂದ ಭೂಮಿಗೆ ಬಂದ ಮಾಹಿತಿಯನ್ನು ಆಧರಿಸಿದ್ದಾಗಿತ್ತು. ನಮ್ಮ  ಸೌರಮಂಡಲಕ್ಕೆ ಅತ್ಯಂತ ಸಮೀಪದಲ್ಲಿ ಪ್ರಕಾಶಮಾನವಾದ ವಸ್ತು ಒಂದು ಕಾಣಿಸಿ ಕೊಂಡಿತು. ಈ ಮಾಹಿತಿ ಸಿಕ್ಕ ತಕ್ಷಣ ಟೆಕ್ಸಸ್ ಮತ್ತು ಚಿಲ್ಲಿ ನಗರಗಳಲ್ಲಿನ ಬಾಹ್ಯಕಾಶ ಕೇಂದ್ರಗಳ ರೋಬೋಟಿಕ್ ಟೆಲಿಸ್ಕೋಪಗಳು ಪ್ರಕಾಶಿಸುತ್ತಿದ್ದ ಆ ಬೆಳಕಿನೆಡೆಗೆ ತಿರುಗಿ ಮಾಹಿತಿ ಸಂಗ್ರಹಿಸುವುದರಲ್ಲಿ ನಿರತವಾದವು. ಇತ್ತ ವಿಜ್ಞಾನಿಗಳು ದಾಖಲಾದ ಮಾಹಿತಿಗಳ ಅಧ್ಯಯನದಲ್ಲಿ ನಿರತರಾದರು ಆ ಬೆಳಕಿನ ಶಕ್ತಿ ಮತ್ತು ಪ್ರಕರತೆಯ ಮಾಪನವನ್ನು ಮಾಡತೊಡಗಿದರು. ಆಧುನಿಕ ಕಂಪ್ಯೂಟರ್ ಮತ್ತು ಯಂತ್ರೋಪಕರಣಗಳ ಸಹಾಯದಿಂದ ಆ ಬೆಳಕಿನ ತರಂಗದ ಸಾಲುಗಳನ್ನು ಅದರ ರಚನೆಗೆ ಅನುಗುಣವಾಗಿ ಬೇರ್ಪಡಿಸಿದರು. ಇದರಿಂದಾಗಿ ಅವು ಭೂಮಿಯನ್ನು ತಲುಪಲು ತೆಗೆದುಕೊಂಡ ಸಮಯ ತಿಳಿದು ಬಂತು.  ನಮ್ಮ ಬ್ರಹ್ಮಾಂಡದ ಮಧ್ಯ ಭಾಗದಿಂದ ಅಂದರೆ 7,5 ಬಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಿಂದ ಚಲಿಸುತ್ತಾ ಬಂದಿರುವುದನ್ನು  ಸಂಶೋಧನೆಯ ವೇಳೆ ವಿಜ್ಞಾನಿಗಳು ಕಂಡು ಕೊಂಡರು.   ಆಕಾಶದಲ್ಲಿ ಆ ಬೆಳಕು ಕಾಣಿಸಿ ಕೊಂಡಿದ್ದು ಕೇವಲ 30 ಸೆಕೆಂಡುಗಳ ಕಾಲಮಾತ್ರ.  ಬೆಳಕಿನ ಗಾತ್ರ ಮತ್ತು ಚಲನೆ ಹಾಗೂ ಅದರ ಬಗ್ಗೆ ಸಂಗ್ರಹವಾದ ಎಲ್ಲ ಮಾಹಿತಿಗಳನ್ನು ಒಟ್ಟಾರೆಯಾಗಿ ಗ್ರಹಿಸಿ ಇದೊಂದು ಬ್ಲಾಕ್ ಹೋಲ್ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು.     

ನಮ್ಮ ಸೂರ್ಯನಿಗಿಂತಲು 13 ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ಮೊನೊಸೆರೊಟಿಸ್ ಅಥವಾ ವಿ616 ಮಾನ್ ಎಂಬ ಕಪ್ಪು ರಂದ್ರ ನಮ್ಮ ಬ್ರಹ್ಮಾಂಡದಲ್ಲಿ ಸೂರ್ಯಮಂಡಲಕ್ಕೆ ಅತ್ಯಂತ ಸಮೀಪದಲ್ಲಿದೆ. ಇದರ ಕ್ಷೀರಪಥವು ನಮ್ಮ ಬ್ರಹ್ಮಾಂಡದ ಕೇಂದ್ರಭಾಗದಲ್ಲಿದೆ. ಭೂಮಿಯಿಂದ ಸುಮಾರು 3ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವುದರಿಂದ ಇದು ಭೂಮಿಯ ಪರಿಸರದ ಮೇಲೆಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇದರಿಂದ ಯಾವುದೆ ಅಪಾಯವು ಭೂಮಿಗೆ ಇಲ್ಲ.           

ಕೇಂಬ್ರಿಡ್ಜ್ ವಿಶ್ವವಿಧ್ಯಾಲಯದ ಪ್ರಾಧ್ಯಾಪಕರಾದ ಜೋನ್ ಮಿಶೇಲ್ ಅವರು ಕಪ್ಪು ರಂಧ್ರಗಳ ಬಗ್ಗೆ ವಿಷಯ ಪ್ರಸ್ತಾಪಮಾಡಿದ ಮೊದಲಿಗರಾಗಿದ್ದಾರೆ. 1783ರಲ್ಲಿ ಈ ಕುರಿತು ಲಂಡನ್ ನಗರದ ಪತ್ರಿಕೆಯೊಂದರಲ್ಲಿ ಲೇಖನವನ್ನು ಪ್ರಕಟಿಸಿದರು. ಖಗೋಳಶಾಸ್ತ್ರದಲ್ಲಿ ಎಕ್ಸರೆ ಯಂತ್ರಗಳ ಬಳಕೆ ಆಗುವ ವರೆಗೂ ಭೌತಿಕವಾಗಿ ಈ ಕಪ್ಪು ರಂಧ್ರಗಳನ್ನು ಗುರುತಿಸಲು ಆಗಿರಲಿಲ್ಲ. 1960ರಲ್ಲಿ ಬಲೂನ್ ಹಾರಾಟದ ಸಮಯದಲ್ಲಿ ಮೊದಲಬಾರಿಗೆ ಎಕ್ಸ್-1 ಎನ್ನುವ ಕಪ್ಪು ರಂಧ್ರವನ್ನು ಪತ್ತೆ ಹಚ್ಚಲಾಯಿತು. ಬ್ಲ್ಯಾಕ್ ಹೋಲ್ ಎಂಬ ಪದವು ಇತ್ತೀಚಿನದ್ದಾಗಿದೆ. ಇದನ್ನು 1969ರಲ್ಲಿ ಅಮೇರಿಕಾದ ವಿಜ್ಞಾನಿಯಾದ ಜಾನ್ ಮೀಲರ್ ಮೊದಲ ಬಾರಿಗೆ ಬಳಿಸಿದ್ದರು. 19ನೇ ಶತಮಾನದಲ್ಲಿ ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಅನ್ವೇಷಣೆಗಳು ನೆಡೆದವು.  

ಕಪ್ಪು ರಂಧ್ರಗಳ ಬಗ್ಗೆ ಅಧ್ಯಯನಮಾಡಿದ ವಿಜ್ಞಾನಿಗಳಲ್ಲಿ ಭಾರತೀಯರು ಒಬ್ಬರಿದ್ದಾರೆ ಅವರ ಸಂಶೋಧನೆಗೆ ನೋಬೆಲ್ ಪ್ರಶಸ್ತಿಲಭಿಸಿದೆ. ನಕ್ಷತ್ರಗಳ ಅಂತ್ಯ ಹೇಗಾಗುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸಿ ಕೊಟ್ಟ ಭಾರತೀಯ ಸಂಜಾತ ವಿಜ್ಞಾನಿಯವರು.

ಭಾರತದ ಶ್ರೇಷ್ಟ ವಿಜ್ಞಾನಿ ಸಿ.ವಿ.ರಾಮನ್ ಅವರ ನೆರಳಿನಲ್ಲಿ ಬೆಳೆದ ಈ ಹುಡುಗ ಬಾಲಕನಾಗಿದ್ದಾಗಲೆ, ಖಗೋಳಶಾಸ್ತ್ರದ ವಿಜ್ಞಾನಿಯಾಗುವ ಕನಸು ಕಂಡಿದ್ದ. ತನ್ನ 18ನೇ  ವಯಸ್ಸಿಗೆ ಶೈಕ್ಷಣಿಕ ಸಂಶೋಧನಾ ವರದಿಯನ್ನು ಪ್ರಕಟಿಸಿ ಆ ಕಾಲದ ದೊಡ್ಡ ವಿಜ್ಞಾನಿಗಳಿಂದಲು ಸೈ ಅನಿಸಿಕೊಂಡಿದ್ದರು. 1928 ರಲ್ಲಿ ಇವರು ಮಂಡಿಸಿದ “ಚಂದ್ರಶೇಖರ ಲಿಮಿಟ್ ಸಂಶೋಧನಾ ವರದಿಗೆ ನೋಬೆಲ್ ಪ್ರಶಸ್ತಿ ಪಡೆದರು. ಲಂಡನ್ ನಿವಾಸಿಯಾಗಿದ್ದ ಸುಬ್ರಮಣ್ಯಮ್ ಶ್ರೀನಿವಾಸ ಅವರು ಸಿ.ವಿ.ರಾಮನ್ ಅವರ ಅಣ್ಣನ ಮಗ.     

1920 ಕ್ಕೂ ಮೊದಲು ನಕ್ಷತ್ರಗಳಿಗೂ ಅಂತ್ಯವಿದೆ ಅನ್ನುವ ವಿಚಾರ ಜಗತ್ತಿಗೆ ಗೊತ್ತಿರಲಿಲ್ಲ. ಸುಬ್ರಮಣ್ಯಮ್ ಶ್ರೀನಿವಾಸನ್ ಅವರು ತಮ್ಮ “ ಚಂದ್ರಶೇಖರ ಲಿಮಿಟ್ ಪ್ರತಿಪಾದನೆಯಲ್ಲಿ ಈ ವಿಚಾರವನ್ನು ಮಂಡಿಸಿದರು. ತಮ್ಮ ಸಂಶೋಧನೆಯಲ್ಲಿ ನಕ್ಷತ್ರಗಳು ಎಷ್ಟು ದೊಡ್ಡದಿರಬಹುದೆಂದೂ ಹಾಗೂ ನಕ್ಷತ್ರಗಳಲ್ಲಿನ ಎಲ್ಲ ಅನಿಲವೂ ಉರಿದು ಹೋದ ಮೇಲೆ ಅದು ತನ್ನಲ್ಲಿರುವ ಗುರುತ್ವಾಕರ್ಷಣೆಯನ್ನು ಹೇಗೆ ಪಡೆಯುತ್ತದೆ ಅನ್ನುವುದನ್ನು ತಿಳಿಸಿ ಕೊಟ್ಟರು. ಈ ಸಂಶೋಧನೆಯೇ ಕಪ್ಪು ರಂಧ್ರಗಳ ಅನ್ವೇಷಣೆಗೆ ದಾರಿಮಾಡಿ ಕೊಟ್ಟಿತು. ನಕ್ಷತ್ರಗಳ ಜೀವನ ವೃತ್ತಾಂತವನ್ನು ಅರ್ಥಮಾಡಿ ಕೊಂಡಾಗ ಮಾತ್ರ ನಮಗೆ ಕಪ್ಪು ರಂಧ್ರಗಳ ಬಗ್ಗೆ ತಿಳಿದು ಕೊಳ್ಳಲು ಸಾಧ್ಯವಾಗುವುದು..     

ಕಪ್ಪು ರಂಧ್ರಗಳ ಬಗ್ಗೆ ಅಧ್ಯಯನಮಾಡಿದ ಫ್ರಾನ್ಸ್ ಮತ್ತು Ishrail ವಿಜ್ಞಾನಿಗಳ ಬಗ್ಗೆ.ಖಗೋಳ ಶಾಸ್ತ್ರದಲ್ಲಿನ ಕ್ರೀಯೆ ಮತ್ತು  ಬದಲಾವಣೆಗಳು ಬಹಳ ನಿಧಾನ. ವಿಸ್ಮಯಕಾರಿ ಕೌತುಕಗಳ ಆಗರವಾದ ಖಗೋಳ ಶಾಸ್ತ್ರದ ಅಧ್ಯಯನವು, ಅನಾದಿ ಕಾಲದಿಂದಲು ಭವಿಷ್ಯದ ಅರಿವಿಗೆ ಮತ್ತು ಸತ್ಯದ ಅನ್ವೇಷಣೆಗೆ ದಾರಿ ತೋರುವ  ಸವಾಲುಗಳನ್ನು ಮನುಷ್ಯನ ಬುದ್ದಿಮತ್ತೆಗೆ ಒಡ್ಡುತ್ತಲೆ ಬಂದಿದೆ. ಆಕಾಶ ಗಂಗೆಯ ಮಡಿಲಲ್ಲಿ ನಮ್ಮ ಬ್ರಹ್ಮಾಂಡದ ಹಾಗೆ ಅಸಂಖ್ಯಾತ ಬ್ರಹ್ಮಾಂಡಗಳಿವೆ. ಆಕಾಶ ಗಂಗೆಯು ಅನೇಕ ರೀತಿಯ ಅನಿಲಗಳಿಂದ ಕೂಡಿದ ಮೋಡಗಳು ಮತ್ತು ಧೂಳಿನ ಕಣಗಳಿಂದ ಆವೃತವಾಗಿದೆ ಇದನ್ನು ನಿಹಾರಿಕಾ ಎಂದು ಕರೆಯುತ್ತಾರೆ. ಅತ್ಯಂತ ಪ್ರಭಲವಾದ ಗುರುತ್ವಾಕರ್ಷಣೆಯ ಬಲವುಳ್ಳ ದಟ್ಟವಾದ ಹೈಡ್ರೋಜನ್ ಮೋಡಗಳು ಮತ್ತು ಧೂಳಿನ ಕಣಗಳು ಒಟ್ಟಿಗೆ ಸೇರ್ಪಡೆಗೊಳ್ಳುವ ಕ್ರೀಯೆಯಿಂದ ನಕ್ಷತ್ರದ ನಿರ್ಮಾಣ ಪ್ರಕ್ರೀಯೆ ಪ್ರಾರಂಭವಾಗುತ್ತದೆ. ಈ ಕ್ರೀಯೆಯಲ್ಲಿ ಘನತ್ವದ ಪ್ರಮಾಣವು ವೃಧ್ದಿಯಾದಾಗ ಹೈಡ್ರೋಜನಲ್ಲಿರುವ ಪರಮಾಣುಗಳು ಅತಿ ವೇಗದಲ್ಲಿ ಪರಸ್ಪರವಾಗಿ ಹೆಚ್ಚು ಹೆಚ್ಚು ಘರ್ಷಿಸತೊಡಗುತ್ತವೆ.ಇದರಿಂದ ಅನಿಲವು ಇನ್ನಷ್ಟು ಬಿಸಿಯಾಗುತ್ತಲೆ ಸಾಗುತ್ತದೆ. ಆಗ ಘರ್ಷಣೆಯಿಂದ ಪುಟಿಯಲಾಗದ ಸ್ಥಿತಿ ತಲುಪಿದ ಹೈಡ್ರೋಜನ್ ಪರಮಾಣುಗಳು ತಮ್ಮಲ್ಲಿಯೇ ಒಗ್ಗೂಡಿ ಹೀಲಿಯಂ ಆಗಿ ಪರಿವರ್ತನೆ ಹೊಂದುತ್ತವೆ. ಈ ಪ್ರತಿಕ್ರೀಯೆ ಒಂದು ಹೈಡ್ರೋಜನ್ ಬಾಂಬ್ ಸ್ಪೋಟ ಇದ್ದಹಾಗೆ ಇರುತ್ತದೆ.    

ಈ ಸ್ಪೋಟದಿಂದಾಗಿ ನಕ್ಷತ್ರದೊಳಗಿನ ಅನಿಲಗಳು ತಮ್ಮೊಳಗಿನ ಸಂಕುಚಿತ ಗತಿಯಿಂದಾಗಿ  ಒಂದು ಗೋಳಾಕಾರದಲ್ಲಿ ತಿರುಗಲು ಪ್ರಾರಂಭಿಸುತ್ತವೆ.  ಈ ರೀತಿಯಲ್ಲಿ ಒಂದು ನಕ್ಷತ್ರದ ನಿರ್ಮಾಣಕ್ಕೆ ಹಲವು ಮಿಲಿಯನ್ ವರ್ಷಗಳನ್ನು ತೆಗೆದು ಕೊಳ್ಳುತ್ತದೆ. ಹೈಡ್ರೋಜನ್ ಅನಿಲದ ಸ್ಪೋಟದಿಂದ ಉಂಟಾಗುವ ಬೆಳಕು ಆ ನಕ್ಷತ್ರವನ್ನು ಹೊಳೆಯುವಂತೆಮಾಡುತ್ತದೆ. ಈ ಹೆಚ್ಚುವರಿತಾಪವು ಅನಿಲದ ಒತ್ತಡವನ್ನು ಎಲ್ಲಿಯವರೆಗೆ ಇನ್ನಷ್ಟು ಹೆಚ್ಚುಮಾಡುತ್ತಾ ಹೋಗುತ್ತದೆ ಅಂದರೆ ಅದರ ಪರಿಣಾಮವಾಗಿ ಅದು ಗುರುತ್ವಾಕರ್ಷಣೆಯ ಬಲದೊಂದಿಗೆ ಸಮತೋಲನವನ್ನು ಕಾಪಾಡಿ ಕೊಳ್ಳುವವರೆಗೆ ಮುಂದುವರೆಯುತ್ತದೆ. ನಕ್ಷತ್ರಗಳಲ್ಲಿನ ಅನಿಲಗಳು ಹೆಚ್ಚು ಉರಿಯುವ ಮೂಲಕ ಒತ್ತಡವನ್ನು ನಿರ್ಮಾಣಮಾಡಿ ಗುರುತ್ವಾಕರ್ಷಣೆಯೊಂದಿಗೆ ಸಮತೋಲನವನ್ನು ಕಾಪಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿರುತ್ತವೆ. ಈ ಕಾರಣದಿಂದಾಗಿ ನಕ್ಷತ್ರಗಳು ಹೆಚ್ಚು ಕಾಲ ಅಸ್ಥಿತ್ವದಲ್ಲಿ ಉಳಿಯುತ್ತವೆ.   


ನಕ್ಷತ್ರಗಳಲ್ಲಿನ ಹೈಡ್ರೋಜನ್ ಬರಿದಾಗುತ್ತಾ ಬಂದಂತೆ ತಣ್ಣಗಾಗಲು ಪ್ರಾರಂಭಿಸುತ್ತವೆ. ಆಗ ಗುರುತ್ವಾಕರ್ಷಣೆಯೊಂದಿಗಿನ ಸಮತೋಲನವನ್ನು ಕಳೆದು ಕೊಂಡು ಅವುಗಳಲ್ಲಿ ಆಸ್ಪೋಟವೊಂದು ಉಂಟಾಗುತ್ತದೆ ಇದನ್ನು ಸೂಪರ್ ನೋವಾ ಎಂದು ಕರೆಯುತ್ತಾರೆ.       

ಈ ಸ್ಪೋಟದ ನಂತರವು ಆ ನಕ್ಷತ್ರದ ಘನತ್ವದ ಅಂಶವೇನಾದರು ಉಳಿದಿದ್ದರೆ ಅದೊಂದು ಅತ್ಯಾಧಿಕ ಘನತ್ವದ ನ್ಯೂಟ್ರಾನ್ ನಕ್ಷತ್ರವಾಗುತ್ತದೆ. ತನ್ನ ಒಳಗಿನ ಅನಿಯಂತ್ರಿತ ಗುರುತ್ವಾಕರ್ಷಣೆಯಿಂದಾಗಿ ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ. ಈ ರೀತಿ ತನ್ನ ಗಾತ್ರದಲ್ಲಿ ಬದಲಾಗುತ್ತ ಅತ್ಯಂತ ಚಿಕ್ಕದಾದ ಗಾತ್ರಕ್ಕೆ ಅಂದರೆ ಅಣುವಿನಷ್ಟಾಗಿ ಬದಲಾಗುತ್ತದೆ.ಇದರಿಂದಾಗಿ ಅದರಲ್ಲಿನ ಸಮಯ ಮತ್ತು ಗಾತ್ರ ವಿಕೃತವಾಗುತ್ತದೆ.ತನ್ನೊಳಗೆ ಸಮಯ ಮತ್ತು ಸ್ಥಿತಿಗೆ ಅಸ್ಥಿತ್ವವಿಲ್ಲದ್ದರಿಂದ ಅದು ಅದೃಶ್ಯವಾಗುತ್ತದೆ.ಇದನ್ನೆ ನಾವು ಬ್ಲ್ಯಾಕ್ ಹೋಲ್ ಎನ್ನುತ್ತೇವೆ.           

ಸೌರಮಂಡಲದ ಸಮಯ  ಭೂಮಿಯಲ್ಲಿನ ಸಮಯ ಮತ್ತು ನಕ್ಷತ್ರಗಳಲ್ಲಿನ ಸಮಯಗಳು ಬೇರೆ ಬೇರೆಯಾಗಿದೆ.ಇದಕ್ಕೆ ಕಾರಣ ಅವುಗಳಲ್ಲಿನ ಗುರುತ್ವಾಕರ್ಷಣೆ ಬಲ. ಕಾಲ ಮತ್ತು ಸ್ಥಳ ಒಂದು ವಲಯವಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ವಸ್ತುವಿಗು ಆಗುವುದಿಲ್ಲ. ಕಪ್ಪು ರಂಧ್ರದಲ್ಲಿನ ದ್ರವ ರೂಪದ ವಸ್ತುಗಳು ಅದರ ಕೇಂದ್ರ ಬಿಂದುವಿನಲ್ಲಿ ಇರುತ್ತವೆ.ಇದನ್ನು ಸೆಂಟರ್ ಸಿಂಗುಲ್ಯರ್ point ಎಂದು ಕರೆಯುತ್ತಾರೆ. ಈ ಬಿಂದುವಿನ ಸುತ್ತವಿರುವ ಕ್ಷಿತಿಜವನ್ನು event horizon ಎಂದು ಕರೆಯುತ್ತಾರ. ಇದು ಕಪ್ಪುರಂಧ್ರದ ಸುತ್ತ ಏಕ ಮುಖವಾದ 7 ಪರದೆಯಂತೆ ಕೆಲಸಮಾಡುತ್ತದೆ. ಈ ಕ್ಷಿತಿಜದಿಂದ ಮಧ್ಯ ಭಾಗದವರೆಗೆ  ಹೋದಂತೆ ಗುರುತ್ವಾಕರ್ಷಣೆಯ ಬಲವು ಕಡಿಮೆಯಾಗುತ್ತಾ ಹೋಗುತ್ತದೆ. ಬ್ಲ್ಯಾಕ್ ಹೋಲ್ ಒಂದರಲ್ಲಿ ಗಗನಯಾನಿ ಒಬ್ಬ ಬಿಳುತ್ತಾನೆ ಎಂದು ಉಹಿಸಿ ಕೊಳ್ಳೋಣ ಆತ ತನ್ನ ತಲೆಯ ಹಿಂಭಾಗವನ್ನು ತನ್ನ ಕಣ್ಣಮುಂದೆ ನೋಡ ಬಹುದು. ಆತನ ಕಾಲಿನ ಮೇಲೆ ಪ್ರಯೋಗವಾಗುವ ಗುರುತ್ವಾಕರ್ಷಣೆಯ ಬಲವು ತಲೆಯ ಮೇಲೆ ಪ್ರಯೋಗವಾಗುವ ಬಲಕ್ಕಿಂತ ಹೆಚ್ಚಾಗಿರುತ್ತದೆ. ಬಲಗಳಲ್ಲಿನ ಈ ಬದಲಾವಣೆಯಿಂದಾಗಿ ಆತನ ದೇಹವು ಹರಿದು ಹಂಚಿ ಹೋಗುತ್ತದೆ. ಕಪ್ಪು ರಂಧ್ರದಲ್ಲಿ ಯಾವುದೇ ವಸ್ತು ಬಿದ್ದರು ಅದು ಅದರ ಘನತ್ವದ ಭಾಗದಲ್ಲಿನ ಅಜ್ಞಾತ ಸ್ಥಳದಲ್ಲಿ ಶೇಖರವಾಗುತ್ತದೆ.         

Aಈ ಕಪ್ಪು ರಂಧ್ರಗಳಲ್ಲಿ ಪ್ರಕಾರಗಳೆಷ್ಟು ? ಇವುಗಳಿಂದ ಬ್ರಹ್ಮಾಂಡದ ರಹಸ್ಯ ಹೇಗೆ ಬಯಲಾಗುತ್ತದೆ ? ಎನ್ನುವ ಬಗ್ಗೆ ಸ್ಟೀಫನ್ ಹಾಕಿಂಗ್ ಅವರ ಅಭಿಪ್ರಾಯವೇನು ಗೊತ್ತೇ.     

ನಮ್ಮ ಭೂಮಿಯಲ್ಲಿನ ಘನತ್ವವು ಹೆಚ್ಚಾಗಿ, ದ್ರವರೂಪದ ವಸ್ತುಗಳೆಲ್ಲ ಬರಿದಾದಾಗ ಅದನ್ನು ಕುಗ್ಗಿಸಿ ಕೇವಲ 1.5 ಸೆಂಟಿ ಮೀಟರ್ ಗಾತ್ರಕ್ಕೆ ಇಳಿಸಿದಾಗ ಅದು ಒಂದು ಬ್ಲ್ಯಾಕ್ ಹೋಲ್ಆಗಿ ಬದಲಾಗುತ್ತದೆ.ಆದರೆ ಪೃಥ್ವಿ ಮತ್ತು ಸೂರ್ಯ ಇಷ್ಟು ಸಂಕುಚಿತವಾಗಲು ಸಾಧ್ಯವಿಲ್ಲ ಯಾಕೆಂದರೆ ಇವುಗಳಲ್ಲಿನ ದ್ರವರೂಪದಲ್ಲಿನ ಗುರುತ್ವಾಕರ್ಷಣೆಯ ಬಲವು ಅಷ್ಟೊಂದು ಅಧಿಕವಾಗಿಲ್ಲ. ಸೂರ್ಯನ ಸಾಂದ್ರತೆಗಿಂತ 11/2 ಪಟ್ಟು ತಂಪಾಗಿರುವ ನಕ್ಷತ್ರಗಳು ಮಾತ್ರ ತನ್ನದೇ ಗುರುತ್ವಾಕರ್ಷಣೆಯಿಂದ ತಮ್ಮ ಅಸ್ಥಿತ್ವವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಆಗ ಅವು ಕಪ್ಪು ರಂಧ್ರಗಳಾಗಿ ಮಾರ್ಪಡುತ್ತವೆ.   

ಈ ಕಪ್ಪು ರಂಧ್ರಗಳಲ್ಲಿ  3 ವಿಧಗಳಿವೆ. ನಮ್ಮ ಸೌರಮಂಡಲದಲ್ಲಿನ ಸೂರ್ಯನಿಗಿಂತ 13 ಪಟ್ಟು ಹೆಚ್ಚು ದ್ರವ ರೂಪದ ಅನಿಲವನ್ನು ಹೊಂದಿರುವ ನಕ್ಷತ್ರಗಳು ದ್ರವರೂಪದಲ್ಲಿನ  ಅಧಿಕವಾದ ಗುರುತ್ವದ ಬಲದಿಂದಾಗಿ ಸಂಕುಚಿತವಾಗ ತೊಡಗುತ್ತವೆ. ಈರೀತಿಯಾಗಿ ನಿರ್ಮಾಣವಾದ ಕಪ್ಪು ರಂಧ್ರಗಳನ್ನ Stellar mass black hole ಎನ್ನುತ್ತಾರೆ.

 ಇನ್ನು ಆಕಾಶಗಂಗೆಯ ಕೇಂದ್ರದಲ್ಲಿ ಮಾತ್ರ ಕಾಣಿಸಿ ಕೊಳ್ಳುವ ಈ ಕಪ್ಪು ರಂಧ್ರಗಳಲ್ಲಿ ಘನತ್ವದ ಸ್ವರೂಪವು ದ್ರವರೂಪಕ್ಕಿಂತ ಹೆಚ್ಚಾಗಿರುತ್ತದೆ. ಇವುಗಳಲ್ಲಿನ ದ್ರವರೂಪವು ನಮ್ಮ ಸೌರಮಂಡಲದ ಸೂರ್ಯನಿಗಿಂತ ಕೋಟಿ ಪಟ್ಟು ಹೆಚ್ಚಾಗಿರುತ್ತದೆ. ಇವುಗಳ ಸ್ವರೂಪ ಅತ್ಯಂತ ವಿರಾಟವಾಗಿರುತ್ತದೆ. ನಮ್ಮ ಬ್ರಹ್ಮಾಂಡದ ಮಧ್ಯದಲ್ಲಿ ಒಂದು super massive black hole ಇದೆ.

ಗಾತ್ರದಲ್ಲಿ ಅತ್ಯಂತ ಚಿಕ್ಕದಾದ ಕಪ್ಪುರಂಧ್ರಗಳನ್ನು Primordial / small black hole ಎಂದು ಕರೆಯುತ್ತಾರೆ. ಸೌರಮಂಡಲದಲ್ಲಿನ ಸೂರ್ಯನಿಗಿಂತ ಅತಿ ಕಡಿಮೆ ಪ್ರಮಾಣದ ದ್ರವರೂಪವನ್ನು ಹೊಂದಿರುತ್ತವೆ. ಇವುಗಳ ಹುಟ್ಟು ಗುರುತ್ವಾಕರ್ಷಣೆಯ  ಸಂಕುಚಿತ ಚಲನೆಯಿಂದ ಆಗಿರುವುದಿಲ್ಲ. ಬದಲಿಗೆ ಇವುಗಳಲ್ಲಿನ ಅನಿಲಗಳು ಬರಿದಾದಾಗ ಈ ನಕ್ಷತ್ರಗಳು ತಣ್ಣಗಾಗುತ್ತಾ ಬರುತ್ತವೆ. ಇದರಿಂದಾಗಿ ಇವುಗಳ ಮೂಲ ಸ್ಥಿತಿಯಲ್ಲಿ ಬದಲಾವಣೆಯಾಗುವುದರಿಂದ ಕಪ್ಪು ರಂಧ್ರಗಳಾಗಿ ಬದಲಾಗುತ್ತವೆ. ಇವುಗಳ ನಿರ್ಮಾಣವು ಬ್ರಹ್ಮಾಂಡದ ನಿರ್ಮಾಣದೊಂದಿಗೆ ಆಗಿದೆ. ಇವುಗಳ ಅಧ್ಯಯನದಿಂದ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲಾಗುವುದು ಎಂಬ ನಂಬಿಕೆ ವಿಜ್ಞಾನಿಗಳಲ್ಲಿದೆ.       

ಬ್ರಹ್ಮಾಂಡದ ರಹಸ್ಯದ ಅನ್ವೇಷಣೆಯ ವಿಷಯ ಬಂದಾಗ 1981ರ ಘಟನೆಯೊಂದು ನೆನಪಾಗುತ್ತದೆ. ವಿಶ್ವದ ಅಧ್ಯಯನಕ್ಕೆ ಸಂಬಂಧಿಸಿದ ಸಮಾವೇಶವನ್ನು ವ್ಯಟಿಕನ್ ನಗರದಲ್ಲಿ ಆಯೋಜಿಸಲಾಗಿತ್ತು. ವಿಶ್ವದ ಮೇಧಾವಿ ವಿಜ್ಞಾನಿಗಳೆಲ್ಲ ಅಂದು ಸೇರಿದ್ದರು. ವಿಶ್ವದ ಹುಟ್ಟಿನ ಬಗ್ಗೆ ಮೊದಲ ಬಾರಿಗೆ ಬಿಗ್ ಬ್ಯಾಂಗ್ ಸ್ಪೋಟದ ಬಗ್ಗೆ ಅಧ್ಯಯನದ ವರಧಿಯೊಂದನ್ನು ಮಂಡಿಸಲು ಲಂಡನಿಂದ ವಿಜ್ಞಾನಿಯೊಬ್ಬರು ಬಂದಿದ್ದರು. ದೇವರ ಮತ್ತು ಬ್ರಹ್ಮಾಂಡದ ಹುಟ್ಟಿನ ರಹಸ್ಯಗಳನ್ನು ಈ ವರದಿಯು ಬಯಲುಮಾಡುವುದೆಂದು  ಪೋಪ್ ಅವರು ಇದರ  ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಪೋಪ್ ಅವರ ವಿರೋಧದ ನಡುವೆಯು ತನ್ನ ವರಧಿಯನ್ನು ಮಂಡಿಸಿ ಅವರಿಂದ ಮೆಚ್ಚುಗೆಯನ್ನುಗಳಿಸಿದ ವಿಜ್ಞಾನಿಯೆ  ಸ್ಟೀಫ್ ನ್ ಹಾಕಿಂಗ್ ಇಡೀ ಮನುಕುಲದ ಸಂಪತ್ತು ಇವರು. ಜಗತ್ತು ಕಂಡ ಶ್ರೇಷ್ಟ ಭೌತವಿಜ್ಞಾನಿ . ಐನ್ ಸ್ಟೇನ್ ನಂತರದ ಸ್ಥಾನದಲ್ಲಿ  ನಿಲ್ಲುವ ಮಹಾನ್ ಬುದ್ದಿವಂತ. ಇವರು ಬದುಕಿರುವ  ಶತಮಾನದಲ್ಲಿ ನಾವು ಬದುಕಿದ್ದೇವೆ ಎನ್ನುವುದೆ ನಮಗೆ ಹೆಮ್ಮೆಯ ವಿಷಯ.

ಕಪ್ಪು ರಂಧ್ರಗಳ ಬಗ್ಗೆ ಅಧ್ಯಯನ ನೆಡೆಸಿದ ವಿಜ್ಞಾನಿಗಳಲ್ಲಿ ಅಗ್ರಮಾನ್ಯರು ಇವರು. ಈ ಸೃಷ್ಠಿ ಆರಂಭಗೊಂಡ ಕ್ಷಣದಲ್ಲಿ ಆದ ಮಹಾನ್ ಸ್ಪೋಟದಿಂದ ಎಲ್ಲವು ಪ್ರಾರಂಭವಾದವು. ಈ ಮಹಾನ್ ಸ್ಪೋಟದ ರಹಸ್ಯವನ್ನು ಬಯಲುಮಾಡಿದರೆ ಬ್ರಹ್ಮಾಂಡದ ಗುಟ್ಟುಗಳೆಲ್ಲ ಬಯಲಾಗುತ್ತವೆ. ಈ ನಿಟ್ಟಿನಲ್ಲಿ  ನೆಡೆಯುವ ಪ್ರಯೋಗವೇ ಬಿಗ್ ಬ್ಯಾಂಗ ಸ್ಪೋಟ. ಇದರ ಅನ್ವೇಷಣೆಗೆ ದಾರಿಮಾಡಿ ಕೊಟ್ಟಿದ್ದೆ ಈ ಕಪ್ಪು ರಂಧ್ರಗಳು.      

“ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ಎನ್ನುವುದು ಪ್ರಾಚೀನರ ಮಾತು. ಅಂದರೆ ಸಾಹಿತ್ಯದಲ್ಲಿ ಕೋಟಿ ಸೂರ್ಯ ಕಲ್ಪನೆ ಇತ್ತು. ಇಂದಿನಷ್ಟು ವಿಜ್ಞಾನ ಬೆಳೆದಿರದ  ಆ ಕಾಲಕ್ಕೆ ಅದು ಅದ್ಬುತವಾದ ಕಲ್ಪನೆ. ಕೋಟಿ ಸೂರ್ಯ ಒಂದು ಗ್ಯಾಲಕ್ಸಿಯಲ್ಲಿಯೇ ಇದ್ದಾರೆ ಎಂದು ವಿಜ್ಞಾನದ  ಬೆಳವಣಿಗೆಯಿಂದ ಇಂದು ನಮಗೆ ಗೊತ್ತಾಗಿದೆ. ಇಂತಹ ಎಷ್ಟೋ ಗ್ಯಾಲಕ್ಸಿಗಳು ವಿಶ್ವದಲ್ಲಿದೆ. ಹಾಗಾದರೆ ವಿಜ್ಞಾನ ಬೆಳೆದಂತೆಲ್ಲ ನಮ್ಮ ಕಲ್ಪನೆಯು ಬೆಳೆದರೆ ಆ ಕಲ್ಪನೆಗೂ ಒಂದು ಭವ್ಯತೆ ಬರುತ್ತದೆ.ಸಾಹಿತ್ಯದ ಹಾಗೆ ವಿಜ್ಞಾನವು ಕಲ್ಪನೆಯನ್ನು  ಮುಂದಿಟ್ಟು ಕೊಂಡು  ಹೊರಡುತ್ತದೆ. ಆದರೆ ಕಲ್ಪನೆಯನ್ನು ಪರೀಕ್ಷಿಸಿ ನಿಜದ ಹಾದಿ ಹಿಡಿದು ಮುಂದೆ ಸಾಗುತ್ತದೆ.        

                       

 

 


ಸೂರ್ಯನ ಅಂತ್ಯ.

 

 


ವಿಜ್ಞಾನವೊಂದು ಸತ್ಯದ ಹುಡುಕಾಟ! ಸತ್ಯವೆನ್ನುವುದು ಹೋಗಲು ಹಾದಿಗಳಿಲ್ಲದ ನಾಡು, ತತ್ವ ನಂಬಿಕೆ ಅಥವಾ ಕರ್ಮಾಚರಣೆಗಳಿಂದ ನಾವು ಆಸೀಮೆಯನ್ನು ತಲುಪಲು ಸಾಧ್ಯವಿಲ್ಲ. ತಾತ್ವಿಕ ತಿಳುವಳಿಕೆಯೊಂದೆ ಅಲ್ಲಿಗೆ ದಾರಿ ತೋರಿಸುವುದು.ನಮ್ಮ ತಿಳಿವಿನ ಪರಿಧಿಯನ್ನು ವೃಧ್ದಿಸುವುದೆ ಬರವಣಿಗೆಯ  ಉದ್ದೇಶ.

ಉದಯೇ ಬ್ರಹ್ಮ ಸ್ವರೂಪೇ, ಮಧ್ಯತೇ ಮಹೇಶ್ವರ, ಅಸ್ಥಮಾನೇ ಸ್ವಯಂ ವಿಷ್ಣುಂ, ತ್ರಯೀ ಮೂರ್ತೆ ದಿವಾಕರ. ಉದಯ ಕಾಲದಲ್ಲಿ ಬ್ರಹ್ಮನ ಸ್ವರೂಪವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮಹೇಶ್ವರನ ಉಗ್ರ ರೂಪ ತಾಳಿ, ಸಂಜೆ ಮುಳುಗುವ ವೇಳೆಗೆ ಸರ್ವ ರಕ್ಷಕ ಸ್ವಯಂ ವಿಷ್ಣು ಸ್ವರೂಪಿಯಾಗುವ, ಸೂರ್ಯ ದೇವನು ತನ್ನೊಳಗೆ ಸೃಷ್ಠಿ, ಸ್ಥಿತಿ, ಲಯ ಮೂರು ಸ್ಥಿತಿಗಳಿಗೆ ಕಾರಣೀಭೂತರಾದ ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾಗಿದ್ದಾರೆ ಎಂದು ಅನಾದಿಕಾಲದಿಂದಲೂ ನಮ್ಮ ಪುರಾಣಗಳಿಂದ ತಿಳಿದದ್ದನ್ನು ನಂಬಿ ಬಂದಿದ್ದೇವೆ. ನಮ್ಮ ಆಧ್ಯಾತ್ಮ ಮತ್ತು ಪುರಾಣಗಳಲ್ಲಿ ಅನಂತವಾಗಿರುವ ಸೂರ್ಯದೇವನಿಗೆ, ಒಂದು ಕೊನೆಯ ದಿನವಿದೆ ಎಂದು ವಿಜ್ಞಾನ ಹೇಳುತ್ತಿದೆ. ಹಾಗಿದ್ದರೆ  ದಿನ ಯಾವುದು? ಅಂದು ಏನೆಲ್ಲಾ ಆಗುವುದು ಎಂಬ ಬಗ್ಗೆ ಒಂದು ಅವಲೋಕನವೇ  ಈ ಬರವಣಿಗೆ 

ಸೂರ್ಯನ ತಾಪವನ್ನು ತಾಳಲಾಗದೆ, ಅವನ ಪತ್ನಿ ಸಂಧ್ಯಾ ದೇವಿ, ತನ್ನ ಮುಖವನ್ನು ಎಂದಿಗೂ ಎತ್ತಿ ಸೂರ್ಯನನ್ನು ನೋಡಿಲ್ಲವೆಂದು ಪುರಾಣದ ಕತೆಗಳು ಹೇಳುತ್ತವೆ. ಸೂರ್ಯ ನಾರಾಯಣನು ಅನಂತ ಅನನ್ಯ, ಪ್ರಕಾಶದ ಕೇಂದ್ರ ಬಿಂದು ಎಂಬುದಾಗಿ ನಾವೆಲ್ಲಾ ಒಪ್ಪಿ ಕೊಂಡಿದ್ದೇವೆ. ನಂಬಿಕೆಯ ನೆಲೆಯಲ್ಲಿ ಪುರಾಣದ ಕತೆಗಳು ನೆಡೆದು ಬಂದಿವೆ. ಆದರೆ ವಿಜ್ಞಾನವು, ಅರಿವಿಗೆ ಬಂದ ಜ್ಞಾನವನ್ನು ಮಾತ್ರ ಒಪ್ಪಿಕೊಳ್ಳುತ್ತವೆ. ಆಧಾರವಿಲ್ಲದ, ಸಾಕ್ಷೀಕರಿಸದ ವಿವರಗಳನ್ನು ನಮ್ಮ ಅರಿವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಜಿಜ್ಞಾಸೆಯ ನೆಲೆಯಲ್ಲಿ ನೆಡೆದ ವೈಜ್ಞಾನಿಕ ಸಂಶೋಧನೆಗಳೇ, ಸೂರ್ಯನ ಹುಟ್ಟು ಮತ್ತು ಸಾವಿನ ಬಗ್ಗೆ ನಿಖರವಾದ ವಿಶ್ಲೇಷಣೆಗಳನ್ನು ಕೊಟ್ಟಿದೆ. ಶತಮಾನ ಕಂಡ ಖಗೋಳ ವಿಜ್ಞಾನದ, ಅಧ್ಯಯನವು ಮನುಕುಲದ ಮುಂದಿನ ದಾರಿಗೆ ದೀಪವಾಗಿದೆ.               

ಮೂಡಲ ಮನೆಯ, ಮುತ್ತಿನ ನೀರಿನ ಎರಕವಾ ಹ್ಯೊದಾ, ನುಣ್ಣನೇ ಎರಕವಾ ಹ್ಯೊದಾ, ಬಾಗಿಲ ತೆರೆದು, ಬೆಳಕು ಹರಿದು ಜಗವೆಲ್ಲಾ ತ್ಯೊದಾ. ರೀತಿಯಾಗಿ ನಾಲ್ಕು ಸಾವಿರ ಕೋಟಿ ವರ್ಷಗಳಿಂದ ನಿತ್ಯ ತನ್ನ ಕೆಲಸವನ್ನು ತಪ್ಪದೇ ಮಾಡುತ್ತ ಬಂದಿರುವ ಸೂರ್ಯ ಒಮ್ಮೆ ಇಲ್ಲವಾದರೇ ಏನಾಗಬಹುದು? ಎಂಬುದು ಕಲ್ಪನೆಗೂ ಅಸಾಧ್ಯವಾದದ್ದು. ಭೂಮಿ ಮೇಲಿನ ಸಕಲ ಚರಾಚರಗಳ ಜೀವ ಸೆಲೆ ಸೂರ್ಯನ ಬೆಳಕು. ಎಲೆಗಳ ಮೇಲೆ ,ಹೂಗಳ ಒಳಗಿನ ಅಮೃತದ ಬಿಂದುವಿದು.   

ಸಾವಿರ ಬೆಳಕಿನ ವರ್ಷಗಳಷ್ಟು ದೂರ ಮಹಾಕಾಯವೊಂದು ನ್ಯೂಕ್ಲಾನಿಕ್ ಮಾಲ್ಯುಕ್ಯೂಲರ್ ಗ್ಯಾಸನ್ನು ಹೊಂದಿರುವ ಮೋಡಗಳಲ್ಲಿ ಒಂದು ದೊಡ್ಡ ಭಾಗ ಒಡೆದು ಬೇರಾಗುತ್ತದೆ.ಇದರಿಂದಲೇ ನಮ್ಮ ಸೌರ ಮಂಡಲ ರಚನೆಯಾಯ್ತು ಎಂಬ ವಾದವನ್ನು Nebular Theory ಎಂದು ಕರೆಯುತ್ತಾರೆ. Theory ಪ್ರಕಾರ ಗ್ಯಾಸ್ನ ಗೋಳದಲ್ಲಿ ಎರಡು ಅಥವಾ ಮೂರು ಸೂಪರ್ ನೋವಾಗಳ ಸೃಷ್ಠಿಯಾಗಿರಬಹುದು. ಇದರಿಂದಾಗಿ ಮೋಡದ ಒಂದು ದೊಡ್ಡ ಭಾಗ ಅದರಿಂದ ಬೇರ್ಪಟ್ಟಿರಬಹುದು. ಅತೀ ಹೆಚ್ಚಾದ ಗುರುತ್ವದ ಬಲವನ್ನು ಹೊಂದಿದ್ದ ಅನಿಲ ಇದರಲ್ಲಿ ಇದ್ದದ್ದರಿಂದ ಮೋಡವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚಾಗಿ ಉರಿಯಲು ಪ್ರಾರಂಭವಾಯಿತು. ಉರಿಯುವಿಕೆಯಿಂದಾಗಿ ಇದರ ಗತಿ ಮತ್ತು ಒತ್ತಡ ಹೆಚ್ಚಾಯಿತು. ಹೀಗಾಗಿ ತನ್ನೊಳಗೆ ಸುತ್ತಲು ಪ್ರಾರಂಭವಾಯಿತು. ಸುತ್ತುವಿಕೆಯ ವೇಗ ಒಂದೆಡೆ ಹೆಚ್ಚಾಗುತ್ತಿದ್ದಂತೆ ಇತ್ತ ಸಮತೋಲನಕ್ಕಾಗಿ ಉರಿಯುವುದು ಹೆಚ್ಚಾಯಿತು. ಕಾರಣದಿಂದಾಗಿ ಗೋಳವು ಹೆಚ್ಚು ಹೆಚ್ಚು ಬಿಸಿಯಾಗುತ್ತ ಹೋಯಿತು. ವೇಗವಾದ ತಿರುಗುವಿಕೆ ಮತ್ತು ಅದರ ಗತಿಯಿಂದಾಗಿ ದ್ರವರೂಪದ ಅನಿಲ ಇದ್ದ ಭಾಗ ಒಂದು ಗೋಳಾಕಾರದ ರೂಪದಲ್ಲಿ ಮಾರ್ಪಾಡಾಯಿತು. ಉಳಿದ ಭಾಗ ಗೋಳದ ಸುತ್ತ ಸುತ್ತಲು ಪ್ರಾರಂಭವಾಯಿತು. ಘಟನೆ ಪೂರ್ಣಗೊಳ್ಳಲು ಕೋಟಿ ವರ್ಷಗಳೇ ಬೇಕಾಯಿತು.    

ಕಾಲಕ್ರಮೇಣ ಬೆಂಕಿಯ ಉಂಡೆಯ ಉಷ್ಣತೆ ಕಡಿಮೆಯಾಗ ತೊಡಗಿತು. ಹೈಡ್ರೋಜನ್ ಮತ್ತು ಹೀಲಿಯಮ್ ನಿಂದ ಕೂಡಿದ ಮಧ್ಯಭಾಗ ಸೌರಮಂಡಲದ ಸೂರ್ಯನಾಗಿ ರೂಪಗೊಂಡಿತು. ಸೂರ್ಯನ ಸುತ್ತ ಸುತ್ತುತ್ತಿದ್ದ ಉಳಿದ ವಸ್ತುಗಳಿಂದ ಸೌರಮಂಡಲದ ಉಳಿದ ಗ್ರಹಗಳ ನಿರ್ಮಾಣವಾಯಿತು. ಆಕಾಶ ಗಂಗೆಯಲ್ಲಿನ ನೂರು ಕೋಟಿಗೂ ಅಧಿಕ ನಕ್ಷತ್ರಗಳಲ್ಲಿ ಸೂರ್ಯನು ಒಬ್ಬ. ಈತ ಝೀ 2 category ನಕ್ಷತ್ರವಾಗಿದ್ದಾನೆ. ಇದು ಆಕಾಶಗಂಗೆಯಲ್ಲಿನ ನಕ್ಷತ್ರಗಳ 1/10 ಭಾಗವಾಗಿದೆ. ಸೌರ ಮಂಡಲದಲ್ಲಿ ಎಲ್ಲಾ ಗ್ರಹಗಳು ಹೇಗೆ ಸೂರ್ಯನಿಗೆ ಸುತ್ತುತ್ತವೆಯೋ ಹಾಗೆ ಸೂರ್ಯನು ಸೌರಮಂಡಲದೊಂದಿಗೆ ಆಕಾಶ ಗಂಗೆಯ ಮಧ್ಯ ಭಾಗವನ್ನು ಸುತ್ತುತ್ತಿದ್ದಾನೆ. ಪರಿಕ್ರಮಕ್ಕೆ 25 ಕೋಟಿ ವರ್ಷಗಳು ಬೇಕು. ಸೌರ ಮಂಡಲದಲ್ಲಿ ಅತೀ ಹೆಚ್ಚು ದ್ರವ ರೂಪದ ವಸ್ತುವನ್ನು ಸೂರ್ಯ ಮಾತ್ರ ಹೊಂದಿದ್ದಾನೆ. ಸೂರ್ಯನ ವ್ಯಾಸ 1392000 ಕಿಲೋ ಮೀಟರ್ ಇದೆ. ಈತ ಭೂಮಿಗಿಂತ 10 ಲಕ್ಷ ಪಟ್ಟು ದೊಡ್ಡವನಾಗಿದ್ದಾನೆ. ಹಾಗೂ 15 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದಾನೆ.ಇಷ್ಟು  ದೂರದಲ್ಲಿದ್ದರೂ ಅವನ ಕಿರಣಗಳು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 8 ನಿಮಿಷ 16 ಸೆಕೆಂಡು. ಸೂರ್ಯ ನೆನ್ನುವ ನಕ್ಷತ್ರವು ಹೀಲಿಯಮ್, ಹೈಡ್ರೋಜನ್ ಅನಿಲ ರಾಶಿಗಳ ಪಿಂಡವಾಗಿವೆ.  

ಸುರ್ಯನ ಕೇಂದ್ರ ಭಾಗವನ್ನು ಕೋರ್ ಎಂದು ಕರೆಯುತ್ತಾರೆ.ಇಲ್ಲಿನ ಉಷ್ಣತೆಯು ಒಂದು ಕೋಟಿ 56 ಲಕ್ಷ ಸೆಲ್ಸಿಯಸ್ ಇದೆ. ಇನ್ನು ಸೂರ್ಯನ ಹೊರ ಮೈ ಮೇಲಿನ ಉಷ್ಣತೆಯು 6 ಕೋಟಿ ಸೆಲ್ಸಿಯಸ್ ಆಗಿದೆ. ಸೂರ್ಯನಲ್ಲಿ ಪ್ರತಿ ಸೆಕೆಂಡಿಗೆ 6570 ಲಕ್ಷ ಟನ್ ಹೈಡ್ರೋಜನ್ ಅನಿಲವನ್ನು 6530 ಲಕ್ಷಟನ್ ಹೀಲಿಯಮ್ ಆಗಿ ಪರಿವರ್ತನೆ ಮಾಡುತ್ತದೆ. ಮಧ್ಯದಲ್ಲಿ ಉಳಿದ 40 ಲಕ್ಷ ಟನ್ ಮಾತ್ರ ಬೆಳಕಿನ ರೂಪವಾಗಿ ಬದಲಾಗುತ್ತದೆ. ಹೀಗೆ ಇದು ಇನ್ನು 5000 ಕೋಟಿ ವರ್ಷಗಳವರೆಗೆ ನಿರಂತರ ನೆಡೆಯುವ ಪ್ರಕ್ರಿಯೆ ಆಗಿದೆ. ಯಾವಾಗ ಕೇಂದ್ರ ಭಾಗದಲ್ಲಿ ಹೈಡ್ರೋಜನ್ ಅನಿಲವು ಮುಗಿದು ಹೋಗುವುದೋ, ಸೂರ್ಯ ತಣ್ಣಗಾಗಲು ಪ್ರಾರಂಭಿಸುತ್ತಾನೆ. ಸೂರ್ಯನ ಮೇಲಮೈತಣ್ಣಗಾದಂತೆ ಅದರ ವ್ಯಾಸವು ಹಿಗ್ಗುತ್ತಾ ಹೋಗುತ್ತದೆ. ಹೀಗೆ ಉಬ್ಬುತ್ತಾ ಇಗಿರುವಾ ಗಾತ್ರಕ್ಕಿಂತ ಸೂರ್ಯ ಮೂರು ಪಟ್ಟು ದೊಡ್ಡವನಾಗುತ್ತಾನೆ. ರೀತಿಯಲ್ಲಿ ಉಬ್ಬುತ್ತಾ ಹೋಗುವ ನಕ್ಷತ್ರವನ್ನು ರೆಡ್ ಜಾಯಿಂಟ್ ಎಂದು ಕರೆಯುತ್ತಾರೆ.               

ನಮ್ಮ ಸೂರ್ಯ ಮಂಡಲದ ಸೂರ್ಯ ಕೂಡ ಒಂದು ದಿನ ರೆಡ್ ಜಾಯಿಂಟ್ ಆಗುತ್ತಾನೆ. ಹೀಗೆ ಬೆಳೆಯುವ ಹಂತದಲ್ಲಿ ಸೌರಮಂಡಲದ ಗ್ರಹಗಳನ್ನು ನುಂಗುತ್ತಾ ಸಾಗುತ್ತಾನೆ. ಮೂದಲಿಗೆ ಬುಧ, ಶುಕ್ರ ಗ್ರಹಗಳನ್ನು ನುಂಗಿದ ಈತನ ಸರದಿಯಲ್ಲಿ ಮುಂದಿನ ಗ್ರಹ ಭೂಮಿ. ಆಕಾಶಗಂಗೆಯಲ್ಲಿ ಸೂರ್ಯ ರೆಡ್ ಜಾಯಿಂಟ್ ಆಗಿ ಬದಲಾಗುವ ಮೂದಲು ಅವನಲ್ಲಿನ ತಾಪಮಾನ ಹೆಚ್ಚುತ್ತಾ ಹೊಗುತ್ತದೆ ಇದರಿಂದಾಗಿ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಅಂತ್ಯವಾಗಿರುತ್ತದೆ. ಸೂರ್ಯನಲ್ಲಿನ ಹೈಡ್ರೋಜನ್ ಉರಿದು ಬರಿದಾದಾಗ ಹೀಲಿಯಮ್ ಮಾತ್ರ ಉಳಿದಿರುತ್ತದೆ. ಹೀಲಿಯಮ್ ಉರಿಯುವ ಮೂಲಕ ಕಾರ್ಬನ್ ಆಗಿ ಬದಲಾಗುತ್ತ ಹೋಗುತ್ತದೆ. ಇದರಿಂದಾಗಿ ಆತನ ಹಿಗ್ಗುವಿಕೆ ಇನ್ನು ಹೆಚ್ಚಾಗುತ್ತಾ ಹೋಗುತ್ತದೆ. ಪ್ರಕ್ರಿಯೆಯಿಂದ ಸೂರ್ಯನ ಮೇಲಮೈ ಒಡೆದು ಚೂರು ಚೂರಾಗಿ ಆಕಾಶದಲ್ಲಿ ಲೀನವಾಗಿರುತ್ತದೆ. ಕೊನೆಯಲ್ಲಿ ಉಳಿದ ಭಾಗವು ಭೂಮಿಯ ಗಾತ್ರದಷ್ಟಾಗಿರುತ್ತದೆ. ಆದರೂ ಅದರ ಉಷ್ಣತೆಯ ತೀರ್ವತೆಯನ್ನು ಉಹಿಸಲು ಅಸಾಧ್ಯ.ಇದನ್ನು ಖಗೋಳ ವಿಜ್ಞಾನದಲ್ಲಿ ವೈಟ್ ಬ್ಲಫ್ ಎಂದು ಕರೆಯುತ್ತಾರೆಶ್ವೇತ ವಾಮನನ ರೂಪ ತಾಳಿದ ಸೂರ್ಯ ತನ್ನ ನಿರಂತರ ಉರಿಯುವಿಕೆಯನ್ನು ಮುಂದುವರಿಸುತ್ತಾನೆ. ತನ್ನಲ್ಲಿನ ಅನಿಲವೆಲ್ಲಾ ಬರಿದಾದಾಗ ಬ್ಲಾಕ್ ಹೋಲ್ ಆಗಿ ಬದಲಾಗುತ್ತಾನೆ. ರೀತಿಯಾಗಿ ಸೂರ್ಯನ ಅಂತ್ಯವಾಗುವುದು. ನಮ್ಮ ಸೂರ್ಯನ ಹಾಗೆ ಇರುವ  ಎಷ್ಟೋ ನಕ್ಷತ್ರಗಳ ಅಂತ್ಯ ಆಕಾಶ ಗಂಗೆಯಲ್ಲಿ ಆಗಿದೆ. ಹಾಗೇ ಎಷ್ಟೋ ಸೂರ್ಯನ ಉಗಮಗಳು ಇಂದಿಗೂ ಆಗುತ್ತಿವೆ. ಅಂತರಿಕ್ಷೆಯ ಪ್ರಕ್ರಿಯೆ ನಿರಂತರ.     

               

                               

                               

                               

                               

                               

 

ಗೊಬ್ಬರ ತಿನ್ನೋ ಜನ

 


ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ನಮಗೆ ಗೊತ್ತಿರುವ ನಾಣ್ನುಡಿನಾವಿಂದು ಕಷ್ಟಪಟ್ಟು ದುಡಿದು ವಿಷವನ್ನು ತಿನ್ನುತ್ತಿದ್ದೇವೆ. ನಮ್ಮ ಸಾವಿನ ಗುಂಡಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಇತ್ತೀಚಿನ ಒಂದು ವರದಿಯ ಪ್ರಕಾರ ದಿನ ನಿತ್ಯ ಅರ್ಧ ಮಿಲಿಗ್ರಾಂನಷ್ಟು ಕೀಟನಾಶಕಗಳನ್ನು ನಮ್ಮ ಆಹಾರದ ಜೊತೆ ಸೇವಿಸುತ್ತಿದ್ದೇವೆಶ್ರಮಪಟ್ಟು ದುಡಿದು , ವಿಷ ತಿನ್ನುವ ಗತಿ ಮನುಷ್ಯನಿಗೆ, ಇಂದೇ ಏಕೆ ಬಂತು

ನಾವೆಲ್ಲರೂ ಯೋಚಿಸಬೇಕಾದ ಪ್ರಶ್ನೆ ಇದು.

ನಮ್ಮ ದೇಶದಲ್ಲಿ  ಪ್ರಸ್ತುತ 80,000 ಟನ್ನಗೂ ಮಿಗಿಲಾಗಿ ಕೀಟನಾಶಕಗಳನ್ನು ಬಳಸಲಾಗುತ್ತಿದ್ದೆ.    ಅಂದಾಜು 6ಸಾವಿರ ಕೋಟಿಗು ಹೆಚ್ಚು ಹಣವನ್ನು ಪ್ರತಿ ವರ್ಷ ಇದಕ್ಕಾಗಿ ವೆಚ್ಚವಾಗುತ್ತಿದ್ದೆಸುಮಾರ 131 ತರದ ಪೀಡೆನಾಶಕಗಳು ಬಳಕೆಗೆ ಯೋಗ್ಯವೆಂದು ಭಾರತದಲ್ಲಿ  ನೋಂದಾಯಿಸಲ್ಪಟಿವೆಇನ್ನೂ ಪರವಾನಿಗೆ ಇಲ್ಲದೆ ಮತ್ತು ನಕಲಿ ಹಾಗೂ ಕಳಪೆಗುಣಮಟ್ಟದ ಕೀಟನಾಶಕಗಳ ಮಾರಾಟ ಮತ್ತು ಉತ್ಪಾದನೆಯ ಜಾಲ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಸಕ್ರಿಯವಾಗಿದೆ.                                  

ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ಕುರಿತಾದ ಒಂದು ನಾಣ್ಯದ ಮುಖ,ಇದಾದರೆ ಇನ್ನೊಂದು ಮುಖ ಇನ್ನೂ ಕರಾಳವಾಗಿದೆಇತ್ತೀಚಿನ ದಿನಗಳಲ್ಲಿ ಬೆಳೆಗಳ ಮೇಲೆ ಕೀಟಗಳ ಹಾವಳಿ ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಕೀಟ ಹತೋಟಿಯಂತು ದೂರದ ಮಾತು! ಕೀಟ ನಿರ್ವಹಣೆ  ಮಾಡಿದರೆ ಸಾಕು ಎನ್ನುವ ಪರಿಸ್ಥಿತಿ  ರೈತರಲ್ಲಿ ನಿರ್ಮಾಣವಾಗಿದೆ.

''ಯಾವ ಕೀಟನಾಶಕಔಷಧ ಸಿಂಪಡಿಸಿದರು ಕೀಟಗಳು ಸಾಯ್ತಿಲ್ಲಅಂತಹುದರಲ್ಲಿ ಸರಕಾರದವರು ಕೀಟನಾಶಕ ಮತ್ತು ಗೊಬ್ಬರದ ಬೆಲೆ ಏರಿಸಿದ್ದಾರೆ. ನಾವು ಎಷ್ಟು ದುಡಿದರ  ಅಷ್ಟೇ'' 

ಎಂದು ಕೆಲ ರೈತರು ಹೇಳುವುದು ಇದೆ. ಹಾಗಾದರೆ ಕೀಟಗಳ ಹತೋಟಿ ಅಥವಾ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಕೀಟನಾಶಕಗಳು ಕಳಪೆ ಗುಣಮಟ್ಟದ್ದಾಗಿರುವ ಕಾರಣದಿಂದ ಕೀಟ  ಹತೋಟಿ ಸಾಧ್ಯವಾಗುತ್ತಿಲ್ಲವೇ? ಅಥವಾ ಕೀಟಗಳು 'ಕೀಟನಾಶಕ ನಿರೋಧಕತೆ' ಬೆಳೆಸಿಕೊಂಡಿವೆಯೇ?  

ರೈತರನ್ನ ಇಂದು ಹೆಚ್ಚಾಗಿ  ಚಿಂತೆಗೆ ಇಡುಮಾಡಿರುವ ಪ್ರಶ್ನೇ ಇದು.

ರಾಸಾಯನಿಕ ಕ್ರಿಮಿನಾಶಕಗಳು ಯಥೇಚ್ಛವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆಜೊತೆಗೆ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.

ವಿವೇಚನಾರಹಿತ ಕೀಟನಾಶಕಗಳ ಬಳಕೆ ಅಸಮರ್ಪಕ ನಿರ್ವಹಣೆ ಮತ್ತು ಕೀಟನಾಶಕಗಳ ವಿಷಯುಕ್ತತೆಯ ಹರಿವಿನ ಅಭಾವದಿಂದಾಗಿ ನಾವೆಲ್ಲರು ದುರಂತದ ಭಾಗಿಲಲ್ಲಿ ಬಂದು ನಿಂತಿದ್ದೇವೆಮಿತಿ ಮಿರಿದ ಕೀಟನಾಶಕಗಳ ಬಳಕೆಯಿಂದಾಗಿ ಮನುಷ್ಯನ ಆರೋಗ್ಯ , ಮಣ್ಣಿನ ಗುಣಮಟ್ಟ ಹಾಗು ಪರಿಸದ ಮೇಲು ಅಗಾಧವಾದ ದುಷ್ಪರಿಣಾಮಗಳಾಗುತ್ತಿದೆ. ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನವೆ ಕಿರು ಬರವಣಿಗೆಯ ಉದ್ದೇಶ.               

ಕೈ ಹುಣ್ಣಿಗೆ ಕನ್ನಡಿ ಬೇಡ ಎನ್ನುವಂತೆ, ಭಾರತದ ಕೃಷಿಯಲ್ಲಿ ಇಷ್ಟು ದೊಡ್ಡಮಟ್ಟದ                 ವ್ಯವಹಾರವನ್ನು ಮಾಡುತ್ತಿರುವ ಕೀಟನಾಶಕಗಳ ಉದ್ಯಮ ರಾಜಕೀಯ ವಶೀಲಿಯನ್ನು  ನಡೆಸುತ್ತದೆ ಎನ್ನುವುದಕ್ಕೆ ಯಾವುದೆ ವಿವರಣೆಗಳು ಬೇಕಾಗಿಲ್ಲ. ಹೀಗಾಗಿ ಪರವಾನಿಗೆ ಇಲ್ಲದ ಮತ್ತು ಅಪಾಯಕಾರಿ ರಸಾಯನಿಕಗಳ ಉತ್ಪಾಧನೆ ಮತ್ತು ಮಾರಾಟ ನಿರ್ಭಿಡೆಯಿಂದ ನೆಡೆಯುತ್ತಿದೆ. ಅತಿಯಾಗಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳಿಂದ ಭವಿಷ್ಯದಲ್ಲಾಗ ಬಹುದಾದ ಅಪಾಯಗಳ ಬಗ್ಗೆ  ಜಾಗೃತಿ ಎಲ್ಲರಲ್ಲೂ ಮೂಡ ಬೇಕಾಗಿದೆ. ಪರ್ಯಾ ಮಾರ್ಗ ಮತ್ತು ಸುರಕ್ಷಿತ ಆಹಾರ ಉತ್ಪಾದನೆಗೆ ರೈತರು ಆಧ್ಯತೆ ನೀಡ ಬೇಕಾಗಿದೆ. ಆಗ ಮಾತ್ರ ಪರಿಸ್ಥಿತಿ ಬದಲಾಗಲು ಸಾಧ್ಯ. ಕುರಿತಾದ ಒಂದು ಪಕ್ಷಿನೋಟ ಬರವಣಿಗೆಯಲ್ಲಿದೆ.

ಕೃಷಿ ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆ. ಭಾರತದಲ್ಲಿ 70% ಜನ ಕೃಷಿಯನ್ನೇ ಆಧರಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ರೈತನ ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಭಾರತೀಯ ಕೃಷಿ ಇಂದು ಒಂದು ಉದ್ಯಮವಾಗಿದೆ. ವ್ಯಾಪಾರಿ ಬೆಳೆಗಳ ಉತ್ಪನ್ನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸ್ವತಂತ್ರ ಪೂರ್ವದ ಭಾರತ 50 ಮಿಲಿಯನ್ ಟನ್ ಆಹಾರವನ್ನು ಉತ್ಪಾದನೆ ಮಾಡುತ್ತಿತ್ತು. ಈಗ 250 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಬೇಳೆಯುತ್ತಿದ್ದೆ. ಇನ್ನೊಂದೆಡೆ ಕೃಷಿ  ಭೂಮಿಯು ಕಮ್ಮಿಯಾಗುತ್ತಾ ಬರುತ್ತಿದೆ. ಜಾಗತಿಕವಾಗಿ ಆಹಾರ ಬೇಳೆಗಳ ಉತ್ಪನ್ನ ಮತ್ತು  ಬೇಡಿಕೆಯು ನಡುವಿನ ಅಂತರವು ಹೆಚ್ಚುತ್ತಿದೆ. ಕೃಷಿಯಲ್ಲಿನ ಬದಲಾವಣೆಗಳು ರೈತನ ವ್ಯಾಪಾರಿ ಮನೋಧರ್ಮ ಕ್ಕೆ ಉತ್ತೇಜನ ನೀಡುತ್ತಿದೆ. ಅಷ್ಟೇಅಲ್ಲ ಕೃಷಿ ಪದ್ಧತಿಯನ್ನೇ  ಭಾರತದಲ್ಲಿ  ಬದಲಾಯಿಸಿದೆ

1960 ರಲ್ಲಿ ಭಾರತದಲ್ಲಾದ ಹಸಿರುಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನು ಬದಲಿಸಿತು. ಗುಣಮಟ್ಟದ ಕೃಷಿ ಬೀಜಗಳ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಕೃಷಿಗೆ ಬುನಾದಿ ಹಾಕಿತ್ತು. ರೈತರು ಕೃಷಿ ಬಗ್ಗೆ ಯೋಚನೆಮಾಡುತ್ತಿದ್ದ ದಿಕ್ಕುನ್ನು ಬದಲಿಸಿತ್ತುಭತ್ತ ಗೋಧಿ ಹತ್ತಿ ಮತ್ತು ಇತರೆ ವ್ಯಾಪಾರಿ ಬೆಳೆಗಳು ಆಧುನಿಕ  ಕೃಷಿ ಕ್ರಾಂತಿಯಿಂದಾಗಿ ಹೆಚ್ಚು ಇಳುವರಿ ನೀಡಲಾರಂಭಿಸಿದವು.ಇದರಿಂದಾಗಿ      ಬೇಡಿಕೆ ಮತ್ತು ಉತ್ಪಾಧನೆಯ ನಡುವಿನ ಅಂತರ ಕಡಿಮೆ ಆಯ್ತುಹೀಗಾಗಿ ಹೆಚ್ಚಿನ ಬೆಳೆಯ ನಿರೀಕ್ಷೆಯಲ್ಲಿ ಹೆಚ್ಚು ಕ್ರಿಮಿನಾಶಕಗಳನ್ನು ಬಳಸುವುದು ಕೃಷಿ ಪದ್ಧತಿಯಲ್ಲಿ ಒಂದು ಅಭ್ಯಾಸವಾಗಿ ಹೋಯಿತು. ಕ್ರಿಮಿನಾಶಕಗಳು ಮನುಷ್ಯನ ಆರೋಗ್ಯವನ್ನು ಮಣ್ಣಿನ   ಗುಣಮಟ್ಟವನ್ನು ಹಾಗೂ ವಾತಾವರಣವನ್ನು ಹಾಳು ಮಾಡುತ್ತಿರುವುದು ರೈತನ ಅರಿವಿಗೆ ಬಾರದೆ ಹೋಯಿತು.     

ಕೀಟನಾಶಕಗಳು ಇಲ್ಲದೆ ವ್ಯವಸಾಯ ಇಲ್ಲವೇ ಇಲ್ಲ ಎಂದು ರೈತರನ್ನು ಬಲವಾಗಿ            ನಂಬಿಸಿರುವುದು ಆಧುನಿಕ ಕೃಷಿ ವಿಜ್ಞಾನದ ಬಹುದೊಡ್ಡ ಸಾಧನೆ ಎಂಬಂತಾಗಿದೆ. ಇದರಿಂದಾಗಿ ಇಂದು ಹಸಿರುಕ್ರಾಂತಿಯ ಹಳಿಗಳ ಮೇಲೆ ಕ್ಯಾನ್ಸರ್ ರೋಗಗಳನ್ನು  ಓಡಿಸುತ್ತಿರುವ ದುರಂತದ ಹಲವು ಕಥೆಗಳನ್ನು ಭಾರತದ ರಾಜ್ಯಗಳಲ್ಲಿ ನಾವಿಂದು ಕಾಣಬಹುದಾಗಿದೆ. ರಾಸಾಯನಿಕಗಳು ಆಹಾರದೊಂದಿಗೆ ಸೇರಿ ಮನುಷ್ಯನ ಆರೋಗ್ಯವನ್ನು  ಹಾಳುಮಾಡುವುದು ದಿರ್ಘಕಾಲದಲ್ಲಿ ಕಂಡು ಬರುವ ಪರಿಣಾಮವಾದರೆ. ಅಪಾಯಕಾರಿ ಕೀಟನಾಶಕಗಳನ್ನು ಬಳಕೆಮಾಡುವ ವೇಳೆ ಮನುಷ್ಯರು ಅಪಾಯಕ್ಕೆ ತುತ್ತಾಗುತ್ತಿರುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಇತ್ತೀಚಿಗೆ ಕೀಟನಾಶಕವು ಹಲವು ರೈತರನ್ನು ಮತ್ತು ಕೂಲಿಕಾರರನ್ನೇ ಆಪೋಶನ ತೆಗೆದುಕೊಂಡಿದೆ. ಯಾವತ್ಮಲ್ ನಗರದ ಸಮೀಪ ಹೊಲಗಳಲ್ಲಿ               ಹತ್ತಿಯ ಹೂವಿಗೆ ಕೀಟನಾಶಕ ಸಿಂಪಡಿಸುವಾಗ ಒಂದೇ ದಿನ 23 ಮಂದಿ ಮೃತರಾಗಿದ್ದಾರೆ. ವಿದರ್ಭದ ಪ್ರಾಂತ್ಯದಲ್ಲಿ ಒಟ್ಟು 39 ರೈತರು ಮತ್ತು ಕೂಲಿಕಾರರು ಜೀವ ತೆತ್ತಿದ್ದಾರೆ. ಕೀಟನಾಶಕದ ವಿಷ 1800 ರೈತರಿಗೆ ತಗುಲಿ ಅಸ್ವಸ್ಥರಾಗಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರ ಕಣ್ಣು ಕಾಣಿಸುತ್ತಿಲ್ಲ; ಕಿವಿ ಕೇಳಿಸುತ್ತಿಲ್ಲ; ಮಾತನಾಡಲೂ ಆಗುತ್ತಿಲ್ಲಇದೇನು ವಿದರ್ಭಕ್ಕೆ ಮಾತ್ರ ಸೀಮಿತ ಸಮಸ್ಯೆಯಲ್ಲ. ಇದಕ್ಕೆ ರಾಷ್ಟ್ರೀಯ ಸ್ವರೂಪವಿದೆ. ಆಂಧ್ರಪ್ರದೇಶದ ವಾರಂಗಲ್ ಮತ್ತು  ಇನ್ನಿತರ ಪ್ರದೇಶಗಳಲ್ಲಿ ಪ್ರತಿ ವರ್ಷ ಸಾವಿರಾರು ರೈತಾಪಿಗಳು ಮತ್ತು ಕೃಷಿ ಕೂಲಿಕಾರರು ಕೀಟನಾಶಕಗಳಿಂದ ಅನಾರೋಗ್ಯ ಪೀಡಿತರಾಗುತ್ತಾರೆ. ಒಂದು ಅಂಕಿ ಅಂಶದ ಪ್ರಕಾರ 2015ರಲ್ಲಿ 7 ಸಾವಿರ ಮಂದಿ   ಭಾರತದಲ್ಲಿ ಕೀಟನಾಶಕಗಳಿಂದ ಸಾವನ್ನಪ್ಪಿದ್ದಾರೆ

ವಿದರ್ಭದಲ್ಲಿ ಹತ್ತಿಗೆ ಬಿಳಿಯ ಬಂಗಾರವೆಂದು ಹೇಳುತ್ತಾರೆ . ಬಿಳಿಯ ಬಂಗಾರದ ಹೂವಿನ ಚಂಡಿಗೆ, ಪತಂಗದಂತೆ ಕಾಣುವ ಪಿಂಕ್ ಬಾಲ್ ವರ್ಮ್ ಕೀಟಗಳು ದಾಳಿ ಮಾಡಿದವು.   ಕೀಟಗಳು ತಾವೇ ಹತ್ತಿಯನ್ನು ತಿನ್ನುವುದಿಲ್ಲ. ಹತ್ತಿಯ ಮೊಗ್ಗಿನ ತಳದಲ್ಲಿ ಅವು ಇಟ್ಟ ತತ್ತಿಗಳಿಂದ    ಎಂಟು ಕಾಲಿನ ಹುಳುಗಳು ಹೊರ ಬಂದು  ಹತ್ತಿಯ ಮೊಗ್ಗಿನ ಪದರವನ್ನು ಭೇದಿಸಿ ಹತ್ತಿ ಮತ್ತು ಬೀಜಗಳೆರಡನ್ನೂ ಕೆರೆಯುತ್ತವೆ. ಇದರಿಂದ ಹೂವು ಅರಳುವ ಮೊದಲೆ ಬೆಳೆ ನಾಶವಾಗುತ್ತದೆ. ಕೀಟಪೀಡೆ ತಡೆಯಲು ರೈತರು ಪ್ರಬಲ ಕೀಟನಾಶಕಗಳನ್ನು ಸಿಂಪಡಿಸಿದರು. ಕೀಟ ನಾಶಕ ಒದಗಿಸುವ ಕಂಪನಿಗಳು ಕೀಟ ನಾಶಕಗಳ ಜೊತೆಗೆ ರಕ್ಷಣೆ ಒದಗಿಸುವ ಉಪಕರಣಗಳನ್ನು ನೀಡದೆ ಇದ್ದುದರಿಂದ ಸಿಂಪಡಿಸಿದವರು ರಾಸಾಯನಿಕಗಳಿಂದ ಬಾಧಿತರಾದರು.       

ವಿದರ್ಭದಲ್ಲಿನ ಕೀಟ ನಾಶಕಗಳಿಂದ ಉಂಟಾದ ಸಾವು ನೋವು ನಮ್ಮ ರೈತರ ಕಣ್ಣು  ತೆರೆಯಿಸಬೇಕಾಗಿದೆ. ಕೃಷಿಕರು ಕೀಟ ನಾಶಕವನ್ನು ವಿಷವೆಂದು ಅರಿತು ಅದಕ್ಕೆ ತಕ್ಕವಾದ ಬಳಕೆಯ ಸೂತ್ರವನ್ನು ಅನುಸರಿಸಲೇ ಬೇಕು. ಬಳಕೆಯ ಮೊದಲು ಯಾವ ಕೀಟಕ್ಕೆ ಯಾವ ನಾಶಕ ಸರಿಯಾದ್ದೆಂದು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂದು ತಜ್ಞರಿಂದ ತಿಳಿದು ಅದೇ ಪ್ರಕಾರ ಬಳಸಬೇಕು. ಕೀಟನಾಶಕಗಳ ಮೇಲೆ ಅಂಟಿಸಲಾದ ಚೀಟಿಯಲ್ಲಿ ಇರುವ ವಿವರಗಳನ್ನು, ಅಡ್ಡ ಪರಿಣಾಮಗಳನ್ನು ಮತ್ತು ಸೇವನೆಯಿಂದ ತೊಂದರೆಯಾದರೆ ತೆಗೆದುಕೊಳ್ಳಬೇಕಾದ ತುರ್ತು ಮತ್ತು ನಂತರದ ವೈದ್ಯಕೀಯ ವಿಧಾನಗಳನ್ನು ಅರಿತಿರಬೇಕು.      

ಕೀಟ ನಾಶಕಗಳನ್ನು ಸಿಂಪಡಿಸುವಾಗ ಸುರಕ್ಷತೆಯಯ ಉಪಕರಣಗಳಾದ ಉಡುಪು ಮತ್ತು               ಮುಸುಕನ್ನು ಸೂಚನೆಯಂತೆ ಬಳಸಲೇಬೇಕು. ಸೇವನೆಯಿಂದ ಅಥವಾ ಚರ್ಮಗಳ ಮೂಲಕ ಅದು ದೇಹದಲ್ಲಿ ಸೇರಬಾರದು. ಕೀಟ ನಾಶಕಗಳ ಬಳಕೆ ಮುಗಿದಂತೆ ದೇಹವನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಅಲ್ಲದೆ ಕೀಟ ನಾಶಕ ಹನಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅದರ ಅಡ್ಡ ಪರಿಣಾಮವು ರಕ್ತದಲ್ಲಿ ಕಡಿಮೆಯಿರುತ್ತದೆ. ತಜ್ಞರು ಸೂಚಿಸಿರುವ ಕೀಟನಾಶಕಗಳು ಸರಿಯಾದ ಪರಿಣಾಮ ನೀಡದೆ ಅವುಗಳನ್ನು ಅಥವಾ ಪ್ರಮಾಣವನ್ನು ಬದಲಿಸುವಾಗ ತಜ್ಞರ ಸಲಹೆಯನ್ನು ಮತ್ತೆ ಪಡೆಯಲೇ ಬೇಕು.

ವಿದರ್ಭದ ದುರಂತದ ಘಟನೆಗಳು ಮತ್ತೆ ಮರುಕಳಿಸದಂತೆ, ದೇಶದ ಎಲ್ಲೆಡೆ ಸುಧಾರಣಾ              ಕ್ರಮಗಳನ್ನು ಜರುಗಿಸುವ ಕಾಲ ಬಂದಿದೆ. ರಾಜ್ಯ ಸರಕಾರಗಳು ಕೀಟ ನಾಶಕಗಳ ಧಾರಕಗಳಿಗೆ ಸುರಕ್ಷತೆಯನ್ನು ಸುಲಭವಾಗಿ ಗುರುತಿಸಬಲ್ಲ ಕಲರ್ ಬ್ಯಾಂಡ್ ಗಳನ್ನು ನಿಗದಿಪಡಿಸ ಬೇಕುಅಲ್ಲದೆ ಸಿಂಪಡಿಸುವ ಕೂಲಿಕಾರರಿಗೆ ಮತ್ತು ರೈತರಿಗೆ ಸೂಕ್ತ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕುಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಗಳಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳು ಬೇಕೆಂದು ಗುರುತಿಸಿ, ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಸೂಕ್ತ ತಿಳುವಳಿಕೆ ಮತ್ತು ತರಬೇತಿಯ ಶಿಭಿರಗಳನ್ನು ನಡೆಸಬೇಕು. ರಾಸಾಯನಿಕ ತಯಾರಿಸುವ ಕಂಪನಿಗಳ ಸಹಾಯವನ್ನು ತರಬೇತಿ ನೀಡುವಲ್ಲಿ  ಗ್ರಾಮದ ಅಧಿಕಾರಿಗಳು ಪಡೆಯಬೇಕು.

ವಿದರ್ಭದಲ್ಲಿನ  ದುರಂತ ಎಲ್ಲಿಯೂ ಮರುಕಳಿಸದಂತೆ ಆಗ ಬೇಕಾದರೆ ರೈತರು ಸರಿಯಾದ                 ಅನುಸ್ಟಾನದಲ್ಲಿ ಯಾವುದೇ ರೀತಿಯ ಅಸಡ್ಡೆ ಮಾಡಬಾರದು. ಕೃಷಿ ಪ್ರಧಾನ ದೇಶದಲ್ಲಿ  ಕೃಷಿಕರ ಒಳಿತು ಮತ್ತು  ಯಶಸ್ಸು ತುಂಬ ಮುಖ್ಯಔಷಧ ಕಂಪನಿಗಳ ನಿಯಮ ಬಾಹಿರ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಅವುಗಳನ್ನು ಕಠಿಣ ದಂಡನೆಗೆ ಒಳಪಡಿಸಲೇಬೇಕು. ನ್ಯಾಯಪರತೆಯ ಖಾತ್ರಿ ಯಾವುದೇ  ಸಮಾಜದ ಮೂಲಭೂತ ಲಕ್ಷಣ ಎಂಬುದನ್ನು ನಾವೆಲ್ಲರು ಮರೆಯಬಾರದು