Saturday, 2 January 2021

ಸೂರ್ಯನ ಅಂತ್ಯ.

 

 


ವಿಜ್ಞಾನವೊಂದು ಸತ್ಯದ ಹುಡುಕಾಟ! ಸತ್ಯವೆನ್ನುವುದು ಹೋಗಲು ಹಾದಿಗಳಿಲ್ಲದ ನಾಡು, ತತ್ವ ನಂಬಿಕೆ ಅಥವಾ ಕರ್ಮಾಚರಣೆಗಳಿಂದ ನಾವು ಆಸೀಮೆಯನ್ನು ತಲುಪಲು ಸಾಧ್ಯವಿಲ್ಲ. ತಾತ್ವಿಕ ತಿಳುವಳಿಕೆಯೊಂದೆ ಅಲ್ಲಿಗೆ ದಾರಿ ತೋರಿಸುವುದು.ನಮ್ಮ ತಿಳಿವಿನ ಪರಿಧಿಯನ್ನು ವೃಧ್ದಿಸುವುದೆ ಈ ಬರವಣಿಗೆಯ  ಉದ್ದೇಶ.

“ಉದಯೇ ಬ್ರಹ್ಮ ಸ್ವರೂಪೇ, ಮಧ್ಯತೇ ಮಹೇಶ್ವರ, ಅಸ್ಥಮಾನೇ ಸ್ವಯಂ ವಿಷ್ಣುಂ, ತ್ರಯೀ ಮೂರ್ತೆ ದಿವಾಕರ”. ಉದಯ ಕಾಲದಲ್ಲಿ ಬ್ರಹ್ಮನ ಸ್ವರೂಪವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮಹೇಶ್ವರನ ಉಗ್ರ ರೂಪ ತಾಳಿ, ಸಂಜೆ ಮುಳುಗುವ ವೇಳೆಗೆ ಸರ್ವ ರಕ್ಷಕ ಸ್ವಯಂ ವಿಷ್ಣು ಸ್ವರೂಪಿಯಾಗುವ, ಸೂರ್ಯ ದೇವನು ತನ್ನೊಳಗೆ ಸೃಷ್ಠಿ, ಸ್ಥಿತಿ, ಲಯ ಮೂರು ಸ್ಥಿತಿಗಳಿಗೆ ಕಾರಣೀಭೂತರಾದ ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾಗಿದ್ದಾರೆ ಎಂದು ಅನಾದಿಕಾಲದಿಂದಲೂ ನಮ್ಮ ಪುರಾಣಗಳಿಂದ ತಿಳಿದದ್ದನ್ನು ನಂಬಿ ಬಂದಿದ್ದೇವೆ. ನಮ್ಮ ಆಧ್ಯಾತ್ಮ ಮತ್ತು ಪುರಾಣಗಳಲ್ಲಿ ಅನಂತವಾಗಿರುವ ಸೂರ್ಯದೇವನಿಗೆ, ಒಂದು ಕೊನೆಯ ದಿನವಿದೆ ಎಂದು ವಿಜ್ಞಾನ ಹೇಳುತ್ತಿದೆ. ಹಾಗಿದ್ದರೆ  ಆ ದಿನ ಯಾವುದು? ಅಂದು ಏನೆಲ್ಲಾ ಆಗುವುದು ಎಂಬ ಬಗ್ಗೆ ಒಂದು ಅವಲೋಕನವೇ  ಈ ಬರವಣಿಗೆ 

ಸೂರ್ಯನ ತಾಪವನ್ನು ತಾಳಲಾಗದೆ, ಅವನ ಪತ್ನಿ ಸಂಧ್ಯಾ ದೇವಿ, ತನ್ನ ಮುಖವನ್ನು ಎಂದಿಗೂ ಎತ್ತಿ ಸೂರ್ಯನನ್ನು ನೋಡಿಲ್ಲವೆಂದು ಪುರಾಣದ ಕತೆಗಳು ಹೇಳುತ್ತವೆ. ಸೂರ್ಯ ನಾರಾಯಣನು ಅನಂತ ಅನನ್ಯ, ಪ್ರಕಾಶದ ಕೇಂದ್ರ ಬಿಂದು ಎಂಬುದಾಗಿ ನಾವೆಲ್ಲಾ ಒಪ್ಪಿ ಕೊಂಡಿದ್ದೇವೆ. ನಂಬಿಕೆಯ ನೆಲೆಯಲ್ಲಿ ಈ ಪುರಾಣದ ಕತೆಗಳು ನೆಡೆದು ಬಂದಿವೆ. ಆದರೆ ವಿಜ್ಞಾನವು, ಅರಿವಿಗೆ ಬಂದ ಜ್ಞಾನವನ್ನು ಮಾತ್ರ ಒಪ್ಪಿಕೊಳ್ಳುತ್ತವೆ. ಆಧಾರವಿಲ್ಲದ, ಸಾಕ್ಷೀಕರಿಸದ ವಿವರಗಳನ್ನು ನಮ್ಮ ಅರಿವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈ ಜಿಜ್ಞಾಸೆಯ ನೆಲೆಯಲ್ಲಿ ನೆಡೆದ ವೈಜ್ಞಾನಿಕ ಸಂಶೋಧನೆಗಳೇ, ಸೂರ್ಯನ ಹುಟ್ಟು ಮತ್ತು ಸಾವಿನ ಬಗ್ಗೆ ನಿಖರವಾದ ವಿಶ್ಲೇಷಣೆಗಳನ್ನು ಕೊಟ್ಟಿದೆ. ಶತಮಾನ ಕಂಡ ಖಗೋಳ ವಿಜ್ಞಾನದ, ಈ ಅಧ್ಯಯನವು ಮನುಕುಲದ ಮುಂದಿನ ದಾರಿಗೆ ದೀಪವಾಗಿದೆ.               

“ಮೂಡಲ ಮನೆಯ, ಮುತ್ತಿನ ನೀರಿನ ಎರಕವಾ ಹ್ಯೊದಾ, ನುಣ್ಣನೇ ಎರಕವಾ ಹ್ಯೊದಾ, ಬಾಗಿಲ ತೆರೆದು, ಬೆಳಕು ಹರಿದು ಜಗವೆಲ್ಲಾ ತ್ಯೊದಾ”. ಈ ರೀತಿಯಾಗಿ ನಾಲ್ಕು ಸಾವಿರ ಕೋಟಿ ವರ್ಷಗಳಿಂದ ನಿತ್ಯ ತನ್ನ ಕೆಲಸವನ್ನು ತಪ್ಪದೇ ಮಾಡುತ್ತ ಬಂದಿರುವ ಸೂರ್ಯ ಒಮ್ಮೆ ಇಲ್ಲವಾದರೇ ಏನಾಗಬಹುದು? ಎಂಬುದು ಕಲ್ಪನೆಗೂ ಅಸಾಧ್ಯವಾದದ್ದು. ಭೂಮಿ ಮೇಲಿನ ಸಕಲ ಚರಾಚರಗಳ ಜೀವ ಸೆಲೆ ಈ ಸೂರ್ಯನ ಬೆಳಕು. ಎಲೆಗಳ ಮೇಲೆ ,ಹೂಗಳ ಒಳಗಿನ ಅಮೃತದ ಬಿಂದುವಿದು.   

ಸಾವಿರ ಬೆಳಕಿನ ವರ್ಷಗಳಷ್ಟು ದೂರ ಮಹಾಕಾಯವೊಂದು ನ್ಯೂಕ್ಲಾನಿಕ್ ಮಾಲ್ಯುಕ್ಯೂಲರ್ ಗ್ಯಾಸನ್ನು ಹೊಂದಿರುವ ಮೋಡಗಳಲ್ಲಿ ಒಂದು ದೊಡ್ಡ ಭಾಗ ಒಡೆದು ಬೇರಾಗುತ್ತದೆ.ಇದರಿಂದಲೇ ನಮ್ಮ ಸೌರ ಮಂಡಲ ರಚನೆಯಾಯ್ತು ಎಂಬ ಈ ವಾದವನ್ನು Nebular Theory ಎಂದು ಕರೆಯುತ್ತಾರೆ.ಈ Theory ಪ್ರಕಾರ ಗ್ಯಾಸ್ನ ಈ ಗೋಳದಲ್ಲಿ ಎರಡು ಅಥವಾ ಮೂರು ಸೂಪರ್ ನೋವಾಗಳ ಸೃಷ್ಠಿಯಾಗಿರಬಹುದು. ಇದರಿಂದಾಗಿ ಆ ಮೋಡದ ಒಂದು ದೊಡ್ಡ ಭಾಗ ಅದರಿಂದ ಬೇರ್ಪಟ್ಟಿರಬಹುದು. ಅತೀ ಹೆಚ್ಚಾದ ಗುರುತ್ವದ ಬಲವನ್ನು ಹೊಂದಿದ್ದ ಅನಿಲ ಇದರಲ್ಲಿ ಇದ್ದದ್ದರಿಂದ ಈ ಮೋಡವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚಾಗಿ ಉರಿಯಲು ಪ್ರಾರಂಭವಾಯಿತು. ಈ ಉರಿಯುವಿಕೆಯಿಂದಾಗಿ ಇದರ ಗತಿ ಮತ್ತು ಒತ್ತಡ ಹೆಚ್ಚಾಯಿತು. ಹೀಗಾಗಿ ತನ್ನೊಳಗೆ ಸುತ್ತಲು ಪ್ರಾರಂಭವಾಯಿತು. ಸುತ್ತುವಿಕೆಯ ವೇಗ ಒಂದೆಡೆ ಹೆಚ್ಚಾಗುತ್ತಿದ್ದಂತೆ ಇತ್ತ ಸಮತೋಲನಕ್ಕಾಗಿ ಉರಿಯುವುದು ಹೆಚ್ಚಾಯಿತು. ಈ ಕಾರಣದಿಂದಾಗಿ ಆ ಗೋಳವು ಹೆಚ್ಚು ಹೆಚ್ಚು ಬಿಸಿಯಾಗುತ್ತ ಹೋಯಿತು. ವೇಗವಾದ ತಿರುಗುವಿಕೆ ಮತ್ತು ಅದರ ಗತಿಯಿಂದಾಗಿ ದ್ರವರೂಪದ ಅನಿಲ ಇದ್ದ ಭಾಗ ಒಂದು ಗೋಳಾಕಾರದ ರೂಪದಲ್ಲಿ ಮಾರ್ಪಾಡಾಯಿತು. ಉಳಿದ ಭಾಗ ಆ ಗೋಳದ ಸುತ್ತ ಸುತ್ತಲು ಪ್ರಾರಂಭವಾಯಿತು. ಈ ಘಟನೆ ಪೂರ್ಣಗೊಳ್ಳಲು ಕೋಟಿ ವರ್ಷಗಳೇ ಬೇಕಾಯಿತು.    

ಕಾಲಕ್ರಮೇಣ ಆ ಬೆಂಕಿಯ ಉಂಡೆಯ ಉಷ್ಣತೆ ಕಡಿಮೆಯಾಗ ತೊಡಗಿತು. ಹೈಡ್ರೋಜನ್ ಮತ್ತು ಹೀಲಿಯಮ್ ನಿಂದ ಕೂಡಿದ ಮಧ್ಯಭಾಗ ಸೌರಮಂಡಲದ ಸೂರ್ಯನಾಗಿ ರೂಪಗೊಂಡಿತು. ಸೂರ್ಯನ ಸುತ್ತ ಸುತ್ತುತ್ತಿದ್ದ ಉಳಿದ ವಸ್ತುಗಳಿಂದ ಸೌರಮಂಡಲದ ಉಳಿದ ಗ್ರಹಗಳ ನಿರ್ಮಾಣವಾಯಿತು. ಆಕಾಶ ಗಂಗೆಯಲ್ಲಿನ ನೂರು ಕೋಟಿಗೂ ಅಧಿಕ ನಕ್ಷತ್ರಗಳಲ್ಲಿ ಸೂರ್ಯನು ಒಬ್ಬ. ಈತ ಝೀ 2 category ನಕ್ಷತ್ರವಾಗಿದ್ದಾನೆ. ಇದು ಆಕಾಶಗಂಗೆಯಲ್ಲಿನ ನಕ್ಷತ್ರಗಳ 1/10 ಭಾಗವಾಗಿದೆ. ಸೌರ ಮಂಡಲದಲ್ಲಿ ಎಲ್ಲಾ ಗ್ರಹಗಳು ಹೇಗೆ ಸೂರ್ಯನಿಗೆ ಸುತ್ತುತ್ತವೆಯೋ ಹಾಗೆ ಸೂರ್ಯನು ಸೌರಮಂಡಲದೊಂದಿಗೆ ಆಕಾಶ ಗಂಗೆಯ ಮಧ್ಯ ಭಾಗವನ್ನು ಸುತ್ತುತ್ತಿದ್ದಾನೆ. ಈ ಪರಿಕ್ರಮಕ್ಕೆ 25 ಕೋಟಿ ವರ್ಷಗಳು ಬೇಕು. ಸೌರ ಮಂಡಲದಲ್ಲಿ ಅತೀ ಹೆಚ್ಚು ದ್ರವ ರೂಪದ ವಸ್ತುವನ್ನು ಸೂರ್ಯ ಮಾತ್ರ ಹೊಂದಿದ್ದಾನೆ. ಸೂರ್ಯನ ವ್ಯಾಸ 1392000 ಕಿಲೋ ಮೀಟರ್ ಇದೆ. ಈತ ಭೂಮಿಗಿಂತ 10 ಲಕ್ಷ ಪಟ್ಟು ದೊಡ್ಡವನಾಗಿದ್ದಾನೆ. ಹಾಗೂ 15 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದಾನೆ.ಇಷ್ಟು  ದೂರದಲ್ಲಿದ್ದರೂ ಅವನ ಕಿರಣಗಳು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 8 ನಿಮಿಷ 16 ಸೆಕೆಂಡು. ಸೂರ್ಯ ನೆನ್ನುವ ಈ ನಕ್ಷತ್ರವು ಹೀಲಿಯಮ್, ಹೈಡ್ರೋಜನ್ ಅನಿಲ ರಾಶಿಗಳ ಪಿಂಡವಾಗಿವೆ.  

ಸುರ್ಯನ ಕೇಂದ್ರ ಭಾಗವನ್ನು ಕೋರ್ ಎಂದು ಕರೆಯುತ್ತಾರೆ.ಇಲ್ಲಿನ ಉಷ್ಣತೆಯು ಒಂದು ಕೋಟಿ 56 ಲಕ್ಷ ಸೆಲ್ಸಿಯಸ್ ಇದೆ. ಇನ್ನು ಸೂರ್ಯನ ಹೊರ ಮೈ ಮೇಲಿನ ಉಷ್ಣತೆಯು 6 ಕೋಟಿ ಸೆಲ್ಸಿಯಸ್ ಆಗಿದೆ. ಸೂರ್ಯನಲ್ಲಿ ಪ್ರತಿ ಸೆಕೆಂಡಿಗೆ 6570 ಲಕ್ಷ ಟನ್ ಹೈಡ್ರೋಜನ್ ಅನಿಲವನ್ನು 6530 ಲಕ್ಷಟನ್ ಹೀಲಿಯಮ್ ಆಗಿ ಪರಿವರ್ತನೆ ಮಾಡುತ್ತದೆ. ಮಧ್ಯದಲ್ಲಿ ಉಳಿದ 40 ಲಕ್ಷ ಟನ್ ಮಾತ್ರ ಬೆಳಕಿನ ರೂಪವಾಗಿ ಬದಲಾಗುತ್ತದೆ. ಹೀಗೆ ಇದು ಇನ್ನು 5000 ಕೋಟಿ ವರ್ಷಗಳವರೆಗೆ ನಿರಂತರ ನೆಡೆಯುವ ಪ್ರಕ್ರಿಯೆ ಆಗಿದೆ. ಯಾವಾಗ ಕೇಂದ್ರ ಭಾಗದಲ್ಲಿ ಹೈಡ್ರೋಜನ್ ಅನಿಲವು ಮುಗಿದು ಹೋಗುವುದೋ, ಆ ಸೂರ್ಯ ತಣ್ಣಗಾಗಲು ಪ್ರಾರಂಭಿಸುತ್ತಾನೆ. ಸೂರ್ಯನ ಮೇಲಮೈತಣ್ಣಗಾದಂತೆ ಅದರ ವ್ಯಾಸವು ಹಿಗ್ಗುತ್ತಾ ಹೋಗುತ್ತದೆ. ಹೀಗೆ ಉಬ್ಬುತ್ತಾ ಇಗಿರುವಾ ಗಾತ್ರಕ್ಕಿಂತ ಸೂರ್ಯ ಮೂರು ಪಟ್ಟು ದೊಡ್ಡವನಾಗುತ್ತಾನೆ. ಈ ರೀತಿಯಲ್ಲಿ ಉಬ್ಬುತ್ತಾ ಹೋಗುವ ನಕ್ಷತ್ರವನ್ನು ರೆಡ್ ಜಾಯಿಂಟ್ ಎಂದು ಕರೆಯುತ್ತಾರೆ.               

ನಮ್ಮ ಸೂರ್ಯ ಮಂಡಲದ ಸೂರ್ಯ ಕೂಡ ಒಂದು ದಿನ ರೆಡ್ ಜಾಯಿಂಟ್ ಆಗುತ್ತಾನೆ. ಹೀಗೆ ಬೆಳೆಯುವ ಹಂತದಲ್ಲಿ ಸೌರಮಂಡಲದ ಗ್ರಹಗಳನ್ನು ನುಂಗುತ್ತಾ ಸಾಗುತ್ತಾನೆ. ಮೂದಲಿಗೆ ಬುಧ, ಶುಕ್ರ ಗ್ರಹಗಳನ್ನು ನುಂಗಿದ ಈತನ ಸರದಿಯಲ್ಲಿ ಮುಂದಿನ ಗ್ರಹ ಭೂಮಿ. ಆಕಾಶಗಂಗೆಯಲ್ಲಿ ಸೂರ್ಯ ರೆಡ್ ಜಾಯಿಂಟ್ ಆಗಿ ಬದಲಾಗುವ ಮೂದಲು ಅವನಲ್ಲಿನ ತಾಪಮಾನ ಹೆಚ್ಚುತ್ತಾ ಹೊಗುತ್ತದೆ ಇದರಿಂದಾಗಿ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಅಂತ್ಯವಾಗಿರುತ್ತದೆ. ಸೂರ್ಯನಲ್ಲಿನ ಹೈಡ್ರೋಜನ್ ಉರಿದು ಬರಿದಾದಾಗ ಹೀಲಿಯಮ್ ಮಾತ್ರ ಉಳಿದಿರುತ್ತದೆ. ಈ ಹೀಲಿಯಮ್ ಉರಿಯುವ ಮೂಲಕ ಕಾರ್ಬನ್ ಆಗಿ ಬದಲಾಗುತ್ತ ಹೋಗುತ್ತದೆ. ಇದರಿಂದಾಗಿ ಆತನ ಹಿಗ್ಗುವಿಕೆ ಇನ್ನು ಹೆಚ್ಚಾಗುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಿಂದ ಸೂರ್ಯನ ಮೇಲಮೈ ಒಡೆದು ಚೂರು ಚೂರಾಗಿ ಆಕಾಶದಲ್ಲಿ ಲೀನವಾಗಿರುತ್ತದೆ. ಕೊನೆಯಲ್ಲಿ ಉಳಿದ ಭಾಗವು ಭೂಮಿಯ ಗಾತ್ರದಷ್ಟಾಗಿರುತ್ತದೆ. ಆದರೂ ಅದರ ಉಷ್ಣತೆಯ ತೀರ್ವತೆಯನ್ನು ಉಹಿಸಲು ಅಸಾಧ್ಯ.ಇದನ್ನು ಖಗೋಳ ವಿಜ್ಞಾನದಲ್ಲಿ ವೈಟ್ ಬ್ಲಫ್ ಎಂದು ಕರೆಯುತ್ತಾರೆ.  ಶ್ವೇತ ವಾಮನನ ರೂಪ ತಾಳಿದ ಸೂರ್ಯ ತನ್ನ ನಿರಂತರ ಉರಿಯುವಿಕೆಯನ್ನು ಮುಂದುವರಿಸುತ್ತಾನೆ. ತನ್ನಲ್ಲಿನ ಅನಿಲವೆಲ್ಲಾ ಬರಿದಾದಾಗ ಬ್ಲಾಕ್ ಹೋಲ್ ಆಗಿ ಬದಲಾಗುತ್ತಾನೆ. ಈ ರೀತಿಯಾಗಿ ಸೂರ್ಯನ ಅಂತ್ಯವಾಗುವುದು. ನಮ್ಮ ಸೂರ್ಯನ ಹಾಗೆ ಇರುವ  ಎಷ್ಟೋ ನಕ್ಷತ್ರಗಳ ಅಂತ್ಯ ಆಕಾಶ ಗಂಗೆಯಲ್ಲಿ ಆಗಿದೆ. ಹಾಗೇ ಎಷ್ಟೋ ಸೂರ್ಯನ ಉಗಮಗಳು ಇಂದಿಗೂ ಆಗುತ್ತಿವೆ. ಅಂತರಿಕ್ಷೆಯ ಈ ಪ್ರಕ್ರಿಯೆ ನಿರಂತರ.     

               

                               

                               

                               

                               

                               

 

ಗೊಬ್ಬರ ತಿನ್ನೋ ಜನ

 


ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ನಮಗೆ ಗೊತ್ತಿರುವ ನಾಣ್ನುಡಿ. ನಾವಿಂದು ಕಷ್ಟಪಟ್ಟು ದುಡಿದು ವಿಷವನ್ನು ತಿನ್ನುತ್ತಿದ್ದೇವೆ. ನಮ್ಮ ಸಾವಿನ ಗುಂಡಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಇತ್ತೀಚಿನ ಒಂದು ವರದಿಯ ಪ್ರಕಾರ ದಿನ ನಿತ್ಯ ಅರ್ಧ ಮಿಲಿಗ್ರಾಂನಷ್ಟು ಕೀಟನಾಶಕಗಳನ್ನು ನಮ್ಮ ಆಹಾರದ ಜೊತೆ ಸೇವಿಸುತ್ತಿದ್ದೇವೆ. ಶ್ರಮಪಟ್ಟು ದುಡಿದು , ವಿಷ ತಿನ್ನುವ ಗತಿ ಮನುಷ್ಯನಿಗೆ, ಇಂದೇ ಏಕೆ ಬಂತು ? 

ನಾವೆಲ್ಲರೂ ಯೋಚಿಸಬೇಕಾದ ಪ್ರಶ್ನೆ ಇದು.

ನಮ್ಮ ದೇಶದಲ್ಲಿ  ಪ್ರಸ್ತುತ 80,000 ಟನ್ನಗೂ ಮಿಗಿಲಾಗಿ ಕೀಟನಾಶಕಗಳನ್ನು ಬಳಸಲಾಗುತ್ತಿದ್ದೆ.    ಅಂದಾಜು 6ಸಾವಿರ ಕೋಟಿಗು ಹೆಚ್ಚು ಹಣವನ್ನು ಪ್ರತಿ ವರ್ಷ ಇದಕ್ಕಾಗಿ ವೆಚ್ಚವಾಗುತ್ತಿದ್ದೆ.  ಸುಮಾರ 131 ತರದ ಪೀಡೆನಾಶಕಗಳು ಬಳಕೆಗೆ ಯೋಗ್ಯವೆಂದು ಭಾರತದಲ್ಲಿ  ನೋಂದಾಯಿಸಲ್ಪಟಿವೆ. ಇನ್ನೂ ಪರವಾನಿಗೆ ಇಲ್ಲದೆ ಮತ್ತು ನಕಲಿ ಹಾಗೂ ಕಳಪೆಗುಣಮಟ್ಟದ ಕೀಟನಾಶಕಗಳ ಮಾರಾಟ ಮತ್ತು ಉತ್ಪಾದನೆಯ ಜಾಲ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಸಕ್ರಿಯವಾಗಿದೆ.                                  

ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ಕುರಿತಾದ ಒಂದು ನಾಣ್ಯದ ಮುಖ,ಇದಾದರೆ ಇನ್ನೊಂದು ಮುಖ ಇನ್ನೂ ಕರಾಳವಾಗಿದೆ.  ಇತ್ತೀಚಿನ ದಿನಗಳಲ್ಲಿ ಬೆಳೆಗಳ ಮೇಲೆ ಕೀಟಗಳ ಹಾವಳಿ ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಕೀಟ ಹತೋಟಿಯಂತು ದೂರದ ಮಾತು! ಕೀಟ ನಿರ್ವಹಣೆ  ಮಾಡಿದರೆ ಸಾಕು ಎನ್ನುವ ಪರಿಸ್ಥಿತಿ  ರೈತರಲ್ಲಿ ನಿರ್ಮಾಣವಾಗಿದೆ.

''ಯಾವ ಕೀಟನಾಶಕ, ಔಷಧ ಸಿಂಪಡಿಸಿದರು ಕೀಟಗಳು ಸಾಯ್ತಿಲ್ಲ. ಅಂತಹುದರಲ್ಲಿ ಸರಕಾರದವರು ಕೀಟನಾಶಕ ಮತ್ತು ಗೊಬ್ಬರದ ಬೆಲೆ ಏರಿಸಿದ್ದಾರೆ. ನಾವು ಎಷ್ಟು ದುಡಿದರ  ಅಷ್ಟೇ'' 

ಎಂದು ಕೆಲ ರೈತರು ಹೇಳುವುದು ಇದೆ. ಹಾಗಾದರೆ ಕೀಟಗಳ ಹತೋಟಿ ಅಥವಾ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಕೀಟನಾಶಕಗಳು ಕಳಪೆ ಗುಣಮಟ್ಟದ್ದಾಗಿರುವ ಕಾರಣದಿಂದ ಕೀಟ  ಹತೋಟಿ ಸಾಧ್ಯವಾಗುತ್ತಿಲ್ಲವೇ? ಅಥವಾ ಕೀಟಗಳು 'ಕೀಟನಾಶಕ ನಿರೋಧಕತೆ' ಬೆಳೆಸಿಕೊಂಡಿವೆಯೇ?  

ರೈತರನ್ನ ಇಂದು ಹೆಚ್ಚಾಗಿ  ಚಿಂತೆಗೆ ಇಡುಮಾಡಿರುವ ಪ್ರಶ್ನೇ ಇದು.

ರಾಸಾಯನಿಕ ಕ್ರಿಮಿನಾಶಕಗಳು ಯಥೇಚ್ಛವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆ. ಜೊತೆಗೆ ಈ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆ. ಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆ. ಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.

ವಿವೇಚನಾರಹಿತ ಕೀಟನಾಶಕಗಳ ಬಳಕೆ ಅಸಮರ್ಪಕ ನಿರ್ವಹಣೆ ಮತ್ತು ಕೀಟನಾಶಕಗಳ ವಿಷಯುಕ್ತತೆಯ ಹರಿವಿನ ಅಭಾವದಿಂದಾಗಿ ನಾವೆಲ್ಲರು ದುರಂತದ ಭಾಗಿಲಲ್ಲಿ ಬಂದು ನಿಂತಿದ್ದೇವೆ.  ಮಿತಿ ಮಿರಿದ ಕೀಟನಾಶಕಗಳ ಬಳಕೆಯಿಂದಾಗಿ ಮನುಷ್ಯನ ಆರೋಗ್ಯ , ಮಣ್ಣಿನ ಗುಣಮಟ್ಟ ಹಾಗು ಪರಿಸದ ಮೇಲು ಅಗಾಧವಾದ ದುಷ್ಪರಿಣಾಮಗಳಾಗುತ್ತಿದೆ. ಈ ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನವೆ ಈ ಕಿರು ಬರವಣಿಗೆಯ ಉದ್ದೇಶ.               

ಕೈ ಹುಣ್ಣಿಗೆ ಕನ್ನಡಿ ಬೇಡ ಎನ್ನುವಂತೆ, ಭಾರತದ ಕೃಷಿಯಲ್ಲಿ ಇಷ್ಟು ದೊಡ್ಡಮಟ್ಟದ                 ವ್ಯವಹಾರವನ್ನು ಮಾಡುತ್ತಿರುವ ಕೀಟನಾಶಕಗಳ ಉದ್ಯಮ ರಾಜಕೀಯ ವಶೀಲಿಯನ್ನು  ನಡೆಸುತ್ತದೆ ಎನ್ನುವುದಕ್ಕೆ ಯಾವುದೆ ವಿವರಣೆಗಳು ಬೇಕಾಗಿಲ್ಲ. ಹೀಗಾಗಿ ಪರವಾನಿಗೆ ಇಲ್ಲದ ಮತ್ತು ಅಪಾಯಕಾರಿ ರಸಾಯನಿಕಗಳ ಉತ್ಪಾಧನೆ ಮತ್ತು ಮಾರಾಟ ನಿರ್ಭಿಡೆಯಿಂದ ನೆಡೆಯುತ್ತಿದೆ. ಅತಿಯಾಗಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ಈ ಕೀಟನಾಶಕಗಳಿಂದ ಭವಿಷ್ಯದಲ್ಲಾಗ ಬಹುದಾದ ಅಪಾಯಗಳ ಬಗ್ಗೆ  ಜಾಗೃತಿ ಎಲ್ಲರಲ್ಲೂ ಮೂಡ ಬೇಕಾಗಿದೆ. ಪರ್ಯಾ ಮಾರ್ಗ ಮತ್ತು ಸುರಕ್ಷಿತ ಆಹಾರ ಉತ್ಪಾದನೆಗೆ ರೈತರು ಆಧ್ಯತೆ ನೀಡ ಬೇಕಾಗಿದೆ. ಆಗ ಮಾತ್ರ ಪರಿಸ್ಥಿತಿ ಬದಲಾಗಲು ಸಾಧ್ಯ. ಈ ಕುರಿತಾದ ಒಂದು ಪಕ್ಷಿನೋಟ ಈ ಬರವಣಿಗೆಯಲ್ಲಿದೆ.

ಕೃಷಿ ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆ. ಭಾರತದಲ್ಲಿ 70% ಜನ ಕೃಷಿಯನ್ನೇ ಆಧರಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ರೈತನ ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಭಾರತೀಯ ಕೃಷಿ ಇಂದು ಒಂದು ಉದ್ಯಮವಾಗಿದೆ. ವ್ಯಾಪಾರಿ ಬೆಳೆಗಳ ಉತ್ಪನ್ನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸ್ವತಂತ್ರ ಪೂರ್ವದ ಭಾರತ 50 ಮಿಲಿಯನ್ ಟನ್ ಆಹಾರವನ್ನು ಉತ್ಪಾದನೆ ಮಾಡುತ್ತಿತ್ತು. ಈಗ 250 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಬೇಳೆಯುತ್ತಿದ್ದೆ. ಇನ್ನೊಂದೆಡೆ ಕೃಷಿ  ಭೂಮಿಯು ಕಮ್ಮಿಯಾಗುತ್ತಾ ಬರುತ್ತಿದೆ. ಜಾಗತಿಕವಾಗಿ ಆಹಾರ ಬೇಳೆಗಳ ಉತ್ಪನ್ನ ಮತ್ತು  ಬೇಡಿಕೆಯು ನಡುವಿನ ಅಂತರವು ಹೆಚ್ಚುತ್ತಿದೆ. ಕೃಷಿಯಲ್ಲಿನ ಈ ಬದಲಾವಣೆಗಳು ರೈತನ ವ್ಯಾಪಾರಿ ಮನೋಧರ್ಮ ಕ್ಕೆ ಉತ್ತೇಜನ ನೀಡುತ್ತಿದೆ. ಅಷ್ಟೇಅಲ್ಲ ಕೃಷಿ ಪದ್ಧತಿಯನ್ನೇ  ಭಾರತದಲ್ಲಿ  ಬದಲಾಯಿಸಿದೆ. 

1960 ರಲ್ಲಿ ಭಾರತದಲ್ಲಾದ ಹಸಿರುಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನು ಬದಲಿಸಿತು. ಗುಣಮಟ್ಟದ ಕೃಷಿ ಬೀಜಗಳ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಕೃಷಿಗೆ ಬುನಾದಿ ಹಾಕಿತ್ತು. ರೈತರು ಕೃಷಿ ಬಗ್ಗೆ ಯೋಚನೆಮಾಡುತ್ತಿದ್ದ ದಿಕ್ಕುನ್ನು ಬದಲಿಸಿತ್ತು.  ಭತ್ತ ಗೋಧಿ ಹತ್ತಿ ಮತ್ತು ಇತರೆ ವ್ಯಾಪಾರಿ ಬೆಳೆಗಳು ಆಧುನಿಕ  ಕೃಷಿ ಕ್ರಾಂತಿಯಿಂದಾಗಿ ಹೆಚ್ಚು ಇಳುವರಿ ನೀಡಲಾರಂಭಿಸಿದವು.ಇದರಿಂದಾಗಿ      ಬೇಡಿಕೆ ಮತ್ತು ಉತ್ಪಾಧನೆಯ ನಡುವಿನ ಅಂತರ ಕಡಿಮೆ ಆಯ್ತು.  ಹೀಗಾಗಿ ಹೆಚ್ಚಿನ ಬೆಳೆಯ ನಿರೀಕ್ಷೆಯಲ್ಲಿ ಹೆಚ್ಚು ಕ್ರಿಮಿನಾಶಕಗಳನ್ನು ಬಳಸುವುದು ಕೃಷಿ ಪದ್ಧತಿಯಲ್ಲಿ ಒಂದು ಅಭ್ಯಾಸವಾಗಿ ಹೋಯಿತು.ಈ ಕ್ರಿಮಿನಾಶಕಗಳು ಮನುಷ್ಯನ ಆರೋಗ್ಯವನ್ನು ಮಣ್ಣಿನ   ಗುಣಮಟ್ಟವನ್ನು ಹಾಗೂ ವಾತಾವರಣವನ್ನು ಹಾಳು ಮಾಡುತ್ತಿರುವುದು ರೈತನ ಅರಿವಿಗೆ ಬಾರದೆ ಹೋಯಿತು.     

ಕೀಟನಾಶಕಗಳು ಇಲ್ಲದೆ ವ್ಯವಸಾಯ ಇಲ್ಲವೇ ಇಲ್ಲ ಎಂದು ರೈತರನ್ನು ಬಲವಾಗಿ            ನಂಬಿಸಿರುವುದು ಆಧುನಿಕ ಕೃಷಿ ವಿಜ್ಞಾನದ ಬಹುದೊಡ್ಡ ಸಾಧನೆ ಎಂಬಂತಾಗಿದೆ. ಇದರಿಂದಾಗಿ ಇಂದು ಹಸಿರುಕ್ರಾಂತಿಯ ಹಳಿಗಳ ಮೇಲೆ ಕ್ಯಾನ್ಸರ್ ರೋಗಗಳನ್ನು  ಓಡಿಸುತ್ತಿರುವ ದುರಂತದ ಹಲವು ಕಥೆಗಳನ್ನು ಭಾರತದ ರಾಜ್ಯಗಳಲ್ಲಿ ನಾವಿಂದು ಕಾಣಬಹುದಾಗಿದೆ. ರಾಸಾಯನಿಕಗಳು ಆಹಾರದೊಂದಿಗೆ ಸೇರಿ ಮನುಷ್ಯನ ಆರೋಗ್ಯವನ್ನು  ಹಾಳುಮಾಡುವುದು ದಿರ್ಘಕಾಲದಲ್ಲಿ ಕಂಡು ಬರುವ ಪರಿಣಾಮವಾದರೆ. ಅಪಾಯಕಾರಿ ಕೀಟನಾಶಕಗಳನ್ನು ಬಳಕೆಮಾಡುವ ವೇಳೆ ಮನುಷ್ಯರು ಅಪಾಯಕ್ಕೆ ತುತ್ತಾಗುತ್ತಿರುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಇತ್ತೀಚಿಗೆ ಕೀಟನಾಶಕವು ಹಲವು ರೈತರನ್ನು ಮತ್ತು ಕೂಲಿಕಾರರನ್ನೇ ಆಪೋಶನ ತೆಗೆದುಕೊಂಡಿದೆ. ಯಾವತ್ಮಲ್ ನಗರದ ಸಮೀಪ ಹೊಲಗಳಲ್ಲಿ               ಹತ್ತಿಯ ಹೂವಿಗೆ ಕೀಟನಾಶಕ ಸಿಂಪಡಿಸುವಾಗ ಒಂದೇ ದಿನ 23 ಮಂದಿ ಮೃತರಾಗಿದ್ದಾರೆ. ವಿದರ್ಭದ ಪ್ರಾಂತ್ಯದಲ್ಲಿ ಒಟ್ಟು 39 ರೈತರು ಮತ್ತು ಕೂಲಿಕಾರರು ಜೀವ ತೆತ್ತಿದ್ದಾರೆ. ಕೀಟನಾಶಕದ ವಿಷ 1800 ರೈತರಿಗೆ ತಗುಲಿ ಅಸ್ವಸ್ಥರಾಗಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರ ಕಣ್ಣು ಕಾಣಿಸುತ್ತಿಲ್ಲ; ಕಿವಿ ಕೇಳಿಸುತ್ತಿಲ್ಲ; ಮಾತನಾಡಲೂ ಆಗುತ್ತಿಲ್ಲ.  ಇದೇನು ವಿದರ್ಭಕ್ಕೆ ಮಾತ್ರ ಸೀಮಿತ ಸಮಸ್ಯೆಯಲ್ಲ. ಇದಕ್ಕೆ ರಾಷ್ಟ್ರೀಯ ಸ್ವರೂಪವಿದೆ. ಆಂಧ್ರಪ್ರದೇಶದ ವಾರಂಗಲ್ ಮತ್ತು  ಇನ್ನಿತರ ಪ್ರದೇಶಗಳಲ್ಲಿ ಪ್ರತಿ ವರ್ಷ ಸಾವಿರಾರು ರೈತಾಪಿಗಳು ಮತ್ತು ಕೃಷಿ ಕೂಲಿಕಾರರು ಕೀಟನಾಶಕಗಳಿಂದ ಅನಾರೋಗ್ಯ ಪೀಡಿತರಾಗುತ್ತಾರೆ. ಒಂದು ಅಂಕಿ ಅಂಶದ ಪ್ರಕಾರ 2015ರಲ್ಲಿ 7 ಸಾವಿರ ಮಂದಿ   ಭಾರತದಲ್ಲಿ ಕೀಟನಾಶಕಗಳಿಂದ ಸಾವನ್ನಪ್ಪಿದ್ದಾರೆ. 

ವಿದರ್ಭದಲ್ಲಿ ಹತ್ತಿಗೆ ಬಿಳಿಯ ಬಂಗಾರವೆಂದು ಹೇಳುತ್ತಾರೆ . ಬಿಳಿಯ ಬಂಗಾರದ ಹೂವಿನ ಚಂಡಿಗೆ, ಪತಂಗದಂತೆ ಕಾಣುವ ಪಿಂಕ್ ಬಾಲ್ ವರ್ಮ್ ಕೀಟಗಳು ದಾಳಿ ಮಾಡಿದವು. ಈ  ಕೀಟಗಳು ತಾವೇ ಹತ್ತಿಯನ್ನು ತಿನ್ನುವುದಿಲ್ಲ. ಹತ್ತಿಯ ಮೊಗ್ಗಿನ ತಳದಲ್ಲಿ ಅವು ಇಟ್ಟ ತತ್ತಿಗಳಿಂದ    ಎಂಟು ಕಾಲಿನ ಹುಳುಗಳು ಹೊರ ಬಂದು  ಹತ್ತಿಯ ಮೊಗ್ಗಿನ ಪದರವನ್ನು ಭೇದಿಸಿ ಹತ್ತಿ ಮತ್ತು ಬೀಜಗಳೆರಡನ್ನೂ ಕೆರೆಯುತ್ತವೆ. ಇದರಿಂದ ಹೂವು ಅರಳುವ ಮೊದಲೆ ಬೆಳೆ ನಾಶವಾಗುತ್ತದೆ. ಈ ಕೀಟಪೀಡೆ ತಡೆಯಲು ರೈತರು ಪ್ರಬಲ ಕೀಟನಾಶಕಗಳನ್ನು ಸಿಂಪಡಿಸಿದರು. ಕೀಟ ನಾಶಕ ಒದಗಿಸುವ ಕಂಪನಿಗಳು ಕೀಟ ನಾಶಕಗಳ ಜೊತೆಗೆ ರಕ್ಷಣೆ ಒದಗಿಸುವ ಉಪಕರಣಗಳನ್ನು ನೀಡದೆ ಇದ್ದುದರಿಂದ ಸಿಂಪಡಿಸಿದವರು ಈ ರಾಸಾಯನಿಕಗಳಿಂದ ಬಾಧಿತರಾದರು.       

ವಿದರ್ಭದಲ್ಲಿನ ಕೀಟ ನಾಶಕಗಳಿಂದ ಉಂಟಾದ ಸಾವು ನೋವು ನಮ್ಮ ರೈತರ ಕಣ್ಣು  ತೆರೆಯಿಸಬೇಕಾಗಿದೆ. ಕೃಷಿಕರು ಕೀಟ ನಾಶಕವನ್ನು ವಿಷವೆಂದು ಅರಿತು ಅದಕ್ಕೆ ತಕ್ಕವಾದ ಬಳಕೆಯ ಸೂತ್ರವನ್ನು ಅನುಸರಿಸಲೇ ಬೇಕು. ಬಳಕೆಯ ಮೊದಲು ಯಾವ ಕೀಟಕ್ಕೆ ಯಾವ ನಾಶಕ ಸರಿಯಾದ್ದೆಂದು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂದು ತಜ್ಞರಿಂದ ತಿಳಿದು ಅದೇ ಪ್ರಕಾರ ಬಳಸಬೇಕು. ಕೀಟನಾಶಕಗಳ ಮೇಲೆ ಅಂಟಿಸಲಾದ ಚೀಟಿಯಲ್ಲಿ ಇರುವ ವಿವರಗಳನ್ನು, ಅಡ್ಡ ಪರಿಣಾಮಗಳನ್ನು ಮತ್ತು ಸೇವನೆಯಿಂದ ತೊಂದರೆಯಾದರೆ ತೆಗೆದುಕೊಳ್ಳಬೇಕಾದ ತುರ್ತು ಮತ್ತು ನಂತರದ ವೈದ್ಯಕೀಯ ವಿಧಾನಗಳನ್ನು ಅರಿತಿರಬೇಕು.      

ಕೀಟ ನಾಶಕಗಳನ್ನು ಸಿಂಪಡಿಸುವಾಗ ಸುರಕ್ಷತೆಯಯ ಉಪಕರಣಗಳಾದ ಉಡುಪು ಮತ್ತು               ಮುಸುಕನ್ನು ಸೂಚನೆಯಂತೆ ಬಳಸಲೇಬೇಕು. ಸೇವನೆಯಿಂದ ಅಥವಾ ಚರ್ಮಗಳ ಮೂಲಕ ಅದು ದೇಹದಲ್ಲಿ ಸೇರಬಾರದು. ಕೀಟ ನಾಶಕಗಳ ಬಳಕೆ ಮುಗಿದಂತೆ ದೇಹವನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಅಲ್ಲದೆ ಕೀಟ ನಾಶಕ ಹನಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅದರ ಅಡ್ಡ ಪರಿಣಾಮವು ರಕ್ತದಲ್ಲಿ ಕಡಿಮೆಯಿರುತ್ತದೆ. ತಜ್ಞರು ಸೂಚಿಸಿರುವ ಕೀಟನಾಶಕಗಳು ಸರಿಯಾದ ಪರಿಣಾಮ ನೀಡದೆ ಅವುಗಳನ್ನು ಅಥವಾ ಪ್ರಮಾಣವನ್ನು ಬದಲಿಸುವಾಗ ತಜ್ಞರ ಸಲಹೆಯನ್ನು ಮತ್ತೆ ಪಡೆಯಲೇ ಬೇಕು.

ವಿದರ್ಭದ ದುರಂತದ ಘಟನೆಗಳು ಮತ್ತೆ ಮರುಕಳಿಸದಂತೆ, ದೇಶದ ಎಲ್ಲೆಡೆ ಸುಧಾರಣಾ              ಕ್ರಮಗಳನ್ನು ಜರುಗಿಸುವ ಕಾಲ ಬಂದಿದೆ. ರಾಜ್ಯ ಸರಕಾರಗಳು ಕೀಟ ನಾಶಕಗಳ ಧಾರಕಗಳಿಗೆ ಸುರಕ್ಷತೆಯನ್ನು ಸುಲಭವಾಗಿ ಗುರುತಿಸಬಲ್ಲ ಕಲರ್ ಬ್ಯಾಂಡ್ ಗಳನ್ನು ನಿಗದಿಪಡಿಸ ಬೇಕು.  ಅಲ್ಲದೆ ಸಿಂಪಡಿಸುವ ಕೂಲಿಕಾರರಿಗೆ ಮತ್ತು ರೈತರಿಗೆ ಸೂಕ್ತ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಗಳಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳು ಬೇಕೆಂದು ಗುರುತಿಸಿ, ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಸೂಕ್ತ ತಿಳುವಳಿಕೆ ಮತ್ತು ತರಬೇತಿಯ ಶಿಭಿರಗಳನ್ನು ನಡೆಸಬೇಕು. ರಾಸಾಯನಿಕ ತಯಾರಿಸುವ ಕಂಪನಿಗಳ ಸಹಾಯವನ್ನು ತರಬೇತಿ ನೀಡುವಲ್ಲಿ  ಗ್ರಾಮದ ಅಧಿಕಾರಿಗಳು ಪಡೆಯಬೇಕು.

ವಿದರ್ಭದಲ್ಲಿನ  ದುರಂತ ಎಲ್ಲಿಯೂ ಮರುಕಳಿಸದಂತೆ ಆಗ ಬೇಕಾದರೆ ರೈತರು ಸರಿಯಾದ                 ಅನುಸ್ಟಾನದಲ್ಲಿ ಯಾವುದೇ ರೀತಿಯ ಅಸಡ್ಡೆ ಮಾಡಬಾರದು. ಕೃಷಿ ಪ್ರಧಾನ ದೇಶದಲ್ಲಿ  ಕೃಷಿಕರ ಒಳಿತು ಮತ್ತು  ಯಶಸ್ಸು ತುಂಬ ಮುಖ್ಯ. ಔಷಧ ಕಂಪನಿಗಳ ನಿಯಮ ಬಾಹಿರ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಅವುಗಳನ್ನು ಕಠಿಣ ದಂಡನೆಗೆ ಒಳಪಡಿಸಲೇಬೇಕು. ನ್ಯಾಯಪರತೆಯ ಖಾತ್ರಿ ಯಾವುದೇ  ಸಮಾಜದ ಮೂಲಭೂತ ಲಕ್ಷಣ ಎಂಬುದನ್ನು ನಾವೆಲ್ಲರು ಮರೆಯಬಾರದು    

                               

                               

 


Tuesday, 10 July 2012

ಮೂದಲ ದಿನ ಮೌನ ಅಳುವೆ ತುಟಿಗೆ ಬಂದಂತೆ


ಎಲ್ಲ ಮಕ್ಕಳ್ಳು ಒಂದೆ ರೀತಿ ಇರಲ್ಲ. ಅದೇ  ರೀತಿ ಎಲ್ಲ ಅಮ್ಮಂದಿರೂ ಒಂದೆ ರೀತಿ ಇರಲ್ಲ. ಒಬ್ಬೂಬ್ಬರದ್ದು ಒಂದೂAದು ರೀತಿ ಹಾಗೂ  ವಿಭಿನ್ನ ಅನುಭವಗಳು ಇರುತ್ತವೆ.
ನಾಚಿಕೆಯ ಸ್ವಬಾವದ ಮಕ್ಕಳಿದ್ದಾಗ ಶಾಲೇಯ ವಾತಾವರಣಕ್ಕೆ ಹೇಗೆ ಹೋಂದಿ ಕೋಳ್ಳುತ್ತಾರೆ  ಎಂಬ ಆತಂಕ ಹೆಚ್ಚಿನ ತಾಯಂದಿರನ್ನ ಕಾಡುವುದು ಸಹಜ. ಭವಿಷ್ಯದ ದೃಷ್ಟಿಯಿಂದ ಆಯಾ ವಯಸ್ಸಿಗೆ ಮಾಡ ಬೇಕಾದನ್ನು ಮಾಡಲೇ ಬೇಕು.      
ಹೀಗಾಗಿ ಪ್ರತಿದಿನ ಮಗುವಿಗೆ ಮನ್ಸ ಇಲ್ಲದಿದ್ದರು, ಮಗುವಿಗೆ ಇಷ್ಟವಾಗುವಂತೆ ಮಾತಿನಲ್ಲಿ ಮರಳುಮಾಡಿ ಮನ ವಲಸಿ ಶಾಲೇಗೆ ಕಳಿಸುವ ಪ್ರಯತ್ನವನ್ನು ಪ್ರತಿ ತಾಯಿಯು ಮಾಡುತ್ತಾಳೆ. ಆದರೆ ಇಂದಿನ ಮಕ್ಕಳ ಮುಂದೆ ಯಾವುದೆ ತಂತ್ರಗಳೂ ನಡೆಯುವುದಿಲ್ಲ . ತಮ್ಮ ಅನುಭವಕ್ಕೆ ಬಂದ ಮೇಲೆ ಅವರು ಯಾವುದನ್ನೆ ಆದರು ಒಪ್ಪುವುದು. ಮನೆಯಲ್ಲಿನ ನಿತ್ಯದ ಈ ಗಟನೆಯನ್ನ ನೋಡುವಾಗ, ನಾನು ಶಾಲೇಗೆ ಹೋದ ಮೂದಲ ದಿನಗಳ ನೇನಪಾಗುತ್ತದೆ. ನಾನು ಕೂಡಾ ಆ ದಿನಗಳಲ್ಲಿ ತಿಂಗಳೂಗಳ ಕಾಲ ಅತ್ತಿದ್ದೆ. ಕೂನೆಗೊಂದು ದಿನ ತಂದೆ ಆ ಶಾಲೇಯನ್ನೆ ಬೀಡಿಸಿ ಬೇರೂಂದು ಶಾಲೇಗೆ ನನ್ನ ಸೇರಿಸಿದಾಗಲೇ, ನಾನು ಶಾಲೇ ಎಂಬ ಬಯದಿಂದ ಹೂರ ಬಂದದ್ದು.
ಹಾಗಾದರೆ ಸಮಸ್ಯೆ ಮಗುವಿನಲ್ಲಿರುವುದೇ? ಅಥವಾ ಶಾಲೇಯಲ್ಲಿರುವುದೇ? ಇದು ಇತ್ತಿಚೆಗೆ ನನ್ನ ಮಗ ಶಾಲೇಗೆ ಹೋಗಲು ಪ್ರಾರಂಭಿಸಿದಾಗಿನಿAದ ಕಾಡುತ್ತಿರುವ ಪ್ರಶ್ನೇ.
ನನ್ನ ಅನುಭವದ ಪ್ರಕಾರ ಈ ಸಮಸ್ಯೆಗೆ  ಕಾರಣಗಳು ಎರಡು ಕಡೆಗಳಲ್ಲಿವೆ. ಮಗು ತಂದೆ ತಾಯಿಯರ ಅತೀಯಾದ ಅಕ್ಕರೆಯಲ್ಲಿ ಬೇಳೆದಾಗ ಹೋರ ಜಗತ್ತಿನ ಹೋಸ ಸಂಭAಧಗಳಿಗೆ ಬೇಗ ಹೋಂದಿ ಕೂಳ್ಳುವಲ್ಲಿ ಕಷ್ಟವಾಗುತ್ತದೆ. ಇಂಥಹ ವಾತಾವರಣದಲ್ಲಿ ಬೇಳೆದ ಹೆಚ್ಚಿನ ಮಕ್ಕಳಿಗೆ ಹೋಸಬರಿಂದ ಬಯ,  ಹಾಗೂ ನನಗೆನಾದರ ಅಂದಾರು ಅನ್ನುವ ಭಯದಿಂದಾಗಿ ಮಗು ಎಲ್ಲರೀಂದಲು ದುರಇರುವ ಪ್ರಯತ್ನವನ್ನು ಮಾಡುತ್ತದೇ.
ಇನ್ನೂ ಮೂದಲ ದಿನದಿಂದಲೇ ಶಾಲೇಗಳಲ್ಲಿ ಮಕ್ಕಳನ್ನು ಕಣ್ಣಲ್ಲೇ ಹೇದರಿಸುವ ಮೇಷ್ಟುçಗಳು ಸಿಕ್ಕರಂತು ಮುಗಿದೇ ಹೋಯತ್ತು. ಪ್ರತಿ ಮಗುವಿಗೂ ಶಾಲೇಯಲ್ಲಿ ಮನೆಯ ವಾತಾವರಣದ ಅನುಭವ ಹಾಗೂ ಆ ಆತ್ಮೀಯತೆಯನ್ನು ತೊರಿಸಿದಾಗ ಅಥವಾ ವದಗಿಸಿದಗ ಮಾತ್ರ ಮಕ್ಕಳು ಶಾಲೇಗೆ ಹೋಗುವ ಭಯದಿಂದ ಹೋರ ಬರ ಬಹುದೇನೂ.
ಈ ನಿಟ್ಟಿನಲ್ಲಿ ನನಗಿನ್ನು ಊತ್ತರ ಸಿಕ್ಕಿಲ್ಲ.