Tuesday, 10 July 2012

ಮೂದಲ ದಿನ ಮೌನ ಅಳುವೆ ತುಟಿಗೆ ಬಂದಂತೆ


ಎಲ್ಲ ಮಕ್ಕಳ್ಳು ಒಂದೆ ರೀತಿ ಇರಲ್ಲ. ಅದೇ  ರೀತಿ ಎಲ್ಲ ಅಮ್ಮಂದಿರೂ ಒಂದೆ ರೀತಿ ಇರಲ್ಲ. ಒಬ್ಬೂಬ್ಬರದ್ದು ಒಂದೂAದು ರೀತಿ ಹಾಗೂ  ವಿಭಿನ್ನ ಅನುಭವಗಳು ಇರುತ್ತವೆ.
ನಾಚಿಕೆಯ ಸ್ವಬಾವದ ಮಕ್ಕಳಿದ್ದಾಗ ಶಾಲೇಯ ವಾತಾವರಣಕ್ಕೆ ಹೇಗೆ ಹೋಂದಿ ಕೋಳ್ಳುತ್ತಾರೆ  ಎಂಬ ಆತಂಕ ಹೆಚ್ಚಿನ ತಾಯಂದಿರನ್ನ ಕಾಡುವುದು ಸಹಜ. ಭವಿಷ್ಯದ ದೃಷ್ಟಿಯಿಂದ ಆಯಾ ವಯಸ್ಸಿಗೆ ಮಾಡ ಬೇಕಾದನ್ನು ಮಾಡಲೇ ಬೇಕು.      
ಹೀಗಾಗಿ ಪ್ರತಿದಿನ ಮಗುವಿಗೆ ಮನ್ಸ ಇಲ್ಲದಿದ್ದರು, ಮಗುವಿಗೆ ಇಷ್ಟವಾಗುವಂತೆ ಮಾತಿನಲ್ಲಿ ಮರಳುಮಾಡಿ ಮನ ವಲಸಿ ಶಾಲೇಗೆ ಕಳಿಸುವ ಪ್ರಯತ್ನವನ್ನು ಪ್ರತಿ ತಾಯಿಯು ಮಾಡುತ್ತಾಳೆ. ಆದರೆ ಇಂದಿನ ಮಕ್ಕಳ ಮುಂದೆ ಯಾವುದೆ ತಂತ್ರಗಳೂ ನಡೆಯುವುದಿಲ್ಲ . ತಮ್ಮ ಅನುಭವಕ್ಕೆ ಬಂದ ಮೇಲೆ ಅವರು ಯಾವುದನ್ನೆ ಆದರು ಒಪ್ಪುವುದು. ಮನೆಯಲ್ಲಿನ ನಿತ್ಯದ ಈ ಗಟನೆಯನ್ನ ನೋಡುವಾಗ, ನಾನು ಶಾಲೇಗೆ ಹೋದ ಮೂದಲ ದಿನಗಳ ನೇನಪಾಗುತ್ತದೆ. ನಾನು ಕೂಡಾ ಆ ದಿನಗಳಲ್ಲಿ ತಿಂಗಳೂಗಳ ಕಾಲ ಅತ್ತಿದ್ದೆ. ಕೂನೆಗೊಂದು ದಿನ ತಂದೆ ಆ ಶಾಲೇಯನ್ನೆ ಬೀಡಿಸಿ ಬೇರೂಂದು ಶಾಲೇಗೆ ನನ್ನ ಸೇರಿಸಿದಾಗಲೇ, ನಾನು ಶಾಲೇ ಎಂಬ ಬಯದಿಂದ ಹೂರ ಬಂದದ್ದು.
ಹಾಗಾದರೆ ಸಮಸ್ಯೆ ಮಗುವಿನಲ್ಲಿರುವುದೇ? ಅಥವಾ ಶಾಲೇಯಲ್ಲಿರುವುದೇ? ಇದು ಇತ್ತಿಚೆಗೆ ನನ್ನ ಮಗ ಶಾಲೇಗೆ ಹೋಗಲು ಪ್ರಾರಂಭಿಸಿದಾಗಿನಿAದ ಕಾಡುತ್ತಿರುವ ಪ್ರಶ್ನೇ.
ನನ್ನ ಅನುಭವದ ಪ್ರಕಾರ ಈ ಸಮಸ್ಯೆಗೆ  ಕಾರಣಗಳು ಎರಡು ಕಡೆಗಳಲ್ಲಿವೆ. ಮಗು ತಂದೆ ತಾಯಿಯರ ಅತೀಯಾದ ಅಕ್ಕರೆಯಲ್ಲಿ ಬೇಳೆದಾಗ ಹೋರ ಜಗತ್ತಿನ ಹೋಸ ಸಂಭAಧಗಳಿಗೆ ಬೇಗ ಹೋಂದಿ ಕೂಳ್ಳುವಲ್ಲಿ ಕಷ್ಟವಾಗುತ್ತದೆ. ಇಂಥಹ ವಾತಾವರಣದಲ್ಲಿ ಬೇಳೆದ ಹೆಚ್ಚಿನ ಮಕ್ಕಳಿಗೆ ಹೋಸಬರಿಂದ ಬಯ,  ಹಾಗೂ ನನಗೆನಾದರ ಅಂದಾರು ಅನ್ನುವ ಭಯದಿಂದಾಗಿ ಮಗು ಎಲ್ಲರೀಂದಲು ದುರಇರುವ ಪ್ರಯತ್ನವನ್ನು ಮಾಡುತ್ತದೇ.
ಇನ್ನೂ ಮೂದಲ ದಿನದಿಂದಲೇ ಶಾಲೇಗಳಲ್ಲಿ ಮಕ್ಕಳನ್ನು ಕಣ್ಣಲ್ಲೇ ಹೇದರಿಸುವ ಮೇಷ್ಟುçಗಳು ಸಿಕ್ಕರಂತು ಮುಗಿದೇ ಹೋಯತ್ತು. ಪ್ರತಿ ಮಗುವಿಗೂ ಶಾಲೇಯಲ್ಲಿ ಮನೆಯ ವಾತಾವರಣದ ಅನುಭವ ಹಾಗೂ ಆ ಆತ್ಮೀಯತೆಯನ್ನು ತೊರಿಸಿದಾಗ ಅಥವಾ ವದಗಿಸಿದಗ ಮಾತ್ರ ಮಕ್ಕಳು ಶಾಲೇಗೆ ಹೋಗುವ ಭಯದಿಂದ ಹೋರ ಬರ ಬಹುದೇನೂ.
ಈ ನಿಟ್ಟಿನಲ್ಲಿ ನನಗಿನ್ನು ಊತ್ತರ ಸಿಕ್ಕಿಲ್ಲ.