ಯಾವುದೇ ರಾಜಕೀಯ ಧಾರ್ಮಿಕ ಅಥವಾ ಸಂಘಟಿತ ವಿಚಾರಗಳೂಂದಿಗೆ ಗುರುತಿಸಿಕೊಂಡರೆ ದೈನಂದನ ಜೀವನದ ಕಷ್ಠ, ವ್ಯಸನಗಳಿಂದ ಒಳ್ಳೆಯ ಬಿಡುಗಡೆಸಿಗುತ್ತದೆ. ಹೀಗಾಗಿ ಜಗತ್ತಿನ ವಿದ್ಯಮಾನಗಳ ಬಗ್ಗೆ ಸರಳನುಡಿಗಳನ್ನ ಬಳಸಿ ನಮ್ಮ ಟೂಳ್ಳುತನಗಳನ್ನ ಮರೆಮಾಚಿಕೂಳ್ಳುತ್ತೆವೆ. ಆದರೆ ಇದು ಮನಸ್ಸಿಗೆ ಗೂತ್ತಿರುತ್ತದೆ. ಅದಕ್ಕೆ ಯಾವಾಗಲು ಎಲ್ಲ ಗೂತ್ತಿದ್ದು ನಾವು ನಮ್ಮನ್ನ ಮೂದಲು ವಂಚಿಸಿಕೂಳ್ಳುತ್ತೆವೆ. ಈ ಕಾರಣಗಳಿಂದಾಗಿ ರಾಜಕೀಯ ಹಾಗೂ ಧಾರ್ಮಿಕ ಉನ್ಮಾದಗಳಿಗೆ ಮತ್ತು ಭಾವುಕತನಕ್ಕೆ ಬೇಗ ದಾಸರಾಗಿ ಬೀಡುತ್ತೆವೆ. ಹೀಗಾಗಿ ರಾಜಕೀಯ ಎಂಬುದು ಪರಿಣಾಮಗಳೂಂದಿಗೆ ಮಾಡಿಕೂಂಡ ಒಪ್ಪಂದ ಹಾಗೂ ಆಚರಣೆಗಳೂ ಪಲಾಯನವಾದಕ್ಕಾಗಿ ಮಾಡಿಕೂಂಡ ಅನುಕರಣೆಗಳು ಎಂಬುದು ನಮ್ಮ ಅರಿವಿಗೆ ಬರುವುದೆ ಇಲ್ಲ.
ಈ ಮೇಲಿನ ಮಾತುಗಳನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು ಯಾಕೆಂದರೆ, ನಮ್ಮ ಆಸುಪಾಸಿನಲ್ಲಿರುವ ಹೆಚ್ಚಿನ ಜನರಲ್ಲಿ ಈ ರೀತಿಯ ಉನ್ಮಾದ ಕತೆಯನ್ನು ನಾವು ದಿನನಿತ್ಯವೂ ಕಾಣುತ್ತೇವೆ ಹಾಗಾದರೆ ಈ ಉನ್ಮಾದತೆ ಯಿಂದ ಮುಕ್ತರಾಗಿ ಬದುಕುತ್ತಿರುವವರು ಯಾರು ಈ ಉನ್ಮಾದ ಕತೆಯ ವ್ಯಸನಕ್ಕೆ ಒಳಗಾಗುವುದು ಆದರೂ ಯಾಕೆ ? ಈ ಪ್ರಶ್ನೆಗೆ ಉತ್ತರವನ್ನು ನಾವೆಲ್ಲರೂ ಕಂಡುಕೊಳ್ಳಲೆ ಬೇಕು. ಯಾಕೆಂದರೆ ಪ್ರತಿಯೊಬ್ಬರು ಸಂತೋಷದಿಂದ ಬದುಕ ಬಯಸುತ್ತೆವೆ.
ಉನ್ಮಾದಕತೆ ಬಗ್ಗೆ ವೈದ್ಯಕೀಯ ವಿಜ್ಞಾನ ಏನು ಹೇಳುತ್ತೆ ಅನ್ನುವುದನ್ನ
ಮೊದಲು ತಿಳಿದುಕೊಳ್ಳೋಣ. ಉನ್ಮಾದ ಎಂದರೆ ಅಸಹಜವಾಗಿ ಮನಸ್ಸನ್ನ ಉತ್ತೇಜನಗೊಳಿಸುವ ಅಥವಾಶಕ್ತಿಯ ಮಟ್ಟವನ್ನು ಉದ್ದಿಪನಗೊಳಿಸುವುದು ಎಂದು,ಕೆಲವು ಮನಶಾಸ್ತ್ರೀಯ ರೋಗನಿರ್ಣಯದಲ್ಲಿ ಗುರುತಿಸುತ್ತಾರೆ. ಒಟ್ಟಿನಲ್ಲಿ ಮಾನಸಿಕ ರೋಗಲಕ್ಷಣಗಳನ್ನು ಉಂಟುಮಾಡುವ ಒಂದು
ವಿಧದ ಮಾನಸಿಕ ಅವ್ಯವಸ್ಥೆ. ನಮಗೆ ಗೊತ್ತಿರುವ ಯಾವ ಜೈವಿಕ ಅಥವಾ ಶಾರೀರಿಕ ರೋಗನಿದಾನಕ್ಕೂ ಇದು
ಒಳಪಡುವುದಿಲ್ಲ. ಗಂಡು-ಹೆಣ್ಣು, ಚಿಕ್ಕವರು-ದೊಡ್ಡವರೆಂಬ ಭೇದವಿಲ್ಲದೆ ಯಾರಲ್ಲಾದರೂ ಇದು ತಲೆದೋರಬಹುದಾದರೂ
ಮಕ್ಕಳು/ಹದಿಹರೆಯದವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಾನಸಿಕವಾಗಿ ದುರ್ಬಲರೂ, ಉನ್ಮಾದ
ವ್ಯಕ್ತಿತ್ವ ಉಳ್ಳವರಲ್ಲಿ ಹೆಚ್ಚು. ಪುರುಷರಿಗೆ ಹೋಲಿಸಿದರೆ, ಸ್ತ್ರೀಯರಲ್ಲಿ ಹೆಚ್ಚು. ಈ ಸಂವೇದನ
ವಾಹಕ ಹಾಗೂ ಚಾಲಕ ರೋಗಲಕ್ಷಣಗಳು ನಾನಾ ಬಗೆಯಾಗಿ ಪ್ರಕಟವಾಗುತ್ತವೆ.
ಸ್ನೇಹ ಜೀವಿ